ಕೊನೆಗೂ ಊಹೆಗಳೆಲ್ಲಾ ಉಲ್ಟಾ ಹೊಡೆಯಿತು: ಶಮಿತಾ ಶೆಟ್ಟಿಗೆ ಅದೃಷ್ಟ ಕೈಕೊಟ್ಟೇ ಬಿಡ್ತು..

0
202

ಭಾರತೀಯ ಕಿರುತೆರೆಯ ಲೋಕದಲ್ಲಿ ಅತಿ ದೊಡ್ಡ ಹಾಗೂ ಅತ್ಯಂತ ವಿವಾದಿತ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿದೆ ಹಿಂದಿಯ ಬಿಗ್ ಬಾಸ್. ಬಿಗ್ ಬಾಸ್ ಜನಪ್ರಿಯತೆ ಯಾವ ಮಟ್ಟಕ್ಕೆ ಇದೆ ಎಂದರೆ ಪ್ರತಿ ಸೀಸನ್ ಕೂಡಾ ದೊಡ್ಡ ಸದ್ದು ಮಾಡುವುದೇ ಅಲ್ಲದೇ ಸಾಕಷ್ಟು ಚರ್ಚೆಗಳ ಕಾರಣವಾಗುವುದು ಮಾತ್ರವೇ ಅಲ್ಲದೇ ಟಿ ಆರ್ ಪಿ ವಿಚಾರದಲ್ಲಿ ಸಹಾ ಬೇರೆಲ್ಲಾ ಶೋ ಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತದೆ. ಈ ಜನಪ್ರಿಯತೆ ಹಿನ್ನೆಲೆಯಲ್ಲೇ ಇದೇ ಮೊದಲ ಬಾರಿಗೆ ಓಟಿಟಿ ಯಲ್ಲಿ ಸಹಾ ಬಿಗ್ ಬಾಸ್ ಆರಂಭವಾಗಿ, ಬಹಳ ಜನಪ್ರಿಯತೆ ಪಡೆದು, ಯಶಸ್ವಿ ಮೊದಲ ಸೀಸನ್ ಅನ್ನು ಮುಗಿಸಿದೆ.

ಓಟಿಟಿ ಬಿಗ್ ಬಾಸ್ ಕೇವಲ 42 ದಿನಗಳಿಗೆ ಮಾತ್ರವೇ ಸೀಮಿತವಾಗಿತ್ತು‌. ಒಟ್ಟು 14 ಜನ ಸ್ಪರ್ಧಿಗಳು ಮನೆಯನ್ನು ಪ್ರವೇಶ ಮಾಡಿದ್ದರು. ಅದರಲ್ಲಿ ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ ಕೂಡಾ ಒಬ್ಬರಾಗಿದ್ದರು. ಶಮಿತಾ ರಷ್ಟು ಜನಪ್ರಿಯತೆ ಪಡೆದವರು ಮನೆಯಲ್ಲಿ ಇನ್ನಾರೂ ಇರಲಿಲ್ಲ ಎನ್ನುವುದು ಕೂಡಾ ವಾಸ್ತವದ ವಿಷಯವಾಗಿತ್ತು. ಇನ್ನು ಶಮಿತಾ ಬಿಗ್ ಬಾಸ್ ಮನೆಯಲ್ಲಿ ಸಖತ್ ಸದ್ದು ಮಾಡಿದರು.

ಬಿಗ್ ಬಾಸ್ ಮನೆಯಲ್ಲಿ ಶಮಿತಾ ಅವರ ವರ್ತನೆ ದೊಡ್ಡ ಸುದ್ದಿಗಳಾದವು. ಅನಂತರ ರಾಕೇಶ್ ಬಾಪಟ್ ಗೆ ಹತ್ತಿರವಾದ ಮೇಲೆ ಎಲ್ಲೆಲ್ಲೂ ಶಮಿತಾ ಮತ್ತು ರಾಕೇಶ್ ವಿಷಯಗಳೇ ಸೆಂಟರ್ ಆಫ್ ದಿ ಅಟ್ರಾಕ್ಷನ್ ಆಯಿತು. ಅವರ ನಡುವೆ ಏನೋ ಇದೆ ಎಂದು ಸುದ್ದಿಗಳು ಹರಡಿದವು. ಶಮಿತಾ ವಿನ್ನರ್ ಆಗುವುದು ಖಚಿತ ಎನ್ನುವ ಮಾತುಗಳು ಎಲ್ಲೆಡೆಯಿಂದಲೂ ಕೇಳಿ ಬರಲು ಆರಂಭಿಸಿತು. ಅವರ ಜನಪ್ರಿಯತೆ ನೋಡಿ ಅದೇ ನಿಜವಾಗಬಹುದು ಎನ್ನಲಾಯಿತು.

ಅದಕ್ಕೆ ತಕ್ಕಂತೆ ಶಮಿತಾ ಫೈನಲ್ ಪ್ರವೇಶ ಮಾಡಿದ ಟಾಪ್ ಐದು ಸ್ಪರ್ಧಿಗಳಲ್ಲಿ ಶಮಿತಾ ಕೂಡಾ ಇದ್ದರು. ಅಲ್ಲಿಗೇ ಓಟಿಟಿ ಬಿಗ್ ಬಾಸ್ ನ ಮೊದಲ ಸೀಸನ್ ಶಮಿತಾ ಗೆಲ್ಲುವರು, ಟ್ರೋಫಿ ಅವರ ಪಾಲಾಗುವುದು ಎಂದೇ ಊಹೆ ಮಾಡಲಾಯಿತು. ಆದರೆ ಎಲ್ಲಾ ಅಂದುಕೊಂಡಂತೆ ಆಗಲೇ ಇಲ್ಲ. ಫೈನಲ್ ನಲ್ಲಿ ಎಲ್ಲರ ಊಹೆಗಳು ಸಹಾ ಉಲ್ಟಾ ಹೊಡೆದು, ಶಮಿತಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಹೌದು ಬಿಗ್ ಬಾಸ್ ಓಟಿಟಿ ಮೊದಲನೇ ಸೀಸನ್ ವಿನ್ನರ್ ಆಗಿ ಮತ್ತೊಬ್ಬ ಸ್ಪರ್ಧಿ ದಿವ್ಯ ಅಗರ್ವಾಲ್ ಹೊರಹೊಮ್ಮಿದ್ದು, ಟ್ರೋಫಿ ದಿವ್ಯ ಪಾಲಾಗಿದೆ. ಬಿಗ್ ಬಾಸ್ ಮನೆಯ ಮತ್ತೋರ್ವ ಸ್ಪರ್ಧಿ ನಿಶಾಂತ್ ಮೊದಲ ರನ್ನರ್‌ ಅಪ್ ಆದರೆ, ಶಮಿತಾ ಶೆಟ್ಟಿ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಬಿಗ್ ಬಾಸ್ ನಲ್ಲಿ ಶಮಿತಾರ ಆಪ್ತನಾಗಿ ಸುದ್ದಿಯಾಗಿದ್ದ ರಾಕೇಶ್ ಬಾಪಟ್ ಮೂರನೇ ರನ್ನರ್ ಆಪ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಮುಗಿದಿದೆ.

LEAVE A REPLY

Please enter your comment!
Please enter your name here