ಕೊನೆಗೂ ಈಡೇರಿತು ಕಾಫಿ ನಾಡು ಚಂದು ಬೇಡಿಕೆ: ಹಾಗಾದ್ರೆ ಬಿಗ್ ಬಾಸ್ ಕನಸು ನನಸಾಗುತ್ತಾ?

Entertainment Featured-Articles Movies News

ಸೋಶಿಯಲ್ ಮೀಡಿಯಾದ ಸೆನ್ಸೆಷನ್, ರೀಲ್ಸ್ ಜಗತ್ತಿನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ಕಾಫಿ ನಾಡು ಚಂದು ಸದ್ಯಕ್ಕೆ ಎಲ್ಲರಿಗೂ ಸಹಾ ಚಿರಪರಿಚಿತ. ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಚಂದು ಅವರ ವಿಡಿಯೋಗಳು ಕಾಣಿಸಿಕೊಳ್ಳುತ್ತಿವೆ. ಬರ್ತಡೇ ಸಾಂಗ್ ಗಳನ್ನು ತನ್ನದೇ ಶೈಲಿಯಲ್ಲಿ ಹಾಡುವ ಮೂಲಕ ಹೊಸದೊಂದು ಹವಾ ಸೃಷ್ಟಿ ಮಾಡಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಎಂದರೆ ಸದ್ಯಕ್ಕೆ ಅದು ಕಾಫಿನಾಡು ಚಂದು ಎನ್ನುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಗಿಂತ ಹೆಚ್ಚು ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ ಎನ್ನುವ ಹೆಗ್ಗಳಿಕೆಗೆ ಚಂದು ಪಾತ್ರವಾಗಿದ್ದಾರೆ. ಕಾಫಿ ನಾಡು ಚಂದು ಯಾವುದೇ ಹಾಡಿನ ವಿಡಿಯೋ ಮಾಡುವಾಗಲೂ ಮೊದಲಿಗೆ ತಾನು ಪುನೀತ್ ರಾಜಕುಮಾರ್ ಮತ್ತು ಶಿವಣ್ಣ ಅವರ ಅಭಿಮಾನಿ ಎಂದು ಹೇಳಿದ ನಂತರವೇ ಹಾಡನ್ನು ಹೇಳುವುದು ವಿಶೇಷ.

ಅಲ್ಲದೇ ಅವರು ತಾನು ಒಂದು ಸಲ ಶಿವಣ್ಣ ಅವರನ್ನು ಭೇಟಿ ಮಾಡಬೇಕು ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಈಗ ಅವರ ಆಸೆಯನ್ನು ಜೀ ಕನ್ನಡ ವಾಹಿನಿಯು ಪೂರ್ತಿ ಮಾಡಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಕಿರುತೆರೆಯ ಒಂದು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ಹಿಂದೆ ಒಂದು ವಿಡಿಯೋದಲ್ಲಿ ಚಂದು ಅವರು ಹಾಡೊಂದನ್ನು ಹಾಡುತ್ತಾ, ನಿರೂಪಕಿ ಅನುಶ್ರೀ ಅವರ ಮುಂದೆ ಶಿವಣ್ಣ ಅವರನ್ನು ಭೇಟಿ ಮಾಡಿಸುವಂತೆ ಮನವಿಯನ್ನು ಕೂಡಾ ಮಾಡಿದ್ದರು, ಆ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಈಗ ಕೊನೆಗೂ ಕಾಫಿ ನೋಡಿ ಚಂದು ಅವರ ಆಸೆ ಈಡೇರಿದೆ. ಶಿವರಾಜ್ ಕುಮಾರ್ ಅವರು ಜಡ್ಜ್ ಆಗಿರುವ ರಿಯಾಲಿಟಿ ಶೋನ ವೇದಿಕೆಯ ಮೇಲೆ ಕಾಫಿನಾಡು ಚಂದು ತಮ್ಮ ಅಭಿಮಾನ ನಟನನ್ನು ಭೇಟಿಯಾಗಿದ್ದಾರೆ. ವೇದಿಕೆಯ ಮೇಲೆ ನಿಂತು ತನ್ನ ನೆಚ್ಚಿನ ನಾಯಕನ ಮುಂದೆ ಹಾಡನ್ನು ಹಾಡಿದ್ದಾರೆ
ಅಲ್ಲದೇ ನೆಚ್ಚಿನ ನಟನಿಂದ ಚಪ್ಪಾಳೆಯನ್ನು ಪಡೆದುಕೊಂಡಿದ್ದಾರೆ. ಶೋ‌ ನ ಚಿತ್ರೀಕರಣದ ವೇಳೆಯಲ್ಲಿ ಮೊಬೈಲ್ ಒಂದರಲ್ಲಿ ರೆಕಾರ್ಡ್ ಆದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನ ಸೆಳೆದಿದೆ. ಕಾಫಿ ನಾಡು ಚಂದು ಅನುಶ್ರೀ ಅವರ ಜೊತೆಗೆ ಕೂಡಾ ಒಂದು ಹಾಡನ್ನು ಹಾಡಿದ್ದು, ಪ್ರಸ್ತುತ ಆ ವೀಡಿಯೋ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದೆ.

ಕಾಫಿನಾಡು ಚಂದು ಅವರ ಮನದ ಆಸೆಯನ್ನು ಈಡೇರಿಸಿದ್ದಕ್ಕೆ ಅನೇಕರು ಜೀ ಕನ್ನಡ ವಾಹಿನಿಗೆ ಧನ್ಯವಾದಗಳನ್ನು ಸಹಾ ತಿಳಿಸುತ್ತಿದ್ದಾರೆ. ಅನುಶ್ರೀ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಾಫಿನಾಡು ಚಂದು ಅವರು ತನ್ನನ್ನು ಭೇಟಿ ಮಾಡಿದ, ಹಾಡು ಹಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಇನ್ನು ಚಂದು ತಾನು ಬಿಗ್ ಬಾಸ್ ಮನೆಗೆ ಹೋಗಬೇಕು ಎನ್ನುವ ಆಸೆಯನ್ನು ಸಹಾ ವ್ಯಕ್ತಪಡಿಸಿದ್ದರು, ಅವರ ಆ ಆಸೆಯನ್ನು ಸಹಾ ಕಲರ್ಸ್ ವಾಹಿನಿಯು ಈಡೇರಿಸುವುದಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published.