ಕೊಡಗಿನ ಬೆಡಗಿ ರಶ್ಮಿಕಾ ಮದುವೆಯಾಗೋದು ತಮಿಳು ಹುಡುಗನನ್ನು? ಮತ್ತೊಮ್ಮೆ ಟ್ರೋಲ್ ಆದ ಕನ್ನಡತಿ
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದ್ದಲ್ಲಿ ಸುದ್ದಿಗಳಿಗೆ ಖಂಡಿತ ಕೊರತೆಯೇನಿಲ್ಲ ಎನ್ನುವಷ್ಟರ ಮಟ್ಟಿಗೆ ಸದ್ದು ಸುದ್ದಿಯಾಗುತ್ತಾರೆ ರಶ್ಮಿಕಾ. ಒಂದು ಕಡೆ ರಶ್ಮಿಕಾ ಟ್ರೋಲ್ ಗಳಿಗೆ ಗುರಿಯಾಗಿ ಸದ್ದು ಮಾಡಿದರೆ, ಇನ್ನೊಂದು ಕಡೆ ರಶ್ಮಿಕಾ ನೀಡುವ ಹೇಳಿಕೆಗಳಿಂದಾಗಿಯೂ ಸುದ್ದಿಯಾಗುತ್ತಾರೆ. ನಟಿ ರಶ್ಮಿಕಾ ಒಂದರ ನಂತರ ಮತ್ತೊಂದು ಎನ್ನುವ ಹಾಗೆ ಸಾಲು, ಸಾಲು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಪಂಚಭಾಷಾ ತಾರೆಯಾಗಿ ಜನಪ್ರಿಯತೆ ಪಡೆದಿದ್ದಾರೆ. ಪ್ರಸ್ತುತ ತಮಿಳು, ಮಲೆಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಅಭಿನಯದ ಹೊಸ ತಮಿಳು ಸಿನಿಮಾ ಮುಹೂರ್ತ ನಡೆದಿದೆ.
ಹೌದು, ನಟಿ ರಶ್ಮಿಕಾ ತಮಿಳಿನಲ್ಲಿ ತಮ್ಮ ಎರಡನೇ ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಈ ಮೊದಲು ರಶ್ಮಿಕಾ ತಮಿಳಿನಲ್ಲಿ ಕಾರ್ತಿ ಜೊತೆ ಒಂದು ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈಗ ತಮಿಳಿನ ಮತ್ತೋರ್ವ ಸ್ಟಾರ್ ನಟ ದಳಪತಿ ವಿಜಯ್ ಅವರ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿದ್ದು, ನಿನ್ನೆಯಷ್ಟೇ ಸಿನಿಮಾದ ಮುಹೂರ್ತ ಭರ್ಜರಿಯಾಗಿ ನಡೆದಿದೆ. ಈ ವೇಳೆ ನಟ ವಿಜಯ್ ಗೆ ದೃಷ್ಟಿ ತೆಗೆದ ರಶ್ಮಿಕಾ ಸಖತ್ ಸುದ್ದಿಯಾಗಿದ್ದು ಉಂಟು. ಈಗ ಅದರ ಬೆನ್ನಲ್ಲೇ ರಶ್ಮಿಕಾ ಅಲ್ಲಿ ಹೇಳಿದ ಮಾತೊಂದು ಮತ್ತೊಮ್ಮೆ ಟ್ರೋಲ್ ಗೆ ಕಾರಣವಾಗಿದೆ.
ಈ ಹಿಂದೆ ರಶ್ಮಿಕಾ ತಮಿಳು ಸಿನಿಮಾದಲ್ಲಿ ನಟಿಸಿದ್ದ ವೇಳೆ ಸಂದರ್ಶನವೊಂದರಲ್ಲಿ ತನಗೆ ತಮಿಳು ಸಂಸ್ಕೃತಿ, ಸಂಪ್ರದಾಯ ಬಹಳ ಇಷ್ಟ, ನಾನು ತಮಿಳು ಮನೆತನದ ಸೊಸೆಯಾಗಲು ಬಯಸುತ್ತೇನೆ ಎಂದು ಹೇಳುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದರು. ಈಗ ಮತ್ತೊಮ್ಮೆ ಅಂತಹುದೇ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಈ ಹೊಸ ವಿಚಾರವೀಗ ಮಾದ್ಯಮಗಳ ಸುದ್ದಿಗಳಲ್ಲಿ ಹರಿದಾಡಿದೆ, ಕೆಲವರು ತಮ್ಮ ಅಸಮಾಧಾನವನ್ನು ಸಹಾ ಹೊರಹಾಕಿದ್ದಾರೆ.
ಇಷ್ಟಕ್ಕೂ ಏನಿದು ಸುದ್ದಿ? ಎನ್ನುವುದಾದರೆ, ರಶ್ಮಿಕಾ ತಮಿಳಿನ ಹೊಸ ಸಿನಿಮಾ ಮುಹೂರ್ತ ಸಮಯದಲ್ಲಿ ತಾನು ಯಾವ ಹುಡುಗನನ್ನು ಮದುವೆಯಾಗಬೇಕು ಎನ್ನುವ ವಿಚಾರವನ್ನು ಹೇಳಿದ್ದಾರೆ ಎನ್ನಲಾಗಿದ್ದು, ಸಿನಿಮಾ ಮುಹೂರ್ತದ ವೇಳೆ ರಶ್ಮಿಕಾ ತಾನು ತಮಿಳು ಹುಡುಗನನ್ನು ಮದುವೆಯಾಗಲು ಬಯಸಿರುವುದಾಗಿ ಹೇಳಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ರಶ್ಮಿಕಾ ಹೇಳಿದ್ದಾರೆನ್ನಲಾಗುತ್ತಿರುವ ಈ ಮದುವೆ ಗಂಡಿನ ವಿಚಾರವೀಗ ಭಾರೀ ಚರ್ಚೆಗೆ ಕಾರಣವಾಗಿದ್ದು , ಮತ್ತೊಮ್ಮೆ ರಶ್ಮಿಕಾ ಟ್ರೋಲ್ ಆಗೋದ್ರಲ್ಲಿ ಅನುಮಾನವೇ ಇಲ್ಲ.