ಕೊಟ್ಟ ಮಾತಿನಂತೆ ನಡೆದ ಆನಂದ್ ಮಹೀಂದ್ರಾ:1ರೂ. ಇಡ್ಲಿ ಅಜ್ಜಿಗೆ ಕೊಟ್ರು ಅಮ್ಮಂದಿರ ದಿನಕ್ಕೆ ಗಿಫ್ಟ್

Entertainment Featured-Articles News Viral Video

ತಮಿಳು ನಾಡಿನ ವಡಿವೇಲಪಾಲಯಂ ನಲ್ಲಿ ಒಂದು ರೂ. ಗೆ ಇಡ್ಲಿ ಮಾರುವ ವೃದ್ಧೆ ಕಮಲಾಥಲ್ ಅವರ ಬಗ್ಗೆ ಕೆಲವು ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಆಕೆ ಕಳೆದ ಹಲವು ವರ್ಷಗಳಿಂದಲೂ, ಬಡವರು, ಕೂಲಿ ಕಾರ್ಮಿಕರಿಗಾಗಿ ಒಂದೇ ರೂಪಾಯಿಗೆ ಇಡ್ಲಿಯನ್ನು ಮಾರಾಟ ಮಾಡುತ್ರಿರುವ ವಿಷಯ ಮಾದ್ಯಮಗಳಲ್ಲಿ ಸುದ್ದಿಯಾದಾಗ ಜನರು ಇದಕ್ಕೆ ಅಪಾರವಾದ ಮೆಚ್ಚುಗೆಯನ್ನು ಸೂಚಿಸಿದ್ದರು. ತಾನೇ ಬಡತನದಲ್ಲಿ ಇದ್ದರೂ ಸಹಾ ಆಕೆ ಅನ್ಯರಿಗಾಗಿ, ವಿಶೇಷವಾಗಿ ಬಡವರ ಬಗ್ಗೆ ಮಾಡುವ ಆಲೋಚನೆ ಹಾಗೂ ಈ ವಯಸ್ಸಿನಲ್ಲೂ ಪಡುವ ಶ್ರಮ ಕಂಡು ಜನರು ಶ್ಲಾಘಿಸಿದ್ದರು.

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಚಾರವನ್ನು ಶೇರ್ ಮಾಡಿಕೊಂಡು, ಆ ವೃದ್ಧ ಮಹಿಳೆಗೆ ನೆರವನ್ನು ನೀಡುವ ಮಾತನ್ನು ಆಡಿದ್ದರು. ಅಂದು ಆನಂದ್ ಮಹೀಂದ್ರಾ ಅವರು ಆಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರು ವೃದ್ಧ ಮಹಿಳಿಗೆ ಅಮ್ಮಂದಿರ ದಿನದ ವಿಶೇಷವಾಗಿ ಒಂದು ಅಪರೂಪದ ಉಡುಗೊರೆಯನ್ನು ನೀಡಿದ್ದಾರೆ. ಆನಂದ್ ಮಹೀಂದ್ರಾ ಅವರ ಈ ಕಾರ್ಯಕ್ಕೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿವೆ.

ಹೌದು, ಉದ್ಯಮಿ ಆನಂದ್ ಮಹೀಂದ್ರಾ ಅವರು ಒಂದು ರೂಪಾಯಿಗೆ ಇಡ್ಲಿ ಮಾರುವ ಅಜ್ಜಿ ಕಮಲಾಥಲ್ ಅವರಿಗೆ ಒಂದು ಅಚ್ಚುಕಟ್ಟಾದ ಮನೆಯನ್ನು ನಿರ್ಮಾಣ ಮಾಡಿಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಷಯವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಅವರು, ಕೊಟ್ಟ ಮಾತಿನಂತೆ ಮನೆಯ ಉಡುಗೊರೆಯನ್ನು ನೀಡಲು ಶ್ರಮಿಸಿದ ನನ್ನ ತಂಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು, ವೀಡಿಯೋ ಶೇರ್ ಮಾಡಿದ್ದಾರೆ. ಅವರ ವೀಡಿಯೋಗೆ ಮೆಚ್ಚುಗೆಗಳು ಹರಿದು ಬರುತ್ತಿವೆ.

ನಿಸ್ವಾರ್ಥ ಸೇವೆ ಮಾಡುತ್ತಿರುವ ಆ ಅಮ್ಮನಿಗೆ ನೆರವು ನೀಡಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ ಎಂದು ಸಹಾ ಅವರು ಬರೆದುಕೊಂಡಿದ್ದಾರೆ. ಇನ್ನು ಆನಂದ್ ಮಹೀಂದ್ರಾ ಅವರು 3.5 ಸೆಂಟ್ ಭೂಮಿಯನ್ನು ನೀಡಿ, ಅದರಲ್ಲಿ ಒಂದು ಬೆಡ್ ರೂಂ ಇರುವ ಮನೆ ಹಾಗೂ ಅಜ್ಜಿ ಕ್ಯಾಂಟೀನ್ ನಡೆಸಲು ಅನುಕೂಲವಾಗುವಂತೆ ಮನೆಯ ನಿರ್ಮಾಣವನ್ನು ಮಾಡಿಕೊಡಲಾಗಿದೆ. ಆನಂದ್ ಮಹೀಂದ್ರಾ ಅವರ ಹಾಗೆ ದೊಡ್ಡ ದೊಡ್ಡ ಉದ್ಯಮಿಗಳು ಆಲೋಚನೆ ಮಾಡಿದರೆ, ದೇಶದಲ್ಲಿ ಅದೆಷ್ಟೋ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆ ಖಂಡಿತ ಬರುತ್ತದೆ.

Leave a Reply

Your email address will not be published. Required fields are marked *