ಕೈ ಕೈ ಹಿಡಿದು ತಮ್ಮ ಪ್ರೀತಿಗೆ ‘ಶರಾ’ ಬರೆದ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್: ಇದು ಪ್ರೇಮದ ಚಿಹ್ನೆ ಹೌದಾ??
ವಯಸ್ಸು 42 ಆದರೂ ಮದುವೆಯಾಗದೇ ಉಳಿದಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಶೆಟ್ಟಿ ಅವರನ್ನು ಅನೇಕ ಸಂದರ್ಭಗಳಲ್ಲಿ, ಅನೇಕ ಸಂದರ್ಶನಗಳಲ್ಲಿ ನೀವು ಮದುವೆಯ ಬಗ್ಗೆ ಏಕೆ ಆಲೋಚನೆ ಮಾಡಿಲ್ಲವೆಂದು ಪ್ರಶ್ನೆ ಮಾಡಿದಾಗಲೆಲ್ಲಾ ಶಮಿತಾ ತಾನು ಮದುವೆಗೆ ಸಿದ್ಧವಿಲ್ಲ, ನನಗೆ ಸರಿಯಾದ ಜೋಡಿ ಎನಿಸುವ, ಮನಸ್ಸಿಗೆ ಹಿಡಿಸಿದ ಹುಡುಗ ಇನ್ನೂ ಸಿಕ್ಕಿಲ್ಲ, ಅಲ್ಲದೇ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಪತಿ, ಪತ್ನಿ ಎನ್ನುವ ಭಾವನೆಗಳು ಸಹಾ ಇರುವುದಿಲ್ಲ ಎಂದು ಹೇಳುತ್ತಾ, ತಾನೇಕೆ ಮದುವೆಯಾಗಿಲ್ಲ ಎನ್ನುವುದನ್ನು ವಿವರಿಸಿ ಹೇಳುತ್ತಿದ್ದರು.
ಆದರೆ ಓಟಿಟಿ ಯಲ್ಲಿ ಮೂಡಿ ಬಂದ ಬಿಗ್ ಬಾಸ್ ಶಮಿತಾ ಅವರ ಜೀವನದಲ್ಲಿ ಒಂದು ಹೊಸ ಪ್ರೇಮದ ಅಲೆಯನ್ನು ಮೂಡಿಸಿದೆ. ಹೌದು ಬಿಗ್ ಬಾಸ್ ಓಟಿಟಿಯ ಮೊದಲನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಶಮಿತಾ ಅವರಿಗೆ ಮನೆಯೊಳಗೆ ಅವರ ಪ್ರೀತಿ ಸಿಕ್ಕಿದೆ. ಬಿಗ್ ಹೌಸ್ ನಲ್ಲಿ ಮತ್ತೋರ್ವ ಸ್ಪರ್ಧಿಯಾಗಿದ್ದ ರಾಕೇಶ್ ಬಾಪಟ್ ಜೊತೆಗೆ ಶಮಿತಾ ಆತ್ಮೀಯರಾಗಿದ್ದರು, ಆಗಲೇ ಅವರ ನಡುವೆ ಏನೋ ಇದೆ ಎನ್ನುವ ಮಾತುಗಳು ಸದ್ದು ಮಾಡಿದೆ.
ಬಿಗ್ ಬಾಸ್ ಮನೆಯಲ್ಲಿ ಶಮಿತಾ ಹಾಗೂ ರಾಕೇಶ್ ಬಾಪಟ್ ನಡುವಿನ ಆತ್ಮೀಯತೆ ಅವರ ನಡುವಿನ ಪ್ರೀತಿ ನೋಡಿ ಅವರ ಅಭಿಮಾನಿಗಳು ಸಹಾ ಅವರ ಜೋಡಿ ಚೆನ್ನಾಗಿದೆ, ನಿಜ ಜೀವನದಲ್ಲೂ ಅವರು ಜೋಡಿಯಾಗಲೀ ಎಂದು ಶುಭವನ್ನು ಹಾರೈಸಿದ್ದರು. ಶೋ ನಲ್ಲಿ ಸಹಾ ರಾಕೇಶ್ ಶಮಿತಾ ತನಗೆ ವಿಶೇಷ ಎಂದೂ, ಶೋ ನ ನಂತರ ಸಹಾ ನಮ್ಮ ಸ್ನೇಹ ಮುಂದುವರೆಯುತ್ತದೆ ಎನ್ನುವ ಮಾತನ್ನು ಹೇಳಿದ್ದರು. ಹೇಳಿದಂತೆ ಇದೀಗ ಶೋ ಮುಗಿದ ಮೇಲೆ ಇಬ್ಬರ ನಡುವೆ ಇರುವ ಪ್ರೀತಿಗೆ ಅಧಿಕೃತ ಮೊಹರು ಬಿದ್ದಿದೆ.
ಹೌದು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ರಾಕೇಶ್ ಹಾಗೂ ಶಮಿತಾ ಕೈ ಕೈ ಹಿಡಿದುಕೊಂಡು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರ ಈ ಫೋಟೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವುದರ ಜೊತೆಗೆ ಅಭಿಮಾನಿಗಳ ಕಡೆಯಿಂದ ಭರಪೂರ ಮೆಚ್ಚುಗೆ ಗಳು ಸಹಾ ಹರಿದು ಬರುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಈ ಫೋಟೋದಲ್ಲಿ ಒಂದು ಆಸಕ್ತಿಕರ ವಿಷಯವೂ ಇದೆ.
ಹಂಚಿಕೊಂಡಿರುವ ಫೋಟೋದಲ್ಲಿ ಯು ಅಂಡ್ ಐ ಎಂದು ಬರೆದುಕೊಂಡು, ಹೃದಯದ ಆಕಾರದ ಇಮೋಜಿ ಹಾಕಿ, ಅದರ ಕೆಳಗೆ ಶರಾ ಎಂದು ಬರೆದುಕೊಂಡಿದ್ದಾರೆ. ಶ ಎಂದರೆ ಶಮಿತಾ ಶೆಟ್ಟಿ ಹಾಗೂ ರಾ ಎಂದರೆ ರಾಕೇಶ್ ಎನ್ನುವ ಅರ್ಥವಾಗಿದೆ. ಈ ಫೋಟೋ ಮೂಲಕ ರಾಕೇಶ್ ಹಾಗೂ ಶಮಿತಾ ತಮ್ಮ ನಡುವಿನ ಈ ಒಲವಿಗೆ, ಪ್ರೀತಿಗೆ ಒಂದು ಶರಾ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಅವರು ಸದಾ ಜೊತೆಯಾಗಿರಲೆಂದು ಹಾರೈಸಿದ್ದಾರೆ.