ಕೈಯಲ್ಲಿ ಹಣ ನಿಲ್ಲದಿರಲು, ಜೀವನದಲ್ಲಿ ಯಶಸ್ಸು ಸಿಗದೇ ಇರಲು ಚಾಣಾಕ್ಯ ಕೊಟ್ಟ ಕಾರಣಗಳಿವು

Written by Soma Shekar

Published on:

---Join Our Channel---

ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಸಹಾ ಯಶಸ್ಸು ಎನ್ನುವುದು ದೊರೆಯುವುದಿಲ್ಲ.‌ ಎಷ್ಟು ಹಣವನ್ನು ಸಂಪಾದನೆ ಮಾಡಿದರೂ ಅದನ್ನು ಉಳಿಸಲಾಗುವುದಿಲ್ಲ ಅಥವಾ ಕೆಲವರು ಹಣ ನಮ್ಮ ಕೈಯಲ್ಲಿ ನಿಲ್ಲೋದಿಲ್ಲ ಎನ್ನುವ ಮಾತನ್ನು ಹೇಳೋದನ್ನು ನಾವು ಕೇಳಿರುತ್ತೇವೆ. ಏಕೆ ಹೀಗೆ?? ಎಂದು ಕಾರಣವನ್ನು ತಿಳಿಯುವ ಪ್ರಯತ್ನವನ್ನು ಅನೇಕರು ಮಾಡುತ್ತಾರೆ. ಈ ವಿಚಾರವಾಗಿ ಮಹಾನ್ ರಾಜಕಾರಣಿ ಹಾಗೂ ತನ್ನ ನೀತಿಗಳಿಂದ ಪ್ರಸಿದ್ಧನಾದ ಚಾಣಾಕ್ಯ ಏನು ಹೇಳುವನು ಎನ್ನುವುದನ್ನು ತಿಳಿಯೋಣ ಬನ್ನಿ. ಚಾಣಕ್ಯ ನ ಪ್ರಕಾರ ಯಶಸ್ಸು ಸಿಗದಿರುವ, ಹಣ ಕೈಯಲ್ಲಿ ನಿಲ್ಲದವರು ಇವರೇ..

ದೀರ್ಘ ಕಾಲ ನಿದ್ರೆ ಮಾಡುವವರು : ಅತಿಯಾಗಿ ನಿದ್ರೆ ಮಾಡುವ ವ್ಯಕ್ತಿಯು ಜೀವನದಲ್ಲಿ ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಣದ ದೇವತೆ ಶ್ರೀ ಮಹಾಲಕ್ಷ್ಮಿ ಯು ಹೀಗೆ ದೀರ್ಘಕಾಲ ನಿದ್ರಿಸುವವರನ್ನು ಇಷ್ಟಪಡುವುದಿಲ್ಲ. ಅಂತಹವರಿಗೆ ದೇವಿ ಲಕ್ಷ್ಮಿಯ ಕಟಾಕ್ಷವು ಸಿಗುವುದಿಲ್ಲ ಎಂದು ಚಾಣಾಕ್ಯನು ಹೇಳುತ್ತಾನೆ.

ಒರಟಾಗಿ ಮಾತನಾಡುವ ಜನರು : ಒರಟಾಗಿ ಮಾತನಾಡುವ, ಕಠಿಣ ಪದಗಳನ್ನು ಬಳಸುವವರು ಅಸಭ್ಯವಾಗಿ ವರ್ತಿಸುವವರನ್ನು ಮಹಾಲಕ್ಷ್ಮಿ ಯು ಇಷ್ಟಪಡುವುದಿಲ್ಲ. ಹೀಗೆ ಕಹಿಯಾಗಿ ಮಾತ‌ನಾಡುವ ಜನರಿಂದ ಅವರ ಸ್ನೇಹಿತರು, ಬಂಧುಗಳು ದೂರವಾಗುವುದು ಮಾತ್ರವೇ ಅಲ್ಲದೇ ಹಣವು ಕೂಡಾ ಅವರ ಕೈಯಲ್ಲಿ ನಿಲ್ಲುವುದಿಲ್ಲ.

ಅಶುದ್ಧವಾಗಿರುವವರು : ಪ್ರತಿನಿತ್ಯ ಸ್ನಾನ ಮಾಡುವುದು, ಹಲ್ಲುಜ್ಜಿ, ಶುಭ್ರವಾದ ವಸ್ತ್ರ ಧರಿಸುವುದು ಆರೋಗ್ಯದ ದೃಷ್ಟಿಯಿಂದ ಸಹಾ ಬಹಳ ಮುಖ್ಯವಾಗಿದೆ. ಎಲ್ಲಿ ಕೊಳಕು ಮತ್ತು ಕೊಳಕಿನಿಂದ ಬದುಕುವ ಜನರು ಇರುವರೋ, ಅಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ ಎಂದು ಚಾಣಕ್ಯನು ಹೇಳುವನು.
ಆದ್ದರಿಂದಲೇ ಸ್ವಚ್ಚತೆಗೆ ಪ್ರಾಮುಖ್ಯತೆಯನ್ನು ನೀಡಬೇಕು.

ಮೋಸ ವಂಚನೆ ಮಾಡುವವರು : ಕೆಲವರಿಗೆ ವಂಚನೆ ಹಾಗೂ ದ್ರೋಹ ಮಾಡುವುದೇ ಬದುಕಾಗಿರುತ್ತದೆ. ಇಂತಹವರು ಅಲ್ಪ ಸಮಯದ ವರೆಗೆ ಪ್ರಯೋಜನ ಪಡೆಯಬಹುದು. ಆದರೆ ಸತ್ಯ ಹೊರ ಬಂದ ದಿನ ಅವರನ್ನು ಯಾರೂ ನಂಬುವುದಿಲ್ಲ. ಅಂತಹವರಿಗೆ ಯಶಸ್ಸು ಎನ್ನುವುದು ದಕ್ಕಿದರೂ ಕೂಡಾ ಅದಕ್ಕೆ ಬೆಲೆ ಸಿಗುವುದಿಲ್ಲ.

ಅತಿಯಾಗಿ ತಿನ್ನುವ ಮಂದಿ : ಚಾಣಕ್ಯನು ಮನುಷ್ಯ ತನ್ನ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರವೇ ತಿನ್ನಬೇಕೆಂದು ಹೇಳುವರು. ಅಗತ್ಯಕ್ಕೆ ಮೀರಿದ ಆಹಾರ ಸೇವನೆ ರೋಗಗಳಿಗೆ ಆಹ್ವಾನವನ್ನು ನೀಡುತ್ತದೆ ಹಾಗೂ ಹಣ ಗಳಿಸುವ ಬದಲು, ಚಿಕಿತ್ಸೆಗಾಗಿ ಹಣ ಖರ್ಚಾಗುತ್ತದೆ. ಆದ್ದರಿಂದ ಆಹಾರ ಯಾವಾಗಲೂ ಹಿತ ಮಿತವಾಗಿರಬೇಕು.

Leave a Comment