ಕೇವಲ 7 ರೂ.ಗೆ 100 ಕಿಮೀ ಓಡುತ್ತೆ ಈ ಎಲೆಕ್ಟ್ರಿಕ್ ಬೈಕ್: ಲೈಸನ್ಸ್ ಬೇಡ್ವೇ ಬೇಡ, ಇದರ ಇನ್ನಷ್ಟು ವಿಶೇಷಗಳು ಇಲ್ಲಿವೆ.

Entertainment Featured-Articles News
74 Views

ಇತ್ತೀಚಿನ ದಿನಗಳಲ್ಲಿ ಜನರು ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಜನರು ವಾಹನವೊಂದನ್ನು ಕರೆದೆ ಮಾಡುವಾಗಲೇ ಪೆಟ್ರೋಲ್ ಬೆಲೆಯ ಬಗ್ಗೆ ಕೂಡ ಚಿಂತೆಯನ್ನು ಮಾಡುವಂತಾಗಿದೆ ಏಕೆಂದರೆ ದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆಯು ಸಾಮಾನ್ಯ ಜನರ ಖರ್ಚುಗಳನ್ನು ಹೆಚ್ಚಿಸುತ್ತಿದೆ ಹೊಸ ವಾಹನಕ್ಕೆ ಒಮ್ಮೆ ಬಂಡವಾಳ ಹೂಡಿದ್ದರು ಆನಂತರ ಪೆಟ್ರೋಲ್ ಬೆಲೆಗೆ ಭಯಪಡುವಂತಾಗಿದೆ ಆದ್ದರಿಂದಲೇ ಜನ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬದಲಾಗಿ ಪರಿಸರಪ್ರೇಮಿ ಜನಿಸಿರುವ ವಿದ್ಯುತ್ ಚಾಲಿತ ವಾಹನಗಳ ಕಡೆಗೆ ಗಮನವನ್ನು ಹರಿಸಿ ಆಸಕ್ತಿಯನ್ನು ತೋರಿಸುತ್ತಿದ್ದಾರೆ

ಪ್ರಸ್ತುತ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ದ್ವಿಚಕ್ರವಾಹನಗಳ ತಯಾರಿಕೆಯಲ್ಲಿ ದೊಡ್ಡ ದೊಡ್ಡ ವಾಹನ ತಯಾರಿಕಾ ಕಂಪನಿಗಳ ಜೊತೆಗೆ ಸ್ಟಾರ್ಟಪ್ ಕಂಪನಿಗಳು ಕೂಡ ಹೊಸ ವಿನ್ಯಾಸದ, ಹೊಸ ವೈಶಿಷ್ಟ್ಯಗಳನ್ನು ಇರುವಂತಹ ಬೈಕುಗಳನ್ನು ಮಾರುಟ್ಟೆಗೆ ಪರಿಚಯಿಸಲು ಮುಂದಾಗಿದೆ ಅಂತಹ ಒಂದು ಹೊಸ ಬೈಕುಗಳಲ್ಲಿ ಆಟಂ 1.0 ಕೂಡಾ ಸೇರಿದೆ. ಹೈದ್ರಾಬಾದ್ ಮೂಲದ ಒಂದು ಸ್ಟಾರ್ಪ್ ಅಪ್ ಕಂಪನಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಪರಿಚಯಿಸಿದೆ.

ಈ ಬೈಕ್ ನ ಬಗ್ಗೆ ಹೇಳುವುದಾದರೆ ಇದೊಂದು ಉತ್ತಮವಾದ ಕೆಫೆ ರೇಸರ್ ಬೈಕ್ ಆಗಿದ್ದು, ಕಂಪನಿಯ ಅಧಿಕೃತ ವೆಬ್ಸೈಟ್ ಮೂಲಕ ಲಭ್ಯವಿದ್ದು, ಆ ಮೂಲಕ ಈ ಹೊಸ ಎಲೆಕ್ಟ್ರಿಕ್ ಬೈಕ್ ಗಳನ್ನು ನಾವು ಖರೀದಿ ಮಾಡಬಹುದಾಗಿದೆ. ಈ ಹೊಸ ಎಲೆಕ್ಟ್ರಿಕ್ ಬೈಕ್ ನಲ್ಲಿ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ನಾವು ಕಾಣಬಹುದಾಗಿದ್ದು, ಇದು ಇಂದಿನ ಯುವ ಜನರನ್ನು ಸಹಾ ಬಹಳಷ್ಟು ಸೆಳೆಯುವುದರಲ್ಲಿ ಎರಡು ಮಾತಿಲ್ಲ.

ಈ ಹಿಸ ಎಲೆಕ್ಟ್ರಿಕ್ ಬೈಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಕೇವಲ ನಾಲ್ಕು ಗಂಟೆಗಳ ಅವಧಿ ಸಾಕು.. ನಾಲ್ಕು ಗಂಟೆಗಳಲ್ಲಿ ಚಾರ್ಜ್ ಆದರೆ ಸುಮಾರು 100 ಕಿಮೀ ಗಳ ರೇಂಜನ್ನು ನೀಡುತ್ತದೆ. ನೂರು ಕಿಮೀ ಗಳ ದೂರವನ್ನು ಆರಾಮವಾಗಿ ಈ ಬೈಕ್ ಮೂಲಕ ನಾವು ಕ್ರಮಿಸಬಹುದಾಗಿದೆ. ಈ ವಾಹನಕ್ಕೆ ಎರಡು ವರ್ಷಗಳ ವಾರಂಟಿಯನ್ನು ನೀಡಲಾಗಿದ್ದು, ಮತ್ತೊಂದು ವಿಶೇಷ ಎನ್ನುವಂತೆ ಇದನ್ನು ಚಲಾಯಿಸಲು ಪರವಾನಗಿ ( ಲೈಸನ್ಸ್ ) ಅಗತ್ಯವಿಲ್ಲ.

ಆರು ಕೆಜಿ ಬ್ಯಾಟರಿಯನ್ನು ಹೊಂದಿರುವ ಈ ಬೈಕ್ ಸಂಪೂರ್ಣವಾಗಿ ಚಾರ್ಜ್ ಆಗಲು ಖರ್ಚಾಗುವುದು ಕೇವಲ ಒಂದು ಯೂನಿಟ್ ವಿದ್ಯುತ್ ಮಾತ್ರ.. ಅಂದರೆ ಇಲ್ಲಿ ನಮಗೆ ಖರ್ಚಾಗುವುದು ಕೇವಲ ಆರರಿಂದ ಏಳು ರೂ. ಮಾತ್ರ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಾವು ಕೇವಲ ಏಳು ರೂಪಾಯಿಗಳನ್ನು ಖರ್ಚುಮಾಡಿ ನೂರು ಕಿಮೀ ದೂರದ ಪ್ರಯಾಣವನ್ನು ಮಾಡಬಹುದಾಗಿದೆ.

ಎಲ್ಲಕ್ಕಿಂತ ಮುಖ್ಯವಾದ ವಿಚಾರ ಈ ಬೈಕ್ ನ ಬೆಲೆ. ಹೌದು, ಬೆಲೆಯ ವಿಚಾರಕ್ಕೆ ಬಂದರೆ ದೇಶದ ರಾಜಧಾ‌ನಿಯಾದ ದೆಹಲಿಯಲ್ಲಿ ಈ ಎಲೆಕ್ಟ್ರಿಕ್ ಬೈಕಿನ ಬೆಲೆ 49, 999 ರೂಪಾಯಿಗಳಾಗಿವೆ. ಇದಲ್ಲದೇ ಆರ್ ಟಿ ಓ ಗಾಗಿ 2,999 ಮತ್ತು ವಿಮೆಗಾಗಿ 1,424 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ದೆಹಲಿಯಲ್ಲಿ ಆನ್ ರೋಡ್ ಪ್ರೈಸ್ 54,422 ರೂ.ಗಳಾಗಿವೆ. ಇದು ಹೆಚ್ಚು ಕಡಿಮೆ ಆಗುವ ಸಾಧ್ಯತೆಗಳು ಇವೆ.

Leave a Reply

Your email address will not be published. Required fields are marked *