ಕೇವಲ ಪ್ರಚಾರಕ್ಕಾಗಿ ಇಂತದೊಂದು ಕೆಲಸ ಮಾಡಿದ್ರಾ ಸನ್ನಿ ಲಿಯೋನಿ? ಹೆಣ್ಣು ಮಗು ದತ್ತು ಪಡೆದಿದ್ದ ಸನ್ನಿ ಮೇಲೆ ದೊಡ್ಡ ಆರೋಪ

Entertainment Featured-Articles News

ಬಾಲಿವುಡ್ ನಟಿ, ಒಂದು ಕಾಲದ ನೀ ಲಿ ಸಿನಿಮಾ ತಾರೆ ಸನ್ನಿ ಲಿಯೋನ್ ಬಾಲಿವುಡ್ ನ ಬಹಳ ಜನಪ್ರಿಯ ನಟಿ. ಸನ್ನಿ ಕೇವಲ ಸಿನಿಮಾ, ನಟನೆ, ಜಾಹೀರಾತು ಗಳು ಮಾತ್ರವೇ ಅಲ್ಲದೇ ಕೆಲವು ಮಾನವೀಯ ಕಾರ್ಯಗಳಿಂದಲೂ ಸಹಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸನ್ನಿ ಲಿಯೋನಿ ವರ್ಷಗಳ ಹಿಂದೆ ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು. ಆ ಮಗುವನ್ನು ದತ್ತು ಪಡೆದ ನಂತರ ಸನ್ನಿ ಬಗ್ಗೆ ದೊಡ್ಡ ಮಟ್ಟದ ಮೆಚ್ಚುಗೆಗಳು ಹರಿದು ಬಂದಿದ್ದವು. ಜನರು ಹಾಡಿ ಹೊಗಳಿದ್ದರು.

ಆದರೆ ಇತ್ತೀಚಿಗೆ ಇದೇ ವಿಷಯಕ್ಕೆ ಕೆಲವರು ನಟಿಯನ್ನು ಟ್ರೋಲ್ ಮಾಡಿದ್ದಾರೆ, ನಟಿಯ ಬಗ್ಗೆ ಟೀಕೆಯನ್ನು ಮಾಡಿದ್ದಾರೆ. ಹೌದು, ಟ್ರೋಲಿಗರು ನಟಿ ಸನ್ನಿ ಲಿಯೋನಿ ಕೇವಲ ಪ್ರಚಾರಕ್ಕಾಗಿ, ಜನಪ್ರಿಯತೆ ಪಡೆದುಕೊಳ್ಳುವುದಕ್ಕಾಗಿ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದರು. ಈಗ ಆಕೆ ಆ ಹೆಣ್ಣು ಮಗುವನ್ನು ನಿರ್ಲಕ್ಷ್ಯ ಮಾಡಿ, ತಮ್ಮ ಅವಳಿ ಗಂಡು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಇಂತಹ ಟ್ರೋಲ್ ಗಳು ಎದುರಾದ ಬೆನ್ನಲ್ಲೇ ನಟಿ ಸನ್ನಿ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ.

ನಟಿ ಸನ್ನಿ ಲಿಯೋನಿ ಪ್ರತಿಕ್ರಿಯೆಯಲ್ಲಿ, ತಮ್ಮ ಜೀವನದ ಭಾಗವೇ ಅಲ್ಲದ, ತಮಗೆ ಯಾವುದೇ ರೀತಿಯಲ್ಲೂ ಸಂಬಂದವೇ ಇಲ್ಲದ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ತಾಯ್ತನದ ಬಗ್ಗೆ ಇಲ್ಲಸಲ್ಲದ್ದನ್ನು ಬರೆಯುತ್ತಿದ್ದಾರೆ. ಫೋಟೋ ಮೂಲಕ ನನ್ನ ತಾಯ್ತನದ ಬಗ್ಗೆ, ನನ್ನ ಜವಾಬ್ದಾರಿಯನ್ನು ವಿವರಿಸುವ ಅಗತ್ಯವಿಲ್ಲ. ಕೇವಲ ಒಂದು ಫೋಟೋ ಆಧರಿಸಿ ಯಾರೋ ಒಬ್ಬರು ನನ್ನ ಬಗ್ಗೆ ಯಾವುದೇ ಅಭಿಪ್ರಾಯಕ್ಕೆ ಬರುವುದು ನನಗೆ ಬೇಕಾಗಿಲ್ಲ.

ನನ್ನ ಜೀವನದ ಬಗ್ಗೆ ತೀರ್ಮಾನವನ್ನು ಮಾಡಲು, ನನ್ನ ಜೀವನದಲ್ಲಿ ಕನಿಷ್ಠ ಐದು ನಿಮಿಷವಾದರೂ ಇರುವ ಅವಕಾಶವನ್ನು ನಿಮಗೆ ಕೊಟ್ಟವರು ಯಾರು?
ನನ್ನ ಕುಟುಂಬ, ನನ್ನ ಮಕ್ಕಳು ಹಾಗೂ ತಾಯಿಯಾಗಿ ನನ್ನ ಜವಾಬ್ದಾರಿ ಗಳೊಂದಿಗೆ ನಾನು ಬಹಳ ಚೆನ್ನಾಗಿ ಬೆಸೆದುಕೊಂಡಿದ್ದೇನೆ. ಒಂದಕ್ಕಿಂತ ಹೆಚ್ಚು ಮಕ್ಕಳ ಆರೈಕೆ ಮಾಡುವ ಕೌಶಲ್ಯವನ್ನು ಪ್ರತಿಯೊಬ್ಬ ತಾಯಿಯೂ ತಿಳಿದುಕೊಂಡಿರುತ್ತಾಳೆ. ಆದ್ದರಿಂದ ಅಸಂಬದ್ಧ ಟ್ರೋಲ್ ಮಾಡುವ ಮುನ್ನು ಆಲೋಚನೆ ಮಾಡಿ ಎಂದಿದ್ದಾರೆ ಸನ್ನಿ ಲಿಯೋನಿ.

Leave a Reply

Your email address will not be published.