“ಕೇವಲ ಅಂದವೇ ವಿಜಯಕ್ಕೆ ಕಾರಣ” ಎಂದವರಿಗೆ ಖಡಕ್ ಉತ್ತರ ನೀಡಿದ ಮಿಸ್ ಯೂನಿವರ್ಸ್ ಹರ್ನಾಜ್

0 2

ದೇಶದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಬೆಳಗಿದ ಸುಂದರಿ ಹರ್ನಾಜ್ ಸಂಧು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ. ಇದೇ ತಿಂಗಳಲ್ಲಿ ಅವರ 2021 ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದ ಮಿಸ್ ಯೂನಿವರ್ಸ್ ಕಿರೀಟವನ್ನು ಧರಿಸಿದ್ದಾರೆ. ಬರೋಬ್ಬರಿ 21 ವರ್ಷಗಳ ನಂತರ ಮಿಸ್ ಯೂನಿವರ್ಸ್ ಕಿರೀಟ ಭಾರತಕ್ಕೆ ಬಂದಿರುವುದು ಬಹಳ ವಿಶೇಷ ಎನಿಸಿದೆ. 2000 ದಲ್ಲಿ ಲಾರಾ ದತ್ತ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡ ನಂತರ ಈಗ ಹರ್ನಾಜ್ ಈ ಪಟ್ಟಕ್ಕೆ ಭಾಜನರಾಗಿದ್ದಾರೆ.

ಹರ್ನಾಜ್ ಮಿಸ್ ಯೂನಿವರ್ಸ್ ಕಿರೀಟ ಗೆದ್ದ ಮೇಲೆ ಭಾರತಕ್ಕೆ ಮರಳಿದ್ದಾರೆ. ಅವರಿಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯವನ್ನು ಕೋರಿದ್ದಾರೆ. ಇವೆಲ್ಲವು ಗಳ ನಡುವೆಯೇ ಕೆಲವರು ಮಿಸ್ ಯೂನಿವರ್ಸ್ ಅವರನ್ನು ಟ್ರೋಲ್ ಮಾಡಿರುವುದು ಕೂಡಾ ನಡೆದಿದೆ. ಹೌದು ಹರ್ನಾಜ್ ಸೌಂದರ್ಯ ಕಿರೀಟ ಗೆದ್ದ ನಂತರ, ಅವರನ್ನು ಹೊಗಳುವವರ ನಡುವೆಯೇ ಕೆಲವರು “ಆಕೆ ಕೇವಲ ತನ್ನ ಅಂದವಾದ ಮುಖದಿಂದ ಈ ಸ್ಪರ್ಧೆಯನ್ನು ಗೆದ್ದಿದ್ದಾರೆ” ಎನ್ನುವು ಮಾತನ್ನು ಹೇಳಿದ್ದಾರೆ. ಇದು ಹರ್ನಾಜ್ ಅವರಿಗೆ ಬೇಸರ ಮೂಡಿಸಿದೆ.

ತನ್ನ ಬಗ್ಗೆ ಇಂತಹುದೊಂದು ಟೀಕೆ ಮಾಡಿದವರಿಗೆ ಹರ್ನಾಜ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಖಡಕ್ ಉತ್ತರ ನೀಡಿದ್ದಾರೆ. ಸೌಂದರ್ಯ ಸ್ಪರ್ಧೆ ಎಂದರೆ ಸಹಜವಾಗಿಯೇ ಅಲ್ಲಿನ ಪ್ರಮುಖ ಮಾನದಂಡ ಅಂದ ಮಾತ್ರವೇ ಎನ್ನುವುದು ಅನೇಕರ ನಂಬಿಕೆಯಾಗಿದೆ. ಆದರೆ ಅದರ ಹಿಂದೆ ಬಹಳಷ್ಟು ಶ್ರಮ ಹಾಗೂ ಪ್ರಯತ್ನ ಗಳು ಕೂಡಾ ಇವೆ ಎಂಬುದನ್ನು ತಿಳಿದಿಲ್ಲ. ಆದ್ದರಿಂದಲೇ ಕೆಲವರು ಹರ್ನಾಜ್ ಅವರ ಗೆಲುವಿನ ಕುರಿತಾಗಿ ಲಘುವಾಗಿ ಮಾತನಾಡಿದ್ದಾರೆ.

ಅದಕ್ಕೆ ಹರ್ನಾಜ್ “ನನ್ನ ಸುಂದರವಾದ ಮುಖದಿಂದ ನಾನು ಈ ಪ್ರಶಸ್ತಿಯನ್ನು ಗೆದ್ದಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅದರ ಹಿಂದೆ ನಾನು ಎಷ್ಟು ಶ್ರಮ ಪಟ್ಟಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು. ಅಂತಹವರ ಜೊತೆ ವಾದ ಮಾಡುವ ಬದಲು ನಾನು ಕಷ್ಟಪಟ್ಟು ಕೆಲಸ ಮಾಡಲು ಬಯಸುತ್ತೇನೆ ಹಾಗೂ ಆ ಜನರಿಗೆ ನನ್ನ ಸಾಮರ್ಥ್ಯ ತೋರಿಸುತ್ತೇನೆ, ನಾನು ಇಂತಹ ಧೋರಣೆಗಳನ್ನು ಮುರಿಯಲು ಬಯಸುತ್ತೇನೆ” ಎಂದು ಬರೆದುಕೊಂಡು ಪ್ರತಿಕ್ರಿಯೆ ನೀಡಿದ್ದಾರೆ.

Leave A Reply

Your email address will not be published.