ಕೆ.ಎಲ್.ರಾಹುಲ್ ಅಂಡರ್ವೇರ್ ಜಾಹೀರಾತಿಗೆ ಫಿದಾ ಆದ ಖ್ಯಾತ ನಟಿ!! ಅದರ ಬಗ್ಗೆ ಹೇಳಿದ್ದೇನು ನೋಡಿ..

Entertainment Featured-Articles Movies News

ನಟಿ ಕಸ್ತೂರಿ ಕನ್ನಡ ಮಾತ್ರವೇ ಅಲ್ಲದೇ ದಕ್ಷಿಣದ ಇನ್ನುಳಿದ ಮೂರು ಭಾಷೆಗಳಲ್ಲಿ ನಟಿಸುವ ಮೂಲಕ ಚತುರ್ಭಾಷಾ ನಟಿಯಾಗಿ ಹೆಸರನ್ನು ಮಾಡಿದ್ದಾರೆ. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಕಸ್ತೂರಿ ಕೂಡಾ ಒಬ್ಬರಾಗಿದ್ದರು. ಅನಂತರ ನಟಿ ತಮ್ಮ ವೈವಾಹಿಕ ಜೀವನ, ಕುಟುಂಬ, ಮಕ್ಕಳು ಹೀಗೆ ನಾನಾ ಕಾರಣಗಳಿಂದ ಸಿನಿಮಾದಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಂಡು ಬಂದಿದ್ದರು. ಆನಂತರ ಕಿರುತೆರೆಗೆ ಎಂಟ್ರಿ ನೀಡುವ ಮೂಲಕ ಅವರು ತಮ್ಮ ಸ ಸೆಕೆಂಡ್ ಇನಿಂಗ್ಸ್ ಆರಂಭಿಸಿದರು. ನಟಿ ಕಸ್ತೂರಿಯವರು ಸಿನಿಮಾ ಹಾಗೂ ಕಿರುತೆರೆ ವಿಷಯ ಮಾತ್ರವೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಬೇರೆ ಕೆಲವು ವಿಷಯಗಳಿಂದಲೂ ಕೂಡಾ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಸುದ್ದಿಯನ್ನು ಮಾಡುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟಿ ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಈ ಅನಿಸಿಕೆ ಅಭಿಪ್ರಾಯಗಳು ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿ ನಟಿ ಸುದ್ದಿಯಾಗುವುದು ನಡೆಯುತ್ತಲೇ ಇರುತ್ತದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ ನಡುವೆ ಭಾಷೆಯ ವಿಷಯವಾಗಿ ನಡೆದಂತಹ ಟ್ವೀಟ್ ವಾ ರ್ ಸಂದರ್ಭದಲ್ಲಿ ನಟಿ ಕಸ್ತೂರಿಯವರು ಕಿಚ್ಚ ಸುದೀಪ್ ಅವರ ಪರವಾಗಿ ನಿಲ್ಲುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು.

ಇನ್ನು ಇದೀಗ ಟೀಂ ಇಂಡಿಯಾ ಆಟಗಾರ, ಕನ್ನಡಿಗ ಕೆ ಎಲ್ ರಾಹುಲ್ ಅವರ ವಿಚಾರವಾಗಿ ಮಾಡಿದ ಒಂದು ಪೋಸ್ಟ್ ನಿಂದಾಗಿ ನಟಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಹೌದು ನಟಿ ಕಸ್ತೂರಿಯವರು ಕೆ ಎಲ್ ರಾಹುಲ್ ಅವರ ಒಳ ಉಡುಪುಗಳ ಕುರಿತಾಗಿ ಮಾಡಿರುವ ಪೋಸ್ಟ್ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗಿದೆ. ನಟಿಯು ರಾಹುಲ್ ಅವರ ಫೋಟೋವನ್ನು ಹಂಚಿಕೊಂಡು ಬರೆದುಕೊಂಡಿರುವ ಸಾಲುಗಳನ್ನು ನೋಡಿ ನೆಟ್ಟಿಗರು ಕೂಡಾ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ನಟಿ ಕಸ್ತೂರಿ ತಮ್ಮ ಪೋಸ್ಟ್ ನಲ್ಲಿ, ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ಚಿಪ್ಸ್, ಕೂಲ್ ಡ್ರಿಂಕ್ಸ್ ಅಥವಾ ಆನ್ಲೈನ್ ಗೇಮ್ ಗಳಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಕೆ ಎಲ್ ರಾಹುಲ್ ಅವರು ಇವರೆಲ್ಲರಿಗಿಂತ ಭಿನ್ನವಾಗಿ ಒಳಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅವರ ಲುಕ್ ಬಹಳ ಚೆನ್ನಾಗಿದೆ. ಇನ್ನು ಕಪಾಟಿನಲ್ಲಿರುವ ಹುಡುಗರ ಒಳಉಡುಪುಗಳು ಹೊರಬರುವ ಭರವಸೆಯನ್ನು ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published.