ಕೆರಳಿದ ಸಿಂಹನಾದ ಕೆಜಿಎಫ್ ನ ರಾಖೀ ಭಾಯ್:ಯಶ್ ಹೊಸ ಹೇರ್ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ

0 4

ಕೆಜಿಎಫ್ ಸಿನಿಮಾ ಆರಂಭ ಆದಾಗಿನಿಂದಲೂ ಸಹಾ ರಾಕಿಂಗ್ ಸ್ಟಾರ್ ಯಶ್ ಅವರ ಹೇರ್ ಸ್ಟೈಲ್ ಸಹಾ ಒಂದು ಹೊಸ ಹವಾ ಸೃಷ್ಟಿ ಮಾಡಿದೆ. ಉದ್ದದ ಗಡ್ಡ, ಕೂದಲು ನೋಡಿ ಅವರ ಅಭಿಮಾನಿಗಳು ಈ ಸೂಪರ್ , ಖಡಕ್ ಲುಕ್ ನೋಡಿ ಫಿದಾ ಆದರು. ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಹಿಂದಿಯಲ್ಲಿ ಬಿಡುಗಡೆ ಆದ್ಮೇಲೆ ಉತ್ತರ ಭಾರತದ ಮಂದಿಗೂ ಕೂಡಾ ರಾಖಿ ಭಾಯ್ ನ ರಗಡ್ ಲುಕ್ ಮಸ್ತ್ ಇಷ್ಟ ಆಗಿದ್ರಲ್ಲಿ ಅನುಮಾನವೇ ಬೇಡ ಅನ್ನೋಷ್ಟು ಅಭಿಮಾನ ಅವರಿಗೆ ಹರಿದು ಬಂತು. ರಾಖಿ ಭಾಯ್ ಹೇರ್ ಸ್ಟೈಲ್ ಹೊಸ ಟ್ರೆಂಡ್ ಆಗೋಯ್ತು.

ಇದೀಗ ಕೆಜಿಎಫ್ ಟು ಸಿನಿಮಾದಲ್ಲಿ ಸಹಾ ಅವರು ಅದೇ ಲುಕ್ ಮೈಂಟೈನ್ ಮಾಡ್ತಾ ಇರೋ ಕಾರಣ ಮುಂಬೈಗೆ ಹೋಗಿ, ಅಲ್ಲಿನ ಜನಪ್ರಿಯ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲೀಮ್ ಹಕೀಮ್ ಸೆಲೂನ್ ನಲ್ಲಿ ತಮ್ಮ ಹೇರ್ ಸ್ಟೈಲ್ ಮಾಡಿಸಿದ್ದಾರೆ. ಆಲೀಮ್ ಹಕೀಮ್ ಬಾಲಿವುಡ್ ನ ದಿಗ್ಗಜರ ಹೇರ್ ಸ್ಟೈಲಿಸ್ಟ್ . ಅಮಿತಾಬ್ ರಿಂದ ಹಿಡಿದು ಹೃತಿಕ್ ವರೆಗೂ ಹೇರ್ ಸ್ಟೈಲ್ ಮಾಡಿರೋ ಹೆಗ್ಗಳಿಕೆ ಇವರದ್ದು. ಯಶ್ ಆಲೀಮ್ ಹಕೀಮ್ ಸೆಲೂನ್ ಗೆ ಭೇಟಿ ನೀಡಿರೋದು ಇದೇ ಮೊದಲೇನು ಅಲ್ಲ.

ಯಶ್ ಅವರು ಈ ಮೊದಲು ಕೂಡಾ ಆಲೀನ್ ಹಕೀಮ್ ನ ಸೆಲೂನ್ ಗೆ ಭೇಟಿ ನೀಡಿದ್ದುಂಟು. ಈ ಸಲ ಯಶ್ ಅವರ ಹೇರ್ ಸ್ಟೈಲ್ ಮಾಡಿದ ನಂತರ ಒಂದು ವೀಡಿಯೋವನ್ನು ಆಲೀಮ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವೀಡಿಯೋ ಅಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಗಳನ್ನು ಮಾಡಿ ರಾಖೀ ಭಾಯ್ ಹೇರ್ ಸ್ಟೈಲ್ ಗೆ ಮೆಚ್ಚುಗೆಗಳ ಮಳೆಯನ್ನು ಹರಿಸಿದ್ದಾರೆ.

ಕೆಜಿಎಫ್-2 ನ ಕೆಲವು ದೃಶ್ಯಗಳ ಪ್ಯಾಚ್ ವರ್ಕ್ ಇನ್ನೂ ನಡೆಯುತ್ತಿದೆ ಎನ್ನಲಾಗಿದ್ದು, ಅದೇ ಕಾರಣದಿಂದ ಯಶ್ ಅವರ ಹೇರ್ ಸ್ಟೈಲ್ ಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಮೊದಲಿಗಿಂತಲೂ ಈ ಬಾರಿ ಯಶ್ ಅವರ ಹೇರ್ ಸ್ಟೈಲ್ ಇನ್ನೂ ಚೆನ್ನಾಗಿದೆ ಅಂತಿದ್ದಾರೆ ಫ್ಯಾನ್ಸ್. ಇನ್ನು ಈ ವಿಚಾರವಾಗಿ ಮುಂಬೈಗೆ ತೆರಳಿದ್ದ ವೇಳೆ ಯಶ್ ಅವರ ವಿಮಾನ ನಿಲ್ದಾಣ ದಲ್ಲಿ ಕಾಣಿಸಿಕೊಂಡಾಗಲೇ ಮುಂಬೈನ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದ ವೀಡಿಯೋ ಸಹಾ ವೈರಲ್ ಆಗಿತ್ತು.

Leave A Reply

Your email address will not be published.