ಕೆಟ್ಟ ಮೇಲೆ ಬುದ್ದಿ ಬಂತು ಅಂದ್ರೆ ಇದೇನಾ? ನಾವೆಲ್ಲಾ ಒಂದೇ ಚಿತ್ರರಂಗ ಎಂದು ಕರಣ್ ಜೋಹರ್ ಹೇಳಿದ್ದೇನು ನೋಡಿ
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳು ಹೀನಾಯ ಸೋಲನ್ನು ಕಾಣುತ್ತಿವೆ. ಬಾಲಿವುಡ್ ನಲ್ಲಿ ಹೊಸ ಸಿನಿಮಾ ಬರುತ್ತಿದೆ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಆ ಸಿನಿಮಾವನ್ನು ಬಾಯ್ಕಾಟ್ ಮಾಡುವ ಟ್ರೆಂಡ್ ಸಹಾ ಬಹಳ ಜೋರಾಗಿ ನಡೆಯುತ್ತಿದೆ. ಈಗ ಬಾಲಿವುಡ್ ಸಿನಿಮಾಗಳ ಜನಪ್ರಿಯ ನಿರ್ಮಾಪಕ ಕರಣ್ ಜೋಹರ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ , ದೊಡ್ಡ ಮಟ್ಟದ ಬಂಡವಾಳ ಹೂಡಿಕೆಯಲ್ಲಿ ನಿರ್ಮಾಣವಾಗಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿಯಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ ಬ್ರಹ್ಮಾಸ್ತ್ರ ಬಿಡುಗಡೆಗೆ ಸಜ್ಜಾಗಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಬ್ರಹ್ಮಾಸ್ತ್ರವನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಕೇಳಿಬಂದಿದೆ.
ಇವೆಲ್ಲವುಗಳ ನಡುವೆ ಸಿನಿಮಾ ಪ್ರಚಾರ ಕಾರ್ಯಗಳು ಆರಂಭವಾಗಿದ್ದು ಭಾರತದ ವಿವಿಧ ಕಡೆಗಳಲ್ಲಿ , ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಪ್ರಮೋಷನ್ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿದೆ. ಟಾಲಿವುಡ್ ನ ದಿಗ್ಗಜರು ಸಿನಿಮಾ ಪ್ರಚಾರಕ್ಕೆ ಕೈ ಜೋಡಿಸಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಕಾರ್ಯದ ವೇಳೆ ನಿಮ್ಮ ಕರಣ್ ಜೋಹರ್ ಅವರು ಪ್ರಸ್ತುತ ಪರಿಸ್ಥಿತಿಯನ್ನು ಕುರಿತಾಗಿ ಮಾತನಾಡಿದ್ದು, ತಮ್ಮ ಬ್ರಹ್ಮಾಸ್ತ್ರ ಸಿನಿಮಾದ ಜೊತೆಗೆ ಭಾರತೀಯ ಚಿತ್ರರಂಗದ ಕುರಿತಾಗಿ ಅವರು ಒಂದಷ್ಟು ಮಾತುಗಳನ್ನು ಆಡಿದ್ದಾರೆ. ಅವರು ಆಡಿದ ಮಾತುಗಳು ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.
ಕರಣ್ ಜೋಹರ್ ಅವರು ಭಾರತೀಯ ಚಿತ್ರರಂಗವನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಂದು ವಿಭಜಿಸಬೇಡಿ. ಭಾರತೀಯ ಚಿತ್ರರಂಗವನ್ನು ಒಂದು ಉದ್ಯಮವನ್ನಾಗಿ ನೋಡಿ ಎನ್ನುವ ಮಾತನ್ನು ಹೇಳಿದ್ದಾರೆ. ಇನ್ನು ಮುಂದೆ ಇಂತಹ ವಿಭಜನೆಯು ಬೇಡವೇ ಬೇಡ ಎನ್ನುವ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ಸಿನಿಮಾಗಳ ಮೂಲಕ ಇಡೀ ದೇಶವನ್ನು ತಲುಪಲು ಬಯಸುತ್ತದೆ. ಎಸ್ ಎಸ್ ರಾಜಮೌಳಿ ಅವರು ಹೇಳುವಂತೆ, ನಮ್ಮದು ಭಾರತೀಯ ಚಿತ್ರರಂಗ ಎನ್ನುವ ಮಾತುಗಳನ್ನು ಕಾರಣ ಜೋಹರ್ ಹೇಳುವ ಮೂಲಕ ಭಾರತೀಯ ಸಿನಿಮಾರಂಗವನ್ನು ಬೇರೆ ಬೇರೆ ಹೆಸರುಗಳಿಂದ ವಿಭಜಿಸುವುದು ಬೇಡ ಎಂದಿದ್ದಾರೆ.
ನಾವು ವುಡ್ ಗಳು ಎನ್ನುವ ಪ್ರತ್ಯೇಕತೆಯಿಂದ ಹೊರಗೆ ಬರಬೇಕಾಗಿದೆ. ನಾವೆಲ್ಲರೂ ಭಾರತೀಯ ಚಿತ್ರರಂಗದ ಒಂದು ಭಾಗವಾಗಿದ್ದೇವೆ. ಇಲ್ಲಿ ಬರುವ ಪ್ರತಿಯೊಂದು ಚಿತ್ರವೂ ಭಾರತೀಯ ಚಿತ್ರರಂಗಕ್ಕೆ ಸೇರಿದ್ದಾಗಿರುತ್ತದೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಸಿಗುತ್ತಿರುವ ಮನ್ನಣೆ ಹೆಚ್ಚಾಗುತ್ತಿದ್ದು, ದಕ್ಷಿಣದ ಸಿನಿಮಾಗಳನ್ನು ಉತ್ತರದ ಜನರು ಇಷ್ಟಪಟ್ಟು ನೋಡುವ ಮೂಲಕ ಸಿನಿಮಾಗಳ ಯಶಸ್ಸಿಗೆ ಕಾರಣವಾಗುತ್ತಿದ್ದಾರೆ. ಅದೇ ವೇಳೆ ಹಿಂದಿ ಸಿನಿಮಾಗಳನ್ನು ನೋಡುವ ಆಸಕ್ತಿಯನ್ನು ಜನ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಸತ್ಯವಾಗಿದೆ.