ಕೆಜಿಎಫ್-2 v/s ಬೀಸ್ಟ್: ಬೀಸ್ಟ್ ನ ವೇಗಕ್ಕೆ ಬ್ರೇಕ್ ಹಾಕ್ತಾನಾ ರಾಖೀ ಭಾಯ್!! ಬಾಕ್ಸಾಫೀಸ್ ಫೈಟ್ ಫಿಕ್ಸ್

Entertainment Featured-Articles News

ಇಬ್ಬರು ಪ್ರಬಲ ಪ್ರತಿಸ್ಪರ್ಧಿಗಳು ಎದುರಾದರೆ ಆಟವೇ ಆಗಲೀ, ಹೋ ರಾ ಟವೇ ಆಗಲೀ ಇನ್ನೊಂದು ಹಂತಕ್ಕೆ ತಲುಪುತ್ತದೆ. ರೋಚಕತೆಯು ಉತ್ಕಂಟತೆಯ ಎಲ್ಲಾ ಹದ್ದುಗಳನ್ನು ಮೀರಿ ಹೋಗುವುದು ಖಚಿತ. ನೋಡುಗನ ಕುತೂಹಲವನ್ನು ಕೆರಳಿಸಿ, ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿ ಗೆಲ್ಲುವುದು ಯಾರು?? ಎನ್ನುವ ಪ್ರಶ್ನೆಯು ಕಾಡುವಂತೆ ಮಾಡುವುದು ವಾಸ್ತವ. ಈಗ ಸದ್ಯಕ್ಕೆ ದಕ್ಷಿಣ ಸಿನಿಮಾ ರಂಗದಲ್ಲಿ ಅಂತಹುದೇ ಒಂದು ರೋಚಕ, ಕುತೂಹಲಭರಿತ ಆಟ ಅಥವಾ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ. ಹೌದು ಎರಡು ಭರ್ಜರಿ ಸಿನಿಮಾಗಳು ಈಗ ಬಾಕ್ಸಾಫೀಸ್ ಕ ದ ನಕ್ಕೆ ಸಿದ್ಧವಾಗಿದೆ.

ಹೌದು, ದಕ್ಷಿಣ ಸಿನಿಮಾ ರಂಗ ಮಾತ್ರವೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿರುವ ಸಿನಿಮಾ ಕೆಜಿಎಫ್-2 ಸಿನಿಮಾ ಮುಂದಿನ ಏಪ್ರಿಲ್ 14 ಕ್ಕೆ ತೆರೆಯ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಆದರೆ ಕೆಜಿಎಫ್-2 ಬರುವ ಒಂದು ದಿನಕ್ಕೆ ಮೊದಲು ತೆರೆಗೆ ಬರುತ್ತಿದೆ ದಕ್ಷಿಣದ ಮತ್ತೊಬ್ಬ ಸ್ಟಾರ್ ನಟ ದಳಪತಿ ವಿಜಯ್ ಅವರ ಬೀಸ್ಟ್ ಸಿನಿಮಾ. ತಮಿಳು ನಟ ವಿಜಯ್ ಅವರ ಬೀಸ್ಟ್ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಏಪ್ರಿಲ್ 13 ರಂದು ಬಿಡುಗಡೆ ಆಗಲಿದೆ ಎಂದು ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಅಧಿಕೃತ ಘೋಷಣೆ ಮಾಡಿದೆ.

ಥಿಯೇಟರ್ ಗಳಲ್ಲಿ ಕೊರೊನಾ ನಂತರದ ದಿನಗಳಲ್ಲಿ 50 % ಸೀಟುಗಳಿಗೆ ಅವಕಾಶ ಇದ್ದಾಗಲೇ ನಟ ವಿಜಯ್ ಅವರ ಮಾಸ್ಟರ್ ಸಿನಿಮಾ ಬಿಡುಗಡೆ ಮಾಡಿ ಯಶಸ್ಸನ್ನು ಪಡೆದುಕೊಂಡಿದ್ದರು. ಆದರೆ ಈ ಬಾರಿ ಬೀಸ್ಟ್ ಎದುರು ರಾಖೀ ಭಾಯ್ ನ‌ ಕೆಜಿಎಫ್-2 ಇದೆ. ಅದರಲ್ಲೂ ಕೆಜಿಎಫ್-2 ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಮತ್ತೊಂದು ವಿಶೇಷವಾಗಿದೆ.‌ ತಮಿಳಿನಲ್ಲಿ ವಿಜಯ್ ಅವರ ಪ್ರಭಾವ ಹೆಚ್ಚಾಗಿರುವುದರಿಂದ ಇದು ತಮಿಳುನಾಡಿನಲ್ಲಿ ಕೆಜಿಎಫ್-2 ಮೇಲೆ ಪರಿಣಾಮ ಖಂಡಿತ ಬೀರಲಿದೆ ಎನ್ನಲಾಗುತ್ತಿದೆ.

ಇನ್ನು ಸಿನಿಮಾ ತೆಲುಗಿನಲ್ಲಿ ಸಹಾ ಬಿಡುಗಡೆ ಆಗುತ್ತಿರುವ ಕಾರಣದಿಂದ ಆಂಧ್ರ ಮತ್ತು ತೆಲಂಗಾಣದಲ್ಲಿ ಸಹಾ ಕೆಜಿಎಫ್-2 ಗೆ ಬೀಸ್ಟ್ ಯಾವ ರೀತಿಯ ಪೈಪೋಟಿ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಕೆಜಿಎಫ್-2 ಈಗಾಗಲೇ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಅಲ್ಲದೇ ಮೊನ್ನೆಯಷ್ಟೇ ಬಂದ ಕೆಜಿಎಫ್-2 ನ ಲಿರಿಕಲ್ ಹಾಡು ತೂಫಾನ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.‌ ಒಟ್ಟಾರೆ ಏಪ್ರಿಲ್ 13 ಬೀಸ್ಟ್ ಮತ್ತು ಏಪ್ರಿಲ್ 14 ಕ್ಕೆ ಕೆಜಿಎಫ್-2 ತೆರೆಗೆ ಬರುತ್ತಿರುವುದು ಹೊಸ ಸಂಚಲನ ಸೃಷ್ಟಿಸಿದೆ.

Leave a Reply

Your email address will not be published.