ಕೆಜಿಎಫ್-2 ಸಿನಿಮಾ ನೋಡಿದ್ರಾ ತಮನ್ನಾ?? ಮಾದ್ಯಮದ ಪ್ರಶ್ನೆಗೆ ತಮನ್ನಾ ಕೊಟ್ಟರು ಇಂತದೊಂದು ಉತ್ತರ..

Entertainment Featured-Articles News

ಕೆಜಿಎಫ್-2 ಸಿನಿಮಾ ಬಿಡುಗಡೆಯ ದಿನದಿಂದಲೂ ಭರ್ಜರಿ ಯಶಸ್ಸನ್ನು ಪಡೆದುಕೊಂಡು, ಬಿಡುಗಡೆ ಆದ ಎಲ್ಲಾ ಭಾಷೆಗಳಲ್ಲಿಯೂ ಸಹಾ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈಗಾಗಲೇ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಸಹಾ ಹೊಸ ಹೊಸ ದಾಖಲೆಗಳನ್ನು ಬರೆದಿದೆ. ಕೆಜಿಎಫ್-2 ಸಿನಿಮಾವನ್ನು ನೋಡಿದ ಸಿನಿಮಾ ಸೆಲೆಬ್ರಿಟಿಗಳು ಸಹಾ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಒಂದು ಕಡೆ ಕೆಜಿಎಫ್-2 500 ಕೋಟಿ ಕಲೆಕ್ಷನ್ ಗಳಿಸಿಕೊಂಡು ಮುನ್ನುಗ್ಗುತ್ತಿದ್ದು, ಇನ್ನೊಂದು ಕಡೆ ತ್ರಿಬಲ್ ಆರ್ ಸಿನಿಮಾ 1000 ಕೋಟಿ ಕಲೆಕ್ಷನ್ ಮಾಡಿದೆ.

ದಕ್ಷಿಣದ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ಕೂಡಾ ಬೆಚ್ಚಿ ಬಿದ್ದಿದೆ. ಬಾಲಿವುಡ್ ಗೆ ಪುನಶ್ಚೇತನ ನೀಡಲು ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ. ಇನ್ನು ಕೆಜಿಎಫ್-2 ಟು ಸಿನಿಮಾದ ಮೊದಲ ಭಾಗದಲ್ಲಿ ಕನ್ನಡ ವರ್ಷನ್ ನಲ್ಲಿ, ಜೋಕೆ ನಾನು ಮಿಂಚಿನ ಬಳ್ಳಿ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ತಮನ್ನಾ ಭಾಟಿಯಾ ಅವರನ್ನು ಇತ್ತೀಚಿಗೆ ಮಾದ್ಯಮಗಳು ನಟಿ ಕೆಜಿಎಫ್-2 ಹಾಗೂ ತ್ರಿಬಲ್ ಆರ್ ಸಿನಿಮಾವನ್ನು ನೋಡಿದ್ರಾ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಈ ವೇಳೆ ನಟಿ ಕೊಟ್ಟ ಉತ್ತರ ಎಲ್ಲರ ಗಮನ ಸೆಳೆದಿದೆ.

ನಟಿ ತಮನ್ನಾ ಭಾಟಿಯಾ ತಾನು ಇನ್ನೂ ತ್ರಿಬಲ್ ಆರ್ ಹಾಗೂ ಕೆಜಿಎಫ್-2 ಎರಡೂ ಸಿನಿಮಾಗಳನ್ನು ನೋಡಿಲ್ಲ ಎಂದು ಹೇಳಿದ್ದಾರೆ. ತಾನು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ಕಾರಣದಿಂದಾಗಿ ಎರಡೂ ಸಿನಿಮಾಗಳನ್ನು ಇನ್ನೂ ನೋಡುವುದಕ್ಕೆ ಆಗಿಲ್ಲ ಎಂದಿರುವ ನಟಿ ತಮನ್ನಾ ಭಾಟಿಯಾ ಫ್ರೀ ಟೈಮ್ ಸಿಕ್ಕಿದರೆ ಖಂಡಿತ ಎರಡೂ ಸಿನಿಮಾಗಳನ್ನು ನೋಡುವುದಾಗಿ ಹೇಳಿದ್ದಾರೆ ನಟಿ ತಮನ್ನಾ. ನಟಿಯ ಮಾತುಗಳನ್ನು ಕೇಳಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮೆಚ್ಚುಗೆ ನೀಡಿದರೆ ಇನ್ನೂ ಕೆಲವರು ವ್ಯಂಗ್ಯವಾಡಿದ್ದಾರೆ.

ಕೆಜಿಎಫ್-2 ಸಿನಿಮಾದ ಬಗ್ಗೆ ಈಗಾಗಲೇ ತೆಲುಗಿನ ಯುವ ಸ್ಟಾರ್ ನಟ, ಮೆಗಾಸ್ಟಾರ್ ಕುಟುಂಬದ ಕುಡಿ ಸಾಯಿ ಧರಮ್ ತೇಜಾ ಸೋಷಿಯಲ್ ಮೀಡಿಯಾ ಮೂಲಕ ಶುಭವನ್ನು ಹಾರೈಸಿದ್ದಾರೆ. ಇನ್ನು ತಮಿಳು ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಖ್ಯಾತಿ ಪಡೆದಿರುವ ನಟ ರಜನೀಕಾಂತ್ ಅವರು ಕೆಜಿಎಫ್-2 ಸಿನಿಮಾವನ್ನು ಕನ್ನಡದ ವರ್ಷನ್ ನಲ್ಲಿಯೇ ವೀಕ್ಷಣೆ ಮಾಡಿ ನಿರ್ಮಾಪಕರಿಗೆ ಕರೆ ಮಾಡಿ , ಸಿನಿಮಾ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದ್ದು ಈಗಾಗಲೇ ಸುದ್ದಿಗಳಾಗಿದೆ.

Leave a Reply

Your email address will not be published. Required fields are marked *