ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 1 ಮಾಡಿದ ಸದ್ದು ಇನ್ನೂ ಜನ ಮರೆತಿಲ್ಲ. ದಕ್ಷಿಣದ ಸಿನಿಮಾಗಳ ಕಡೆ ಅದರಲ್ಲೂ ಸ್ಯಾಂಡಲ್ವುಡ್ ಕಡೆಗೆ ಭಾರತೀಯ ಸಿನಿಮಾ ರಂಗ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್, ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಖಾನ್ ಅಭಿನಯದ ಜೀರೋ ಸಿನಿಮಾಕ್ಕೆ ಸೆಡ್ಡು ಹೊಡೆದು ಬಾಲಿವುಡ್ ನಲ್ಲೂ ಸಹಾ ಕಮಾಲ್ ಮಾಡಿದ್ದ ರಾಖಿ ಬಾಯ್ ಗೆ ಫಿಧಾ ಆದವರು ಅದೆಷ್ಟೋ ಮಂದಿ. ಕೆಜಿಎಫ್ ಮಾಡಿದ ಜಾದೂ ಕೆಜಿಎಫ್-2 ಬಗ್ಗೆ ಇನ್ನಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ಸಹಾ ನಿಜ.
ಇದೀಗ ಎಲ್ಲರ ನಿರೀಕ್ಷೆಗಳನ್ನು ನಿಜ ಮಾಡಲು ಏಪ್ರಿಲ್ 14 ರಂದು ಕೆಜಿಎಫ್-2 ತೆರೆಗೆ ಬರಲು ಸಜ್ಜಾಗಿದೆ. ಸಹಜವಾಗಿಯೇ ಕೆಜಿಎಫ್-2 ಸಿನಿಮಾ ಅಬ್ಬರ ಜೋರಾಗಿಯೇ ಇರಲಿದೆ ಎನ್ನುವುದು ಎಲ್ಲರಿಗೂ ಈಗಾಗಲೇ ತಿಳಿದಿದೆ. ಆದ್ದರಿಂದಲೇ ಕೆಜಿಎಫ್-2 ಸಿನಿಮಾ ಬಿಡುಗಡೆ ವೇಳೆ ಬೇರ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಬಾಲಿವುಡ್ ಕೂಡಾ ಏನೂ ಹೊರತಾಗಿಲ್ಲ ಎನ್ನುವುದು ಕೂಡಾ ನಿಜವಾಗಿದೆ.
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ವನ್ನು ಏಪ್ರಿಲ್ ಹದಿನಾಲ್ಕರಂದೇ ಬಿಡುಗಡೆ ಮಾಡಲಾಗುವುದು ಎನ್ನುವ ಮಾಹಿತಿಯೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆದರೆ ಈ ಹೊಸ ಅಪ್ಡೇಟ್ ನೀಡಿದ 20 ದಿನಗಳು ಕಳೆಯುವುದರೊಳಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ತಂಡ ಮತ್ತೊಂದು ಹೊಸ ಅಪ್ಡೇಟ್ ಅನ್ನು ನೀಡಿದೆ. ಅದೇನೆಂದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಏಪ್ರಿಲ್ 14 ರ ಬದಲಾಗಿ ಆಗಸ್ಟ್ 11 ಕ್ಕೆ ಬಿಡುಗಡೆ ಆಗುವುದು ಎನ್ನುವ ಹೊಸ ದಿನಾಂಕವನ್ನು ಘೋಷಣೆಯನ್ನು ಮಾಡಿ ಗಮನ ಸೆಳೆದಿದೆ.
ಅಲ್ಲದೇ ನಟ ಪ್ರಭಾಸ್ ಅವರ ಆದಿಪುರುಷ್ ಸಿನಿಮಾ ಆಗಸ್ಟ್ ಹನ್ನೊಂದಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ ಆದಿಪುರುಷ್ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಹಿನ್ನಲೆಯಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ತಂಡವು ಆದಿಪುರುಷ್ ಸಿನಿಮಾ ತಂಡಕ್ಕೆ ಧನ್ಯವಾದಗಳನ್ನು ಸಹಾ ತಿಳಿಸಿದೆ. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಮಾತನ್ನು ಹೇಳಿದ್ದ ಅಮೀರ್ ಖಾನ್ ಅವರು ಈಗ ತಮ್ಮ ಮಾತಿನಿಂದ ಹಿಂದೆ ಸರಿದಿರುವುದು ಈಗ ಎಲ್ಲರ ಗಮನವನ್ನು ಸೆಳೆದಿದೆ ಎನ್ನುವುದು ಖಚಿತ.