ಕೆಜಿಎಫ್-2 ಗಾಗಿ ರಾಖಿ ಭಾಯ್ ಪಡೆದ ಸಂಭಾವನೆ ಎಷ್ಟು?? ಇಲ್ಲಿದೆ ಉತ್ತರ

Entertainment Featured-Articles News

ಸದ್ಯ ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳ ಚಿತ್ರರಂಗ ಹಾಗೂ ಚಿತ್ರ ರಸಿಕರು ಕೆಜಿಎಫ್-2 ಸಿನಿಮಾದ ಬಿಡುಗಡೆಗಾಗಿ ಕಾದು ನೋಡುತ್ತಿದ್ದಾರೆ. ಭಾನುವಾರವಷ್ಟೇ ಬಿಡುಗಡೆ ಕಂಡಿರುವ ಸಿನಿಮಾದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿ, ಅಬ್ಬರಿಸುತ್ತಿದೆ.‌ ಇನ್ನು ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ ಹಾಗೂ ಅಭಿಮಾನಿಗಳು ಸಿನಿಮಾ ಬಿಡುಗಡೆಯ ಕಡೆಗೆ ತಮ್ಮ ನೋಟವನ್ನು ನೆಟ್ಟಿದ್ದಾರೆ.‌ ಕೆಜಿಎಫ್ ಮೊದಲ ಭಾಗವೇ ದೊಡ್ಡ ಅಬ್ಬರ ಎಬ್ಬಿಸಿದ್ದ ಕಾರಣ ಸಹಜವಾಗಿಯೇ ಈ ಸಿನಿಮಾದಲ್ಲಿನ ಕಲಾವಿದರು ಪಡೆದಿರುವ ಸಂಭಾವನೆ ಬಗ್ಗೆ ಸಹಾ ಜನರ ಗಮನ ಹರಿದಿದೆ.

ಅನೇಕರ ಮನಸ್ಸಿನಲ್ಲಿ ಇಂತಹ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟನೆಗೆ ನಟ, ನಟಿಯರು ಎಷ್ಟು ಸಂಭಾವನೆ ಪಡೆದಿದ್ದಾರೆ, ಅದರಲ್ಲೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ಅವರ ಸಂಭಾವನೆ ಎಷ್ಟು ಎನ್ನುವುದನ್ನು ತಿಳಿಯುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ. ಕೆಜಿಎಫ್-2 ಸಿನಿಮಾದಲ್ಲಿನ ನಟನೆಗೆ ಕಲಾವಿದರು ಪಡೆದಿರುವ ಸಂಭಾವನೆಯ ಬಗ್ಗೆ ಈಗ ಸುದ್ದಿಗಳು ಹರಿದಾಡಿದ್ದು, ನಟ, ನಟಿಯರು ಪಡೆದಿರುವ ಸಂಭಾವನೆ ಮೊತ್ತ ಖಂಡಿತ ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸುತ್ತಿದೆ.

ಹಾಗಾದರೆ ಕೆಜಿಎಫ್ ಸಿನಿಮಾಕ್ಕಾಗಿ ಯಾವ ನಟರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದರ ಬಗ್ಗೆ ಹರಿದಾಡಿರುವ ಸುದ್ದಿಗಳ ಬಗ್ಗೆ ಗಮನಹರಿಸಿದರೆ, ಕೆಜಿಎಫ್-2 ಸಿನಿಮಾಕ್ಕಾಗಿ ನಟ ಯಶ್, ಪ್ರಶಾಂತ್ ನೀಲ್ ಅವರು ಬರೋಬ್ಬರಿ ಮೂರು ವರ್ಷಗಳ ಕಾಲವನ್ನು ಮೀಸಲಿಟ್ಟಿದ್ದಾರೆ. ಶ್ರಮ ವಹಿಸಿದ್ದಾರೆ. ಕೆಜಿಎಫ್-2 ಸಿನಿಮಾಕ್ಕಾಗಿ ನಟ ಯಶ್ ಅವರು ಸುಮಾರು 25-30 ಕೋಟಿ ರೂ.‌ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಮಾದ್ಯಮಗಳಲ್ಲಿ ವರದಿಯಾಗಿದೆ.

ಇದೇ ಸಿನಿಮಾಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪಡೆದಿರುವ ಸಂಭಾವನೆಯು ಸುಮಾರು 15 ರಿಂದ 20 ಕೋಟಿ ರೂಪಾಯಿಗಳು ಎನ್ನಲಾಗಿದೆ. ಈ ಸಿನಿಮಾದ ನಾಯಕಿಯಾಗಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಪಾತ್ರಕ್ಕೆ ಸುಮಾರು 3 ರಿಂದ 4 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂದು ಸುದ್ದಿಯಾಗಿದೆ. ಇನ್ನು ಇದೇ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದ್ದು, ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಹಾಗೂ ದಕ್ಷಿಣ ಸಿನಿಮಾ ರಂಗದ ನಟ ಪ್ರಕಾಶ್ ರೈ ಸಹಾ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.