ಕೆಜಿಎಫ್ ಸಿನಿಮಾ ಬಗ್ಗೆ ಬೋಲ್ಡ್ ನಟಿಯ ಬೇಸರ: ಆದರೆ ಈ ಬೇಸರದ ಹಿಂದಿನ ಕಾರಣವೇನು ಗೊತ್ತಾ??

Entertainment Featured-Articles News

ಬಿ ಟೌನ್ ನಲ್ಲಿ ಸಖತ್ ಬೋಲ್ಡ್ ಡ್ರೆಸ್ ಗಳನ್ನು ತೊಟ್ಟು ಮಾದ್ಯಮಗಳು ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸುವ ನಟಿ ಉರ್ಫಿ ಜಾವೇದ್ ಸದ್ಯಕ್ಕಂತೂ ಡ್ರೆಸ್ ಗಳಿಂದಾಗಿನೇ ಹಾಟ್ ಟಾಪಿಕ್ ಆಗಿದ್ದಾರೆ. ಉರ್ಫಿ ಜಾವೇದ್ ಹೆಚ್ಚು ಜನಪ್ರಿಯತೆ ಪಡೆದಿದ್ದು ಮತ್ತು ಜನರಿಗೆ ಹೆಚ್ಚು ಪರಿಚಯವಾಗಿದ್ದು ಓಟಿಟಿ ಬಿಗ್ ಬಾಸ್ ಆವೃತ್ತಿಯ ಮೂಲಕ. ಬಿಗ್ ಬಾಸ್ ನಿಂದ ಬಂದ ಮೇಲೆ ಯಾವುದೇ ಹೊಸ ಸಿನಿಮಾ ಅಥವಾ ಜಾಹೀರಾತಿನಿಂದ ನಟಿ ಸದ್ದು ಮಾಡದೇ ಹೋದರೂ ತೊಡುವ ಬೋಲ್ಡ್ ಡ್ರೆಸ್ ಗಳಿಂದಾಗಿ ಬಿ ಟೌನ್ ನ ಸುದ್ದಿಗಳಲ್ಲಿ ಭರ್ಜರಿ ಬ್ಯುಸಿಯಾಗಿದ್ದಾರೆ ಉರ್ಫಿ.

ಇಷ್ಟು ದಿನ ತನ್ನ ಬೋಲ್ಡ್ ಡ್ರೆಸ್ ಗಳಿಂದಾಗಿ ಸುದ್ದಿಯಾಗುತ್ತಿದ್ದ, ಉರ್ಫಿ ಜಾವೇದ್ ಈಹ ಸಿನಿಮಾವೊಂದರ ವಿಷಯದಲ್ಲಿ ಚರ್ಚೆಗೆ ಕಾರಣವಾಗಿರುವುದು ಮಾತ್ರವಲ್ಲದೇ ಸ್ಟಾರ್ ನಟನ ಅಭಿಮಾನಿಗಳ ಅಸಮಾಧಾನಕ್ಕೆ ಸಹಾ ಕಾರಣವಾಗಿದ್ದಾರೆ. ಪ್ರಸ್ತುತ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ಕೆಜಿಎಫ್-2 ಸಿನಿಮಾದ ಕುರಿತಾಗಿ ಉರ್ಫಿ ಅವರನ್ನು ಪ್ರಶ್ನೆಯೊಂದು ಕೇಳಲಾಗಿದ್ದು, ಈ ಪ್ರಶ್ನೆಗೆ ಕ್ಯಾಮರಾಗಳ ಮುಂದೆ ಉರ್ಫಿ ನೀಡಿದ ಉತ್ತರ ಇದೀಗ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಏಪ್ರಿಲ್ 14ಕ್ಕೆ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಸಿನಿಮಾ ಟ್ರೈಲರ್ ಇಲ್ಲ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಯಶ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕೆಜಿಎಫ್-2 ಆ ಮಟ್ಟದಲ್ಲಿ ಕ್ರೇಜ್ ಸೃಷ್ಟಿ ಮಾಡಿದೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಮುಂಬೈನ ಪಾಪರಾಜಿ ಗಳು ( ಸೆಲೆಬ್ರಿಟಿ ಫೋಟೋಗ್ರಾಫರ್ಸ್ ) ಉರ್ಫಿ ಅವರನ್ನು ಕೆಜಿಎಫ್ ಟು ಸಿನಿಮಾದ ಟ್ರೈಲರ್ ನೋಡಿದ್ದೀರಾ?? ಎನ್ನುವ ಪ್ರಶ್ನೆ ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರ ನೀಡಿದ ಉರ್ಪಿ, ಇಲ್ಲ ನಾನಿನ್ನೂ ನೋಡಿಲ್ಲ. ಅಲ್ಲದೇ ನಾನು ಕೆಜಿಎಫ್ ಚಾಪ್ಟರ್ ಒನ್ ಸಿನಿಮಾ ಕೂಡಾ ಇನ್ನೂ ನೋಡಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಅದೇ ವೇಳೆ ಉರ್ಫಿ ಸಿನಿಮಾ ನೋಡಿಲ್ಲ ಎನ್ನುವ ಬೇಸರ ಇದೆ. ಎರಡು ಸಿನಿಮಾಗಳನ್ನು ಒಟ್ಟಿಗೆ ನೋಡುವ ಪ್ಲಾನ್ ಮಾಡುತ್ತಿದ್ದೇನೆ ಎನ್ನುವ ಮಾತು ಹೇಳಿದ್ದು, ದಕ್ಷಿಣದ ಸಿನಿಮಾಗಳನ್ನು ನೋಡುವ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ, ತಾನು ದಕ್ಷಿಣದ ಸಿನಿಮಾಗಳನ್ನು ಸಹಾ ನೋಡುತ್ತೇನೆ, ದಕ್ಷಿಣದಲ್ಲಿ ಹ್ಯಾಂಡ್ಸಮ್ ಹೀರೋಗಳು ಇದ್ದಾರೆ ಎನ್ನುವ ಮಾತು ಹೇಳಿದ್ದಾರೆ.

Leave a Reply

Your email address will not be published.