ಕೃಷಿ ಮಸೂದೆ ಹಿಂಪಡೆತ: ಸಿಟ್ಟಾದ ಕಂಗನಾ, ಸೋನು ಸೂದ್, ತಾಪ್ಸಿ ಪನ್ನು ಸಂಭ್ರಮಿಸಿದ್ದು ಹೀಗೆ.
ಕೇಂದ್ರ ಸರ್ಕಾರದ ವಿ ವಾ ದಿ ತ ಕೃಷಿ ಮಸೂದೆಯ ವಿಷಯ ಭಾರೀ ಚ ರ್ಚೆಗೆ ಕಾರಣವಾಗಿತ್ತು. ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರೈತರು ಪ್ರತಿ ಭಟನೆಯನ್ನು ನಡೆಸುತ್ತಿದ್ದರು. ಇವೆಲ್ಲವುಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಮೂರು ಕೃಷಿ ಮಸೂದೆಗಳನ್ನು ಸರ್ಕಾರ ಹಿಂಪಡೆಯುತ್ತಿದೆ ಎಂದು ಘೋಷಣೆಯನ್ನು ಮಾಡಿದ ಬೆನ್ನಲ್ಲೇ ದೇಶ ವ್ಯಾಪಿಯಾಗಿ ಭಿನ್ನ, ವಿಭಿನ್ನ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಕೆಲವರು ಇದು ಕೃಷಿ ಆಂದೋಲನಕ್ಕೆ ಸಿಕ್ಕ ಗೆಲುವು ಎಂದು ಸಂಭ್ರಮಿಸಿದ್ದಾರೆ, ಇನ್ನೂ ಕೆಲವರು ಬೇಸರ, ಅಸಮಾಧಾನ ಹಾಗೂ ಹತಾಶೆ ಯನ್ನು ಹೊರ ಹಾಕಿದ್ದಾರೆ.
ಕೃಷಿ ಮಸೂದೆಗಳನ್ನು ಹಿಂಪಡೆದ ವಿಚಾರವಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಕಂಗನಾ ಸೋಶಿಯಲ್ ಮೀಡಿಯಾದಲ್ಲಿ, “ದುಃಖಕರ, ನಾಚಿಕೆಗೇಡಿತನ ಮತ್ತು ಸಂಪೂರ್ಣ ತಪ್ಪು. ಸಂಸತ್ತಿನಲ್ಲಿ ಕೂರುವ ಸರ್ಕಾರಕ್ಕೆ ಬದಲಾಗಿ, ಬೀದಿಯಲ್ಲಿ ಕುಳಿತುಕೊಳ್ಳುವ ಜನರು ಕಾನೂನು ಮಾಡಲು ಪ್ರಾರಂಭಿಸಿದರೆ, ಇದೊಂದು ಜಿ ಹಾ ದಿ ದೇಶವಾಗಿದೆ. ಇದನ್ನು ಬಯಸಿದ ಎಲ್ಲರಿಗೂ ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ನಟ ಸೋನು ಸೂದ್ ಅವರು ಮೂರು ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆದಿರುವ ಸರ್ಕಾರದ ನಿರ್ಧಾರವನ್ನು ಸ್ವಾಗಿತಿಸುತ್ತಾ, “ರೈತರು ಮತ್ತೆ ತಮ್ಮ ಹೊಲಗಳಿಗೆ ಮರಳುತ್ತಾರೆ, ದೇಶದ ಹೊಲಗಳು ಹೊಳೆಯುತ್ತವೆ. ಇಂತಹುದೊಂದು ಐತಿಹಾಸಿಕ ನಿರ್ಣಯದ ಮೂಲಕ ರೈತರ ಗುರು ಪೂರ್ಣಿಮಾ ಇನ್ನಷ್ಟು ಐತಿಹಾಸಿಕವಾಯಿತು. ಜೈ ಜವಾನ್, ಜೈ ಕಿಸಾನ್” ಎಂದು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.
ನಟಿ ತಾಪ್ಸಿ ಪನ್ನು ಗುರು ಪೂರ್ಣಿಮೆಯ ಶುಭಾಶಯಗಳು ಎಂದು ಶುಭಾಶಯ ತಿಳಿಸುತ್ತಾ ಮೂರು ಕೃಷಿ ಮಸೂದೆಗಳು ಹಿಂಪಡೆದ ಪಿಎಂ ಎನ್ನುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಪಂಜಾಬಿ ಗಾಯಕಿ ಹಿಮಾನ್ಷಿ, ಕೊನೆಗೂ ಎಲ್ಲಾ ರೈತ ಸಹೋದರರಿಗೆ ಜಯ ಸಿಕ್ಕಿತು. ಎಲ್ಲಾ ರೈತ ಸಹೋದರರಿಗೆ ಗುರು ಪೂರ್ಣಿಮೆಯ ಶುಭಾಶಯಗಳು ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.