ಕುರಿಗೆ 3 ವರ್ಷಗಳ ಜೈಲು ಶಿಕ್ಷೆ: ಕುರಿ ಮಾಡಿದ ಅಪರಾಧ ತಿಳಿದರೆ ಶಾಕ್ ಆಗ್ತೀರಾ!
ಸಾಮಾನ್ಯವಾಗಿ ತಪ್ಪು ಮಾಡಿದವರಿಗೆ, ಕಾನೂನಿನ ವಿ ರು ದ್ಧವಾಗಿ ನಡೆದವರಿಗೆ ಕಾನೂನಿನ ಮೂಲಕವೇ ಶಿಕ್ಷೆಯನ್ನು ನೀಡುವುದು ಬಹುತೇಕ ಎಲ್ಲ ದೇಶಗಳಲ್ಲೂ ಕೂಡಾ ನಡೆದು ಬರುತ್ತಿರುವ ಕಾನೂನಾತ್ಮಕ ಸಂಪ್ರದಾಯವಾಗಿದೆ. ಆದರೆ ಪ್ರಾಣಿಗಳಿಗೂ ಶಿಕ್ಷೆ ನೀಡುವುದು ಆಗೊಮ್ಮೆ ಈಗೊಮ್ಮೆ ನಡೆದರೂ ಅದು ದೊಡ್ಡ ಸುದ್ದಿಯಾಗುತ್ತದೆ. ಇದೀಗ ಕುರಿಯೊಂದಕ್ಕೆ ಜೈಲು ಶಿಕ್ಷೆಯನ್ನು ವಿಧಿಸಿದ ಪ್ರಕರಣವು ಇಡೀ ವಿಶ್ವದಾದ್ಯಂತ ಸಂಚಲನವನ್ನು ಸೃಷ್ಟಿಸಿದೆ. ಇಂತಹದ್ದೊಂದು ವಿಚಿತ್ರ ಘಟನೆಯು ಸೂಡಾನ್ ದೇಶದಲ್ಲಿ ನಡೆದಿದೆ. ಇಲ್ಲಿ ಕುರಿಗೆ ಜೈಲು ಶಿಕ್ಷೆಯನ್ನು ವಿಧಿಸಿದ ವಿಚಾರವಾಗಿ ಸುದ್ದಿಯಾದಾಗ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಈ ವಿಷಯದ ವಿವರಗಳಿಗೆ ಹೋದರೆ ಈ ವಿಚಿತ್ರವಾದ ಘಟನೆ ರುಂಬೆಕ್ ಈಸ್ಟ್ ನಲ್ಲಿನ ಅಕುಲ್ ಯೋಲ್ ಎನ್ನುವ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಅದಿಯಾ ಚಾಂಪಿಂಗ್ ಎನ್ನುವ ಹೆಸರಿನ 45 ವರ್ಷ ವಯಸ್ಸಿನ ಮಹಿಳೆಯ ಮೇಲೆ ದಷ್ಟಪುಷ್ಟವಾಗಿ ಬೆಳೆದಿದ್ದ ಕುರಿಯೊಂದು ದಾಳಿ ಮಾಡಿದೆ. ಕುರಿಯ ಈ ದಾಳಿಯಿಂದ ಗಾಯಗೊಂಡ ಆಕೆ ಸಾವನ್ನಪ್ಪಿದ್ದಾಳೆ. ಅನಂತರ ಈ ವಿಚಾರವು ಕೋರ್ಟ್ ಮೆಟ್ಟಿಲನ್ನೂ ಏರಿದೆ.
ಪ್ರಕರಣದ ವಿಚಾರಣೆಯನ್ನು ನಡೆಸಿದ ಕೋರ್ಟ್ ಮಹಿಳೆಯ ಸಾವಿಗೆ ಕಾರಣವಾದ ಕುರಿಯನ್ನು ಮೂರು ವರ್ಷಗಳ ಕಾಲ ಬಂಧಿಸುವಂತೆ ಆದೇಶವನ್ನು ನೀಡಿದ್ದು, ದಕ್ಷಿಣ ಸೂಡಾನಿನ ಮಿಲಿಟರಿ ಕ್ಯಾಂಪಿನಲ್ಲಿ ಅದನ್ನು ಬಂಧಿಸಿ ಇಡಬೇಕೆಂದು ಸೂಚನೆಯನ್ನು ನೀಡಿದೆ. ಇನ್ನು ಕುರಿಯ ಮಾಲೀಕನು ಆ ಮಹಿಳೆಯ ಕುಟುಂಬಕ್ಕೆ ಐದು ಹಸುಗಳನ್ನು ಪರಿಹಾರವಾಗಿ ನೀಡಬೇಕು ಎಂದು ಕೋರ್ಟ್ ಸೂಚನೆಯನ್ನು ನೀಡಿದೆ. ಅಲ್ಲದೇ ಮೂರು ವರ್ಷಗಳ ನಂತರ ಕುರಿ ಶಿಕ್ಷೆಯನ್ನು ಮುಗಿಸಿ ಬಂದ ಮೇಲೆ ಅದನ್ನು ಸಹಾಗ ಅದೇ ಕುಟುಂಬಕ್ಕೆ ನೀಡಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಕೋರ್ಟ್ ನ ಆದೇಶದ ಅನ್ವಯ ಪೊಲೀಸ್ ಅಧಿಕಾರಿ ಮೇಜರ್ ಎಲಿಜಾ ಮೆಬರ್ ಅವರು ತಪ್ಪು ಮಾಡಿರುವಂತಹ ಕುರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ಅವರು ಕುರಿಯು ಮಾಡಿದ ತಪ್ಪಿನಲ್ಲಿ ಅದರ ಅಮಾಯಕನಾದ ಮಾಲೀಕನಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವ ಮಾತನ್ನು ಸಹಾ ಹೇಳಿದ್ದಾರೆ. ಆದರೆ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.