ಕುದುರೆ ಲಾಳವನ್ನು ಮನೆಯಲ್ಲಿ ಈ ವಿಧಾನ ಅನುಸರಿಸಿ ಇಟ್ಟರೆ, ನಿಮ್ಮೆಲ್ಲಾ ಸಮಸ್ಯೆಗಳಿಗೆ ಸಿಗುತ್ತದೆ ಮುಕ್ತಿ

Entertainment Featured-Articles News ಜೋತಿಷ್ಯ

ತಮ್ಮ ಮನೆಗಳಲ್ಲಿ ಸದಾ ಕಾಲ ಸುಖ, ಶಾಂತಿ ಇರಬೇಕು ಹಾಗೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಎನ್ನುವುದು ಬಹಳಷ್ಟು ಜನರ ಆಲೋಚನೆ ಮಾತ್ರವೇ ಅಲ್ಲ ಆಸೆ ಕೂಡಾ ಆಗಿರುತ್ತದೆ. ಅದಕ್ಕಾಗಿ ಅನೇಕ ಜನರು ತಮಗೆ ಗೊತ್ತಿರುವಂತಹ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ವಾಸ್ತು ಪ್ರಕಾರ ಏನೆಲ್ಲಾ ಮಾಡಲು ಸಾಧ್ಯವಿದೆಯೋ ಅದರ ಕಡೆಗೆ ಗಮನವನ್ನು ನೀಡುತ್ತಾರೆ. ಇಂದು ನಾವು ಅಂತಹುದೇ ಒಂದು ವಿಚಾರದ ಕುರಿತಾಗಿ ಹೇಳಲು ಹೊರಟಿದ್ದು, ವಾಸ್ತುವಿನ ವಿಚಾರವನ್ನು ನಂಬುವವರಿಗೆ ಇದು ಒಂದು ಅತ್ಯುತ್ತಮ ಮಾಹಿತಿ ಖಂಡಿತ ಆಗಲಿದೆ.

ಕೆಲವೊಂದು ನಂಬಿಕೆಗಳ ಪ್ರಕಾರ ಕುದುರೆಯ ಲಾಳದಿಂದಲೂ ಮನೆಯಲ್ಲಿ ಇರುವಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗಿದೆ. ಹೌದು, ಮನೆಯಲ್ಲಿ ಕುದುರೆ ಲಾಳವನ್ನು ಇಡುವುದರಿಂದ ಸುಖ-ಶಾಂತಿ ಗಳು ನೆಲೆಸುವುದು ಮಾತ್ರವಲ್ಲದೇ, ಮನೆಯಲ್ಲಿ ಹಣದ ಕೊರತೆಯ ಸಮಸ್ಯೆ ಕೂಡಾ ನೀಗುತ್ತದೆ ಎಂದು ಹೇಳಲಾಗಿದೆ. ಈ ವಿಚಾರ ತಿಳಿದ ಮೇಲೆ ನಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ, ಹಾಗಾದರೆ ಕುದುರೆ ಲಾಳವನ್ನು ಹೇಗೆ ಇಡಬೇಕು? ಎನ್ನುವುದು. ಇಂದು ನಾವು ನಿಮ್ಮ ಈ ಪ್ರಶ್ನೆಗೆ ಉತ್ತರವನ್ನು ಹೇಳಲು ಹೊರಟಿದ್ದೇವೆ.

ಮೊದಲಿಗೆ ಮಾರುಕಟ್ಟೆಯಿಂದ ಒಂದು ಕುದುರೆ ಲಾಳವನ್ನು ಖರೀದಿಸಿ ತರಬೇಕು. ಒಂದು ವೇಳೆ ನಿಮಗೆ ಅದನ್ನು ಖರೀದಿಸುವುದು ಇಷ್ಟ ಇಲ್ಲ ಎನ್ನುವುದಾದರೆ ಕಬ್ಬಿಣದ ಕೆಲಸ ಮಾಡುವವರಿಂದ ಹೊಸ ಲಾಳವನ್ನು ಮಾಡಿಸಿಕೊಳ್ಳಬಹುದು. ಹೀಗೆ ಕುದುರೆ ಲಾಳವನ್ನು ತಂದ ನಂತರ ಬೆಳಗಿನ ಜಾವ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ ಕುದುರೆ ಲಾಳವನ್ನು ಪವಿತ್ರ ಗಂಗಾಜಲದಿಂದ ತೊಳೆಯಬೇಕು. ತೇವವಾದ ಕುದುರೆಗಳನ್ನು ಬಟ್ಟೆಯಿಂದ ಒರೆಸಬಾರದು.

ಕುದುರೆ ಲಾಳವನ್ನು ಸೂರ್ಯನ ಕಿರಣಗಳು ತಾಕುವಂತೆ ಇಟ್ಟು, ಆ ಶಾಖದಿಂದಲೇ ಅದರ ಮೇಲಿನ ನೀರನ್ನು ಒಣಗಿಸಬೇಕು. ಸೂರ್ಯ ಭಗವಾನನ ಕಿರಣಗಳು ತಾಕಿ, ಅದರಿಂದಲೇ ಕುದುರೆ ಲಾಳ ಒಣಗಬೇಕು. ಹೀಗೆ ಮಾಡುವುದರಿಂದ ಕುದುರೆ ನಾಳದಲ್ಲಿ ಸಕಾರಾತ್ಮಕ ಶಕ್ತಿಗಳು ತುಂಬಿಕೊಳ್ಳುತ್ತದೆ ಎಂದು ಹೇಳಲಾಗಿದೆ. ನಂತರ ಅದನ್ನು ಮನೆಯ ಪೂಜಾ ಮಂದಿರದಲ್ಲಿ ದೇವಿ ಲಕ್ಷ್ಮಿಯ ಮುಂದೆ ಇರಿಸಿ ಪೂಜೆಯನ್ನು ಮಾಡಬೇಕು.

ಕುಂಕುಮ ಮತ್ತು ಅಕ್ಷತೆಯನ್ನು ಬಳಸಿ ಮೊದಲು ಮಹಾಲಕ್ಷ್ಮಿಯ ಪೂಜೆಯನ್ನು ಮಾಡಿ. ಅನಂತರ ಕುದುರೆ ಲಾಳಕ್ಕೂ ಪೂಜೆಯನ್ನು ಮಾಡಬೇಕು. ಪೂಜೆ ಮುಗಿದ ನಂತರ ಮತ್ತೆ ಮಹಾಲಕ್ಷ್ಮಿ ಹಾಗೂ ಕುದುರೆ ಲಾಳಕ್ಕೆ ಆರತಿಯನ್ನು ಅರ್ಪಿಸಬೇಕು. ಆರತಿ ಮುಗಿದ ನಂತರ ಕಪ್ಪು ದಾರದಿಂದ ಕುದುರೆ ಲಾಳ ಸುತ್ತಿ ಮನೆಯ ಪೂರ್ವ ಅಥವಾ ಉತ್ತರ ಭಾಗದಲ್ಲಿ ಎಲ್ಲಾದರೂ ಒಂದು ಕಡೆ ನೇತು ಹಾಕಬೇಕು. ಹೀಗೆ ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಸಂಚಾರವಾಗಿ, ಸುಖ-ಶಾಂತಿ ನೆಲೆಸಿ ಅರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಎಂದು ಹೇಳಲಾಗಿದೆ.

Leave a Reply

Your email address will not be published.