ಕುತೂಹಲ ಕೆರಳಿಸಿದ ರಾಧೇ ಶ್ಯಾಮ್: ಟ್ರೈಲರ್, ಟೀಸರ್ ಎರಡರಲ್ಲೂ ಕಾಣ್ತಿಲ್ಲ ಈ ಬಹುಮುಖ್ಯ ಅಂಶ!!

Entertainment Featured-Articles News

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಹಾಗೂ ಸಿಕ್ಕಾಪಟ್ಟೆ ಕುತೂಹಲವನ್ನು ಕೆರಳಿಸಿರುವ ಸಿನಿಮಾ ರಾಧೇ ಶ್ಯಾಮ್ ಇನ್ನು ಬೆರಳೆಣಿಕೆಯಷ್ಟು ದಿನಗಳಲ್ಲೇ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಜನಪ್ರಿಯ ತಾರೆಗಳೊಂದಿಗೆ, ಬಹು ಕೋಟಿ ವೆಚ್ಚದಲ್ಲಿ ವಿಭಿನ್ನ ಕಥಾನಕದ ಮೂಲಕ ಮೂಡಿ‌ ಬಂದಿರುವ ಈ ಸಿನಿಮಾ ಟೀಸರ್, ಟ್ರೈಲರ್ ಈಗಾಗಲೇ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಕುತೂಹಲವನ್ನು ಕೆರಳಿಸಿದೆ ಹಾಗೂ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ‌.

ಹೀಗೆ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತರರಾಗಿರುವಾಗಲೇ ಈ ಸಿನಿಮಾದ ಕುರಿತಾದ ಒಂದು ವಿಶೇಷ ಹಾಗೂ ಆಸಕ್ತಿಕರ ಮಾಹಿತಿಯೊಂದು ಈಗ ಎಲ್ಲರ ಕುತೂಹಲವನ್ನು ಹೆಚ್ಚಿಸಿದೆ. ಹೌದು ರಾಧೇ ಶ್ಯಾಮ್ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಗಮನಿಸಿದರೆ ಒಂದು ಪ್ರಮುಖವಾದ ವಿಷಯ ನಮಗೆ ಕಾಣುತ್ತದೆ. ಆದರೆ ನಾವು ಅತ್ತ ಕಡೆ ಅಷ್ಟಾಗಿ ಗಮನ ಹರಿಸಿಲ್ಲವಷ್ಟೇ.. ಆದರೆ ಅಂತಹ ಬಹು ಮುಖ್ಯ ವಿಷಯ ನಮ್ಮ ಆಲೋಚನೆಗೆ ಏಕೆ ಬರಲಿಲ್ಲ ಎನಿಸಬಹುದು.

ಹೌದು, ಪ್ರಭಾಸ್ ಅಭಿನಯದ ಈ ಹೊಸ ಸಿನಿಮಾದ ಟೀಸರ್, ಟ್ರೈಲರ್ ನಲ್ಲಿ ಎಲ್ಲೂ ಸಹಾ ನಮಗೆ ವಿಲನ್ ಪಾತ್ರಧಾರಿಯ ಅಬ್ಬರ ಕಾಣಿಸಿಲ್ಲ. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾದಲ್ಲಿ ವಿಲನ್ ಅಬ್ಬರ ಸಹಾ ಜೋರಾಗಿಯೇ ಇರುತ್ತದೆ. ಆದರೆ ರಾಧೇ ಶ್ಯಾಮ್ ಸಿನಿಮಾದಲ್ಲಿ ಎಲ್ಲೂ ಕೂಡಾ ವಿಲನ್ ಬಗ್ಗೆ ಯಾವುದೇ ಸಣ್ಣ ಮಾಹಿತಿ ಕೂಡಾ ನೋಡಲು ಸಿಕ್ಕಿಲ್ಲ. ಇದರಿಂದ ಸಹಜವಾಗಿಯೇ ಅಭಿಮಾನಿಗಳು ಈ ಸಿನಿಮಾದಲ್ಲಿ ವಿಲನ್ ಇಲ್ಲ ಎಂದೇ ಅಭಿಪ್ರಾಯ ಪಟ್ಟಿದ್ದಾರೆ.

ಹಾಗಾದ್ರೆ ನಿಜಕ್ಕೂ ಈ ಸಿನಿಮಾದಲ್ಲಿ ವಿಲನ್ ಇಲ್ಲವೇ? ಸಿನಿಮಾ ನೋಡೋ ವರೆಗೆ ಇದಕ್ಕೆ ಉತ್ತರ ಇಲ್ಲ. ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಈ ಸಿನಿಮಾದಲ್ಲಿ ಫೈಟ್ ಗಳು ಸಹಾ ಇಲ್ಲ ಎನ್ನಲಾಗುತ್ತಿದೆ. ರಾಧೇ ಶ್ಯಾಮ್ ನಲ್ಲಿ ಖಳ ನಾಯಕನೂ ಇಲ್ಲ,‌ ಫೈಟಿಂಗ್ ಕೂಡಾ ಇಲ್ಲ ಎನ್ನುವುದೇ ಅನೇಕರ ಕುತೂಹಲವನ್ನು ಕೆರಳಿಸಿದೆ‌. ಬಾಹುಬಲಿ ಹಾಗೂ ಸಾಹೋ ನಂತರ ಪ್ರಭಾಸ್ ಅವರ ಈ ಹೊಸ ಸಿನಿಮಾದಲ್ಲಿ ಊಹಿಸಿರದ ಟ್ವಿಸ್ಟ್ ಏನಿದು? ವಿಲನ್ ಮತ್ತು ಫೈಟ್ ಇಲ್ಲ ಅಂದ್ರೆ ಮತ್ತೇನೋ ವಿಶೇಷ ಖಂಡಿತ ಇದೆ ಅಂತಿದ್ದಾರೆ ಅಭಿಮಾನಿಗಳು.

Leave a Reply

Your email address will not be published. Required fields are marked *