ಕುಡಿದ ಮತ್ತಿನಲ್ಲಿ ಮದುವೆ ಗಂಡು ಮಾಡಿದ ದೊಡ್ಡ ಎಡವಟ್ಟು: ವೈರಲ್ ಆಯ್ತು ವೀಡಿಯೋ

Entertainment Featured-Articles News Viral Video

ಸೋಶಿಯಲ್ ಮೀಡಿಯಾದಲ್ಲಿ ದಿನವೊಂದಕ್ಕೆ ಬಹಳಷ್ಟು ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ.‌ ಅವುಗಳಲ್ಲಿ ಮದುವೆಯಲ್ಲಿ ನಡೆಯುವ ಫನ್ನಿ ಸನ್ನಿವೇಶಗಳ ವೀಡಿಯೋಗಳು ಬಹಳಷ್ಟು ಜನರ ಮನಸ್ಸು ಗೆಲ್ಲುತ್ತವೆ. ಏಕೆಂದರೆ ಇಂತಹ ವೀಡಿಯೋಗಳು ಬಹಳ ಆಸಕ್ತಿಕರವಾಗಿರುತ್ತವೆ ಮತ್ತು ವಧು ವರನ ನಡುವೆ ನಡೆಯುವ ಹಾಸ್ಯ ಭರಿತ ವರ್ತನೆಗಳು ನೋಡಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗುವ ಹಾಗೆ ಮಾಡುತ್ತವೆ. ವಿವಾಹಕ್ಕೆ ಸಂಭಂದಿಸಿದ ಚಿತ್ರ ವಿಚಿತ್ರ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಹುಟ್ಟು ಹಾಕುತ್ತವೆ.

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಮದುವೆಯ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಸೆರೆಯಾಗಿರುವಂತಹ ಸನ್ನಿವೇಶವನ್ನು ಒಮ್ಮೆ ನೋಡಿದರೆ ನೀವು ಸಹಾ ನಿಮ್ಮ ನಗುವನ್ನು ತಡೆದುಕೊಳ್ಳುವುದು ಖಂಡಿತ ಸಾಧ್ಯವಿಲ್ಲ. ಹಾಗಾದರೆ ಇಷ್ಟೊಂದು ವೈರಲ್ ಆಗಿರುವ ವೀಡಿಯೋದಲ್ಲಿನ ಸನ್ನಿವೇಶದ ಬಗ್ಗೆ ಹೇಳುವುದಾದರೆ, ನಿಮಗೆ ಈ ವೀಡಿಯೋದಲ್ಲಿ ವರನು ಸ್ಟೇಜ್ ಮೇಲೆ ಕುಡಿದ ಮತ್ತಿನಲ್ಲಿ ಇರುವುದು ಸ್ಪಷ್ಟವಾಗಿ ನಮಗೆ ಕಾಣುತ್ತದೆ.‌

ಹೀಗೆ ಕುಡಿದ ಮತ್ತಿನಲ್ಲಿದ್ದ ವರನು ವಧುವಿನ ಕೊರಳಿಗೆ ಹಾರವನ್ನು ಹಾಕುವ ಘಳಿಗೆ ಬಂದಾಗ, ಆದರೆ ವರನಿಗೆ ಆ ಸಂದರ್ಭದಲ್ಲಿ ತಾನು ಏನು ಮಾಡಬೇಕೆಂದು ಅರ್ಥ ಕೂಡಾ ಆಗದಷ್ಟು ಮತ್ತಿನಲ್ಲಿ ತೂರಾಡುತ್ತಾ, ವಧುವಿಗೆ ಹಾಕಬೇಕಾದ ಹೂ ವಿನ ಹಾರವನ್ನು ವಧುವಿನ ಬದಲಾಗಿ ಆಕೆಯ ತಾಯಿ ಅಂದರೆ ತನ್ನ ಅತ್ತೆಗೆ ಹಾಕಲು ಮುಂದಾಗುತ್ತಾನೆ. ಆದರೆ ಆತನ ಸುತ್ತ ಇದ್ದವರು ಅದನ್ನು ತಡೆಯುವುದನ್ನು ನಾವು ಗಮನಿಸಬಹುದು.

ಅನಂತರ ವಧುವಿಗೆ ಹಾರವನ್ನು ಹಾಕಲು ಮುಂದಾಗುತ್ತಾನೆ ಆದರೆ ಅವನಿಂದ ಅದು ಸಹಾ ಸಾಧ್ಯವಾಗುವುದಿಲ್ಲ. ಮದ್ಯದ ಮತ್ತಿನಲ್ಲಿ ವಧುವಿನ ಕೊರಳಿಗೆ ಹಾರವನ್ನು ಹಾಕುವಾಗಲೇ ಕೆಳಗೆ ಬೀಳುತ್ತಾನೆ. ವಧು ಗಾಬರಿಯಾಗುತ್ತಾಳೆ. ವೀಡಿಯೋ ವೈರಲ್ ಆಗಿದ್ದು ನೋಡಿದ ನೆಟ್ಟಿಗರು ವರನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮದುವೆ ದಿನವೂ ಸಹಾ ಮದ್ಯಪಾನ ಮಾಡಬೇಕಿತ್ತಾ? ಎಂದಿದ್ದಾರೆ. ಇಂತಹವನನ್ನು ಮದುವೆಯಾದರೆ ಆ ಹುಡುಗಿಯ ಪರಿಸ್ಥಿತಿ ಏನು? ಎಂದು ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published.