ಕುಡಿದು ಬಂದ ಮಹಿಳೆಯನ್ನು ಉದ್ಯೋಗದಿಂದ ತೆಗೆದ ಕಂಪನಿ, ನಂತರ ಲಕ್ಷ ಲಕ್ಷ ತೆರಬೇಕಾಯಿತು

0
197

ಸಾಮಾನ್ಯವಾಗಿ ನಾವು ಉದ್ಯೋಗ ಮಾಡುವ ಸ್ಥಳಗಳಲ್ಲಿ ನಾವು ಕೆಲವು ನಿಯಮಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಅಲ್ಲದೇ ನಿಯಮಗಳನ್ನು ಉಲ್ಲಂಘನೆ ಮಾಡಿದಂತಹ ಸಂದರ್ಭದಲ್ಲಿ ಅಂತಹ ಉದ್ಯೋಗಿ ಗಳ ಮೇಲೆ ಶಿಸ್ತಿನ ಕ್ರಮ ಜರುಗಿಸುವುದು, ಕೆಲವೊಮ್ಮೆ ಅವರನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಶಿ ಕ್ಷೆ ಯನ್ನು ನೀಡಲಾಗುತ್ತದೆ. ಆದರೆ ಇಲ್ಲೊಂದು ಆಶ್ಚರ್ಯಕರ ಘಟನೆಯಲ್ಲಿ ನಿಯಮ ಪಾಲನೆ ಮಾಡದ ಮಹಿಳೆಯೊಬ್ಬರನ್ನು ಉದ್ಯೋಗದಿಂದ ತೆಗೆದ ಕಂಪನಿ, ಆ ಮಹಿಳೆಗೆ ಲಕ್ಷಗಳಲ್ಲಿ ಹಣವನ್ನು ಕೂಡಾ ನೀಡಿರುವ ವಿಚಿತ್ರ ನಡೆದಿದೆ.

ಹೌದು ಈ ಘಟನೆ ವಿಚಿತ್ರ ಎನಿಸಿದರೂ ಸಹಾ ವಾಸ್ತವವಾಗಿದೆ. ಸ್ಕಾಟ್ಲೆಂಡ್ ನಲ್ಲಿ ಒಂದು ಕಂಪನಿ ಮಹಿಳೆಯೊಬ್ಬರು ನಿಯಮ ಉಲ್ಲಂಘನೆ ಮಾಡಿದ್ದರಿಂದ ಆಕೆಯನ್ನು ಕೆಲಸದಿಂದ ಏನೋ‌ ತೆಗೆದಿದೆ. ಆದರೆ ಅನಂತರ ಆಕೆಗೆ ಲಕ್ಷಗಳ ಮೊತ್ತದಲ್ಲಿ ಹಣವನ್ನು ಸಹಾ ನೀಡಿದೆ. ಹಾಗಾದರೆ ಏನೀ ವಿಚಿತ್ರವಾದ ಘಟನೆ ಎನ್ನುವ , ಇಷ್ಟಕ್ಕೂ ಮಹಿಳೆ ಮಾಡಿದ್ದೇನು? ವಿವರವಾಗಿ ನಾವು ಸಹಾ ತಿಳಿದುಕೊಳ್ಳೋಣ ಬನ್ನಿ. ಈ ಪೂರ್ತಿ ಘಟನೆ ನಿಜಕ್ಕೂ ವಿಚಿತ್ರ ಎನಿಸಬಹುದು.

ಸ್ಕಾಟ್ಲೆಂಡ್‌ ದೇಶದ ಎಡಿನ್ ಬರ್ಗ್ ನಲ್ಲಿ ಈ ಘಟನೆ ವರದಿಯಾಗಿದೆ. ಇಲ್ಲಿನ ಕಂಪನಿಯೊಂದರ ಮಹಿಳಾ ಉದ್ಯೋಗಿ ಗಳಲ್ಲಿ ಒಬ್ಬರಾದ ಮಾಲ್ಗೊರ್ಜಾನಾ ಕ್ರಾನಿಕ್ ಹೆಸರಿನ ಮಹಿಳೆಯನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿತ್ತು. ಇದಕ್ಕೆ ಕಾರಣ ಆಕೆ ಮದ್ಯಪಾನ ಮಾಡಿ ಕೆಲಸಕ್ಕೆ ಬಂದಿದ್ದಳು ಎನ್ನಲಾಗಿದ್ದು, ಕಂಪನಿ ಶಿಸ್ತಿನ ಕ್ರಮವನ್ನು ಜರುಗಿಸಿತ್ತು. ಕಂಪನಿಯ ನಿಯಮಗಳ ಪ್ರಕಾರ ಉದ್ಯೋಗಿಗಳ ಕೆಲಸಕ್ಕೆ ಹಾಜರಾಗುವ ಒಂಬತ್ತು ಗಂಟೆಗಳ ಮುನ್ನ ಮದ್ಯಪಾನ ಮಾಡಿರಬಾರದು.

ಆದರೆ ಈ ಮಹಿಳೆ ಕಂಪನಿಯ ನಿಯಮ ಗಾಳಿಗೆ ತೂರಿ ಕುಡಿದು ಕಛೇರಿಗೆ ಬಂದಿದ್ದಾಗಿತ್ತು. ಡೈಲಿ ಮೇಲ್ ನ ವರದಿಯ ಪ್ರಕಾರ ಮಹಿಳೆಯ ಶಿಫ್ಟ್ ಮಧ್ಯಾಹ್ನ ಎರಡು ಗಂಟೆಗೆ ಪ್ರಾರಂಭವಾಗುತ್ತಿತ್ತು. ಆದರೆ ಆಕೆ ಅಂದು ಬೆಳಿಗ್ಗೆ ಮದ್ಯ ಸೇವನೆ ಮಾಡಿದ್ದಳು. ಹೀಗೆ ಕಛೇರಿಗೆ ಬಂದಾಗ ಆಕೆಯನ್ನು ವಿಚಾರಸಿದಾಗ ಆಕೆ ಮದ್ಯ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಕೂಡಲೇ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

11 ವರ್ಷಗಳಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಕಂಪನಿಯ ನಿರ್ಧಾರದ ವಿ ರು ದ್ಧ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ನಲ್ಲಿ ಆಕೆಗೆ ವಿಜಯ ಸಿಕ್ಕಿದೆ. ಕೋರ್ಟ್ ಕಂಪನಿಗೆ ಆ ಮಹಿಳೆಗೆ ಪರಿಹಾರವಾಗಿ 5,454 ಯೂರೋ ಅಂದರೆ ಸುಮಾರು 5.5 ಲಕ್ಷ ರೂಪಾಯಿಗಳನ್ನು ಕಂಪನಿ ಆ ಮಹಿಳೆಗೆ ಪರಿಹಾರವಾಗಿ ನೀಡಿದೆ. ಉದ್ಯೋಗದಿಂದ ಇನ್ನು ಮುಂದೆ ಯಾರನ್ನಾದರೂ ತೆಗೆಯುವ ಮುನ್ನ ಕಂಪನಿ ಖಂಡಿತ ಇನ್ನೊಮ್ಮೆ ಆಲೋಚಿಸುತ್ತದೆ.

LEAVE A REPLY

Please enter your comment!
Please enter your name here