ಕುಟುಂಬದ ಪ್ರತಿಷ್ಠೆ ಮಣ್ಣು ಪಾಲು ಮಾಡಿದೆ: ವಿಚಾರಣೆ ವೇಳೆ ಪತಿಯ ಮೇಲೆ ಶಿಲ್ಪಾ ಶೆಟ್ಟಿ ಕೋಪ

Written by Soma Shekar

Published on:

---Join Our Channel---

ಅಶ್ಲೀಲ ಸಿನಿಮಾಗಳು ತಯಾರಿಕೆ ಹಾಗೂ ಹಂಚಿಕೆಯ ಕದಲ್ಲಿ ಭಾರತದಲ್ಲಿ ಆರೋಪದಲ್ಲಿ ಬಾಲಿವುಡ್ ನ ಜನಪ್ರಿಯ ನಟಿ ಶಿಲ್ಪ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಈಗಾಗಲೇ ಬಂಧಿಸಲಾಗಿದೆ ಕೋರ್ಟ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳಿಗೆ ವಿಸ್ತರಿಸಿ ಅವರನ್ನು ಜೈಲಿಗೆ ರವಾನಿಸಲಾಗಿದೆ ಬುಧವಾರದಂದು ಅವರ ಜಮೀನಿನ ಅರ್ಜಿ ವಿಚಾರಣೆ ನಡೆಯಲಿದೆ ಎನ್ನಲಾಗಿದೆ ರಾಜ್ ಕುಂದ್ರಾ ಅವರ ಬಂಧನದ ನಂತರ ಜುಲೈ 23ರಂದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ರಾಜ್ ಕುಂದ್ರ ಸಹಿತವಾಗಿ ಶಿಲ್ಪಾ ಶೆಟ್ಟಿ ಹಾಗೂ ರಾಜಕುಂದ್ರ ವಾಸ ವಿರುವ ಮನೆಯ ಮೇಲೆ ತಪಾಸಣೆಯನ್ನು ನಡೆಸಲು ಹೋಗಿದ್ದರು ಎನ್ನಲಾಗಿದೆ.

ಈ ವೇಳೆ ಕನಿಷ್ಠ ಆರು ಗಂಟೆಗಳ ಕಾಲ ಶಿಲ್ಪಾ ಶೆಟ್ಟಿ ಹಾಗೂ ರಾಜಕುಂದ್ರ ಅವರನ್ನು ಕೂರಿಸಿ ವಿಚಾರಣೆಯನ್ನು ನಡೆಸಲಾಗಿತ್ತು ಎಂದು ರಾಷ್ಟ್ರಮಟ್ಟದ ಮಾಧ್ಯಮವೊಂದು ವರದಿ ಮಾಡಿದೆ ಎನ್ನಲಾಗಿದೆ. ವಿಚಾರಣೆಯ ವೇಳೆಯಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಪತಿ ರಾಜ್ ಕುಂದ್ರಾ ಅವರ ಮೇಲೆ ಸಿಟ್ಟು ಹಾಗೂ ಅಸಮಾಧಾನದಿಂದ ಕೂಗಾಡಿದ್ದಾರೆ ಎನ್ನಲಾಗಿದೆ. ಶಿಲ್ಪಾ ಶೆಟ್ಟಿಯವರು ಪತಿ ರಾಜ್ ಕುಂದ್ರಾ ಅವರನ್ನು “ಇದನ್ನೆಲ್ಲಾ ಮಾಡುವ ಅವಶ್ಯಕತೆ ಏನಿತ್ತು?” ಎಂದು ಗಟ್ಟಿಯಾಗಿ ಪ್ರಶ್ನೆ ಮಾಡಿದರು ಎನ್ನಲಾಗಿದೆ. ಅಲ್ಲದೆ ಈ ವೇಳೆ ಶಿಲ್ಪಾಶೆಟ್ಟಿ ಕಣ್ಣೀರು ಹಾಕಿದ್ದರು ಎನ್ನಲಾಗಿದೆ.

ಕುಟುಂಬದ ಗೌರವ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿಬಿಟ್ಟಿರಿ ಎಂದು ತಮ್ಮ ಪತಿಯ ಮೇಲೆ ಅಸಮಾಧಾನವನ್ನು ಶಿಲ್ಪಶೆಟ್ಟಿ ಹೊರ ಹಾಕಿದ್ದಾರೆ ಎನ್ನಲಾಗಿದೆ ಈ ವಿಷಯ ಹೊರಬಂದಮೇಲೆ ಶಿಲ್ಪ ಅವರ ಕೈಯಲ್ಲಿದ್ದ ಹಲವು ಬ್ರಾಂಡ್ ಗಳ ರಾಯಭಾರಿ ಯಾಗುವ ಅವಕಾಶಗಳು ಅವರಿಂದ ಕಸಿದುಕೊಳ್ಳಲಾಗಿದೆ ಎನ್ನಲಾಗಿದೆ ಈ ವಿವಾದದಿಂದಾಗಿ ಹಲವು ಹೊಸ ಪ್ರಾಜೆಕ್ಟ್ ಗಳಿಂದ ಅವರು ‌ಹೊರಗೆ ಬಂದಿದ್ದಾರೆ ಎಂದು ಕೂಡ ಹೇಳಲಾಗಿದೆ.

ತಪಾಸಣೆಯ ಹಾಗೂ ವಿಚಾರಣೆ ವೇಳೆಯಲ್ಲಿ ಅಧಿಕಾರಿಗಳು ಸುಮಾರು ಎರಡು ಗಂಟೆಗಳ ಕಾಲ ಶಿಲ್ಪ ಶೆಟ್ಟಿ ಅವರನ್ನು ವಿಚಾರಣೆ ಮಾಡಿದ್ದಾರೆ ಎನ್ನಲಾಗಿತ್ತು ಈ ವೇಳೆ ಶಿಲ್ಪಾ ಶೆಟ್ಟಿ ತಮ್ಮ ಪತಿಯ ಪರವಾಗಿಯೂ ಮಾತನಾಡಿದ್ದಾರೆ ತಮ್ಮ ಪತಿ ನಿರ್ಮಾಣ ಮಾಡಿರುವುದು ಶೃಂಗಾರ ಸಿನಿಮಾ ಹೊರತು ಅದು ಅಶ್ಲೀಲ ಸಿನಿಮಾಗಳಲ್ಲ ಎಂದು ಅವರು ಹೇಳಿದ್ದಾರೆ. ಪೊಲೀಸರು ರಾಜ್ ಕುಂದ್ರ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ರಾಜ್ ಕುಂದ್ರ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಅವರು ನಿರ್ಮಾಣ ಮಾಡಿರುವುದು ಶೃಂಗಾರ ಸಿನಿಮಾಗಳ ಆಗಿದ್ದು ಐಟಿ ಕಾಯ್ದೆಯ ಸೆಕ್ಷನ್ 67 (ಎ) ಅನ್ನು ಅವುಗಳ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಅವರ ವಕೀಲರು ಹೇಳಿದ್ದಾರೆ.

Leave a Comment