ಕುಗ್ಗದ ಬೇಡಿಕೆ, ಸ್ಟಾರ್ ನಟಿಯರನ್ನು ಹಿಂದಿಕ್ಕಿ, ಐಶ್ವರ್ಯ ರೈ ಪಡೆದ ಸಂಭಾವನೆ ಎಷ್ಟು ಗೊತ್ತಾ? : ಪೊನ್ನಿಯನ್ ಸೆಲ್ವನ್

Written by Soma Shekar

Published on:

---Join Our Channel---

ಮಾಜಿ ಮಿಸ್ ವರ್ಲ್ಡ್ ಐಶ್ವರ್ಯ ರೈ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ ನಟಿಯಾಗಿದ್ದಾರೆ. ಬಾಲಿವುಡ್ ನಲ್ಲಿ ನಂಬರ್ ಒನ್ ನಟಿಯಾಗಿ ಮಿಂಚಿದ್ದ ನಟಿ ಐಶ್ವರ್ಯ ರೈ ಅಂದವನ್ನು ಮೆಚ್ಚಿ ಹಾಡಿ ಹೊಗಳುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ದಶಕಗಳು ಕಳೆದರೂ ಐಶ್ವರ್ಯ ರೈ ಅವರ ಅಂದ ಇಂದಿಗೂ ಅವರ ಅಭಿಮಾನಿಗಳನ್ನು ಆಕರ್ಷಿಸುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಐಶ್ವರ್ಯ ರೈ ಅವರ ಅಂದವಾದ ಫೋಟೋಗಳು ಆಗಾಗ ಅಪಾರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತದೆ. ಹಿಂದಿನಂತೆ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿ ಇಲ್ಲದಿದ್ದರೂ ಕೂಡಾ ನಟಿಯ ಬೇಡಿಕೆ ಮತ್ತು ಜನಪ್ರಿಯತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಬಹುಕಾಲದ ನಂತರ ಇದೀಗ ನಟಿ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಸಿನಿಮಾ ಎನ್ನುವಂತೆ ಸದ್ದು ಮಾಡುತ್ತಾ, ತನ್ನ ಟ್ರೈಲರ್ ಮತ್ತು ಟ್ರೀಸರ್ ಗಳ ಮೂಲಕ ಸಿಕ್ಕಾಪಟ್ಟೆ ಸೆನ್ಸೇಷನ್ ಹುಟ್ಟುಹಾಕಿರುವ, 500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ, ಐತಿಹಾಸಿಕ ಕಾದಂಬರಿ ಆಧಾರಿತ ಸಿನಿಮಾ ಪೊನ್ನಿಯನ್ ಸೆಲ್ವನ್ ನಲ್ಲಿ ನಟಿ ಐಶ್ವರ್ಯ ರೈ ನಂದಿನಿ ಪಾತ್ರದಲ್ಲಿ ನಟಿಸಿದ್ದು ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಯ ಪಾತ್ರ, ಅವರ ಲುಕ್ ಎಲ್ಲವನ್ನೂ ನೋಡಿ ನೆಟ್ಟಿಗರು ಹಾಗೂ ನಟಿ ಐಶ್ವರ್ಯ ರೈ ಅಭಿಮಾನಿಗಳು ಮೆಚ್ಚುಗೆಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಸಿನಿಮಾ ಸೆಪ್ಟೆಂಬರ್ 30 ರಂದು ತೆರೆಗೆ ಬರುತ್ತಿದೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸಲು ನಟಿ ಐಶ್ವರ್ಯ ರೈ ಅವರು ಪಡೆದಿರುವ ಭಾರಿ ಮೊತ್ತದ ಸಂಭಾವನೆ ವಿಚಾರ ತುಂಬಾ ಸದ್ದು ಮಾಡುತ್ತಿದೆ. ದಶಕಗಳು ಕಳೆದರೂ ಕೂಡಾ ಸ್ಟಾರ್ ನಟಿಯರು ಪಡೆಯುವಷ್ಟು ಸಂಭಾವನೆಯನ್ನು ಈ ಸಿನಿಮಾಕ್ಕೆ ಪಡೆಯುವ ಮೂಲಕ ನಟಿ ಐಶ್ವರ್ಯ ರೈ ತಮ್ಮ ಬೇಡಿಕೆ ಎಷ್ಟಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ವರದಿಗಳ ಪ್ರಕಾರ ಈ ಸಿನಿಮಾದಲ್ಲಿ ನಾಯಕ ವಿಕ್ರಂ ಅವರು 12 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದರೆ, ನಟಿ ಐಶ್ವರ್ಯ ರೈ ಅವರು ಬರೋಬ್ಬರಿ 10 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ.

ಬಹುದಿನಗಳ ನಂತರ ಸಿನಿಮಾದಲ್ಲಿ ನಟಿಸಿದರೂನಟಿ ಭಾರಿ ಸಂಭಾವನೆಯನ್ನು ಪಡೆದಿರುವುದು ಆಶ್ಚರ್ಯ ಮೂಡಿಸಿದೆ. ಇದೇ ಸಿನಿಮಾದಲ್ಲಿ ನಟಿಸಿರುವ ಮತ್ತೊಬ್ಬ ತಮಿಳು ನಟ ಜಯಂ ರವಿ ಅವರು 8 ಕೋಟಿ ರೂಪಾಯಿ, ನಟನ ಕಾರ್ತಿ 5 ಕೋಟಿ, ದಕ್ಷಿಣದ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ತಮ್ಮ ಪಾತ್ರಕ್ಕೆ 2 ಕೋಟಿ ರೂಪಾಯಿ, ಹಿರಿಯ ನಟ ಪ್ರಕಾಶ್ ರಾಜ್ ಅವರು 1.5 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ ಈ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆಯನ್ನು ಪಡೆದವರು ನಾಯಕ ನಟ ವಿಕ್ರಮ್ ಹಾಗೂ ನಟಿ ಐಶ್ವರ್ಯ ರೈ ಅವರೇ ಆಗಿದ್ದಾರೆ.

Leave a Comment