ಕೀಳು ಮಟ್ಟಕ್ಕಿಳಿದ ಸ್ಟಾರ್ ವಾರ್: ನಟನ ಸಾವಿನ ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು

Entertainment Featured-Articles News

ಸ್ಟಾರ್ ವಾರ್ ಎ‌ನ್ನುವುದು ಎಲ್ಲಾ ಭಾಷೆಯ ಸಿನಿಮಾ ರಂಗದಲ್ಲೂ ಸಹಾ ಸಾಮಾನ್ಯವಾಗಿದೆ. ಒಂದು ಕಡೆ ಸ್ಟಾರ್ ಗಳು ಚೆನ್ನಾಗಿ ಇದ್ದರೂ, ಸ್ಟಾರ್ ಗಳ ಹೆಸರಿನಲ್ಲಿ ಅವರ ಅಭಿಮಾನಿಗಳು ಗಲಾಟೆಗಳನ್ನು ಮಾಡಿಕೊಳ್ಳುವುದು ತೀರಾ ಸಾಮಾನ್ಯ ಎನಿಸಿದೆ. ಸ್ಟಾರ್ ಕಲಾವಿದರ ನಡುವೆ ವೃತ್ತಿಯಲ್ಲಿ ಏರ್ಪಡುವ ಸ್ಪರ್ಧೆ, ಅವರ ಯಶಸ್ಸು, ವಿಫಲತೆಗಳು ಅವರ ಅಭಿಮಾನಿಗಳ ನಡುವೆ ಒಂದು ದ್ವೇ ಷ ದ ವಾತಾವರಣವನ್ನು ಸೃಷ್ಟಿ ಮಾಡುವ ಜೊತೆಗೆ, ಅವರವರ ನಡುವೆಯೇ ತೀವ್ರವಾದ ಮನಸ್ತಾಪಗಳಿಗೆ ಅದು ಎಡೆ ಮಾಡಿಕೊಡುತ್ತದೆ.

ಆದರೆ ಇಂತಹ ಸ್ಟಾರ್ ವಾರ್ ಗಳಿಗೂ ಒಂದು ಮಿತಿ ಎನ್ನುವುದು ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ನಡುವೆ ನಡೆಯುವ ಸ್ಟಾರ್ ವಾರ್ ತೀರಾ ಕೆಳಮಟ್ಟಕ್ಕೆ ಇಳಿಯುತ್ತಿರುವುದು ಬೇಸರದ ಸಂಗತಿಯಾಗಿದೆ‌. ಸ್ಟಾರ್ ಗಳು ತಮ್ಮ ಜೀವನವನ್ನು ಖುಷಿಯಾಗಿ, ತಮ್ಮ ಕೆಲಸಗಳನ್ನು ಮಾಡಿಕೊಂಡು ಕಳೆಯುತ್ತಿರುವಾಗಲೇ, ಅಭಿಮಾನಿಗಳು ಮಾತ್ರ ತಮ್ಮ ಅಭಿಮಾನ ನಟರುಗಳ ಹೆಸರಿನಲ್ಲಿ ವಾಗ್ದಾಳಿಗಳು, ಅನಾವಶ್ಯಕ ಪೋಸ್ಟ್ ಗಳು ಹಾಗೂ ಹೀಗಳೆಯುವ ಹೇಳಿಕೆಗಳನ್ನು ಹಾಕಿಕೊಂಡು ಒಂದು ಕಲಹದ ವಾತಾವರಣ ನಿರ್ಮಾಣ ಮಾಡುತ್ತಾರೆ.

ಈಗ ತಮಿಳಿನಲ್ಲಿ ನಟ ಅಜಿತ್ ಅವರ ಅಭಿಮಾನಿಗಳು ಅಂತಹುದೇ ಒಂದು ತೀರಾ ಕೆಳಮಟ್ಟದ ಕೆಲಸವನ್ನು ಮಾಡಿದ್ದಾರೆನ್ನುವ ಆ ರೋ ಪ ಒಂದು ಕೇಳಿ ಬಂದಿದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ #RIPjosephvijay ಎನ್ನುವ ಹ್ಯಾಷ್ ಟ್ಯಾಗ್ ಈಗ ಟ್ರೆಂಡ್ ಆಗಿದೆ. ಇಂತಹ ಒಂದು ಹ್ಯಾಷ್ ಟ್ಯಾಗ್ ನ ಮೂಲಕ ಅಜಿತ್ ಅಭಿಮಾನಿಗಳು ನಟ ವಿಜಯ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾದ ಅಗೌರವವನ್ನು ತೋರಿಸುತ್ತಿದ್ದಾರೆ ಎನ್ನುವುದು ಈಗ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ‌.

ನಟ ಅಜಿತ್ ಅವರ ಅಭಿಮಾನಿಗಳು, ನಟ ವಿಜಯ್ ನಿಧನರಾಗಿದ್ದಾರೆ ಎನ್ನುವ ವದಂತಿಯನ್ನು ಹಬ್ಬಿಸುವ ಮೂಲ ತೀರಾ ಕೀ ಳು ಮಟ್ಟದ ಸ್ಟಾರ್ ವಾರ್ ಮಾಡುತ್ತಿದ್ದಾರೆ. ಅವರು ನಡೆಸುತ್ತಿರುವ ವಿ ಕೃ ತಿ ಇದು ಎಂದು ಅನೇಕರು ಸಿಟ್ಟು ಹೊರಹಾಕಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ತಂಡದ ನಾಯಕತ್ವದಿಂದ ಧೋನಿ ಹಿಂದಕ್ಕೆ ಸರಿದ ಕಾರಣದಿಂದ ವಿಜಯ್ ಆ ತ್ಮ ಹ ತ್ಯೆ ಮಾಡಿಕೊಂಡರು ಎಂದು ಸುಳ್ಳು ಸುದ್ದಿ ಹರಡಿದ್ದಾರೆ.. ನೆಟ್ಟಿಗರು ಅಜಿತ್ ಅಭಿಮಾನಿಗಳ ಈ ಕೆಕಸಕ್ಕೆ ಛೀಮಾರಿ ಹಾಕಿ ಎಂತಹ ವಿ ಕೃ ತ ಮನಸ್ಸುಗಳು ಎಂದಿದ್ದಾರೆ.

Leave a Reply

Your email address will not be published.