ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು ನಾಯಕನಾಗಿ, ಮಹಾನಟಿ ಸಿನಿಮಾ ಖ್ಯಾತಿಯ ಪ್ರತಿಭಾವಂತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿರುವ ತೆಲುಗು ಸಿನಿಮಾ ಸರ್ಕಾರು ವಾರಿ ಪಾಟ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯ ನಂತರ ಸಿನಿಮಾದ ಕುರಿತಾಗಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದರೆ ಇದು ಸಿನಿಮಾ ಕಲೆಕ್ಷನ್ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಬಿಡುಗಡೆಯಾದ ಎರಡು ದಿನಗಳಲ್ಲೇ ಸಿನಿಮಾ 100 ಕೋಟಿ ಕ್ಲಬ್ ಸೇರಿದರೆ, ಈಗಾಗಲೇ 200 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇನ್ನು ಈ ಸಿನಿಮಾದಲ್ಲಿ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಜೋಡಿ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳ ಮೇಲೆ ಮೋಡಿಯನ್ನು ಮಾಡಿದೆ. ಭರ್ಜರಿ ಕಲೆಕ್ಷನ್ ಮಾಡುತ್ತಾ, ಸಿನಿಮಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವಾಗಲೇ ಸಿನಿಮಾ ವಿಚಾರವಾಗಿ ಒಂದು ಹೊಸ ವಿ ವಾ ದ ಹುಟ್ಟಿ ಕೊಂಡಿದೆ. ಸಿನಿಮಾದಲ್ಲಿ ಈಗ ವಿ ವಾ ದ ಉಂಟಾಗಲು ಕಾರಣವಾದರೂ ಏನು? ಎನ್ನುವ ಪ್ರಶ್ನೆ ನಿಮ್ಮದಾದರೆ ಅದಕ್ಕೆ ಉತ್ತರ ಇಲ್ಲಿದೆ.
ಸಿನಿಮಾದ ದೃಶ್ಯವೊಂದರಲ್ಲಿ ನಾಯಕ ಮಹೇಶ್ ಬಾಬು ನಾಯಕಿಯನ್ನು ಮುಟ್ಟುವ ದೃಶ್ಯವೊಂದಿದೆ. ಈ ದೃಶ್ಯವು ನಟಿಯ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಕ್ಷಕರಲ್ಲಿ ಅಸಮಾಧಾನವನ್ನು ಮೂಡಿಸಿದೆ. ಹೌದು, ಸಿನಿಮಾದ ದೃಶ್ಯವೊಂದರಲ್ಲಿ ನಾಯಕ ನಟನು ನಾಯಕಿಯನ್ನು ಬಲವಂತವಾಗಿ ತನ್ನ ಪಕ್ಕ ಮಲಗುವಂತೆ ಮಾಡುತ್ತಾನೆ. ಅಷ್ಟೇ ಅಲ್ಲದೇ ಅನಂತರ ಆಕೆಯ ಮೇಲೆ ತನ್ನ ಕಾಲನ್ನು ಹಾಕುತ್ತಾನೆ. ಈ ದೃಶ್ಯವನ್ನು ನೋಡಿ ಬಹಳಷ್ಟು ಜನರು ಸಿಟ್ಟಾಗಿದ್ದಾರೆ.
ಈ ದೃಶ್ಯವು ಇದೀಗ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸಿನಿಮಾದ ಒಂದು ದೃಶ್ಯದ ಬಗ್ಗೆ ಇಷ್ಟೆಲ್ಲಾ ಅ ಸಮಾಧಾನ ವ್ಯಕ್ತವಾಗಿದ್ದಕ್ಕೆ ನಿರ್ದೇಶಕ ಪರಶುರಾಮ್ ತಮ್ಮ ಪ್ರತಿಕ್ರಿಯೆ ನೀಡಿದ್ದು, ಆ ದೃಶ್ಯದಲ್ಲಿ ಅಂತಹ ತಪ್ಪೇನಿದೆ?? ಮಗುವೊಂದು ತನ್ನ ತಾಯಿಯ ಪಕ್ಕ ಮಲಗಲು ಆಸೆ ಪಟ್ಟಂತೆ, ಈ ದೇಶದಲ್ಲಿ ನಾಯಕ-ನಾಯಕಿಯ ಪಕ್ಕ ಮಲಗಿದ್ದಾರೆ ಎನ್ನುವ ಮೂಲಕ ಆ ದೃಶ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಪರಶುರಾಮ್ ಅವರು ನೀಡಿದ ಪ್ರತಿಕ್ರಿಯೆ ನೆಟ್ಟಿಗರಿಗೆ ಇನ್ನಷ್ಟು ಕೋಪ ತರಿಸಿದೆ.
ಸಿನಿಮಾದಲ್ಲಿನ ನಾಯಕಿಗೂ ಹಾಗೂ ತಾಯಿಗೂ ಹೋಲಿಕೆಯನ್ನು ಮಾಡಬೇಡಿ ಎಂದಿರುವ ನೆಟ್ಟಿಗರು, ಸಿನಿಮಾದಲ್ಲಿ ಒಂದು ಕೆಟ್ಟ ದೃಶ್ಯವನ್ನು ಚಿತ್ರೀಕರಣ ಮಾಡಿರುವುದಲ್ಲದೇ, ನೀವು ಅದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡುತ್ತಾ ಇದ್ದೀರಿ. ಮೊದಲು ಸಿನಿಮಾಗಳಲ್ಲಿ ನಾಯಕಿಯರನ್ನು ಭೋಗದ ವಸ್ತುಗಳ ಹಾಗೆ ತೋರಿಸುವುದನ್ನು ನಿಲ್ಲಿಸಿ ಎಂದು ನೆಟ್ಟಿಗರು ನಿರ್ದೇಶಕ ಪರಶುರಾಮ್ ವಿರುದ್ಧ ಗರಂ ಆಗಿದ್ದಾರೆ. ಇನ್ನು ಈ ಹೊಸ ವಿ ವಾದ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆಯಾ?? ನೋಡಬೇಕಾಗಿದೆ.