ಅಯ್ಯೋ.. ಅವಕಾಶಗಳಿಲ್ಲದೇ ಶಾಮಿಯಾನದಲ್ಲಿ ಡ್ರೆಸ್ ಹೊಲಿಸಿಕೊಂಡ ಕೀರ್ತಿ ಸುರೇಶ್: ಭರ್ಜರಿ ಟ್ರೋಲ್ ಆದ ನಟಿ

0
10311

ಕೇರಳದ ಬೆಡಗಿ ನಟಿ ಕೀರ್ತಿ ಸುರೇಶ್(Keerti Suresh) ತಮಿಳು, ತೆಲುಗು ಮತ್ತು ಮಲೆಯಾಳಂ ಮೂರು ಭಾಷೆಗಳ ಸಿನಿಮಾ ರಂಗದಲ್ಲಿ ಹೆಸರನ್ನು ಮಾಡಿದ್ದರೂ ಸಹಾ ಅವರು ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಅಭಿಮಾನಿಗಳ ಪ್ರೀತಿಯನ್ನು ಪಡೆದಿರುವುದು ಮಾತ್ರ ತೆಲುಗು ಸಿನಿಮಾ(Telugu cinema) ರಂಗದಲ್ಲಿ.‌ ನಟಿ ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾ ‘ನೇನು ಶೈಲಜಾ’ (Nenu Shailaja) ಮೂಲಕವೇ ತೆಲುಗು ಸಿನಿ ಪ್ರಿಯರ ಮನಸ್ಸನ್ನು ಗೆದ್ದು ಬಿಟ್ಟರು. ಇದಾದ ನಂತರ ಹಿರಿಯ ನಟಿ ಸಾವಿತ್ರಿ ಅವರ ಬಯೋಪಿಕ್ ಮಹಾನಟಿಯಲ್ಲಿ (Maha Nati) ಸಾವಿತ್ರಿ ಮರಳಿ ಬಂದಂತೆ ನಟಿಸಿ, ರಾಷ್ಟ್ರ ಪ್ರಶಸ್ತಿ ಪಡೆದು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮಿಂಚಿದರು ಕೀರ್ತಿ ಸುರೇಶ್.

ಕಳೆದ ಕೆಲವು ದಿನಗಳಿಂದಲೂ ಸಹಾ ಕೀರ್ತಿ ಸುರೇಶ್ (Keerti Suresh marriage) ಅವರು ಮಾದ್ಯಮಗಳ ಸುದ್ದಿಗಳಲ್ಲಿ ಹರಿದಾಡುತ್ತಿದ್ದಾರೆ. ನಟಿಯ ಮದುವೆ ವಿಚಾರವಾಗಿ ಒಂದಷ್ಟು ವಿಚಾರಗಳು ಹರಿದಾಡಿ ವೈರಲ್ ಆಗಿದೆ. ಈಗ ನಟಿ ಮದುವೆಯ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಆದರೆ ಅದು ನಟಿಯ ಮದುವೆ ವಿಚಾರವಲ್ಲ, ಬದಲಿಗೆ ನಟಿ ಹಾಜರಾಗಿದ್ದ ಟಾಲಿವುಡ್ ನ(Tollywood) ನಿರ್ದೇಶಕರೊಬ್ಬರ ಮದುವೆ. ಈ ಮದುವೆಗೆ ಹಾಜರಾಗಲು ನಟಿ ತೊಟ್ಟು ಬಂದಿದ್ದ ಡ್ರೆಸ್ ಇದೀಗ ದೊಡ್ಡ ಸುದ್ದಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಈ ಡ್ರೆಸ್ ನ ಕುರಿತಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

ಹೌದು, ನಟಿ ಕೀರ್ತಿ ಸುರೇಶ್(Keerti Suresh dress) ಅವರು ನಿರ್ದೇಶಕ ವೆಂಕಿ ಅಟ್ಲೂರಿ(Venki Atluri) ಅವರ ಮದುವೆ ಬಹಳ ಅದ್ದೂರಿಯಾಗಿ ನೆರವೇರಿದೆ. ಈ ಮದುವೆಗೆ ಅನೇಕ ಸಿನಿಮಾ ಸೆಲೆಬ್ರಿಟಿಗಳು ಹಾಜರಾಗಿ, ವಧು ವರನನ್ನು ಆಶೀರ್ವದಿಸಿದ್ದಾರೆ. ಈ ಮದುವೆಗೆ ನಟಿ ಕೀರ್ತಿ ಸುರೇಶ್ ಅವರು ಬಣ್ಣ ಬಣ್ಣದ ಉಡುಗೆಯನ್ನು ಧರಿಸಿ ಬಂದಿದ್ದರು. ಇದನ್ನು ನೋಡಿದ ನೆಟ್ಟಿಗರು ಅಚ್ಚರಿ ಪಟ್ಟಿರುವುದು ಮಾತ್ರವೇ ಅಲ್ಲದೇ ವೈವಿದ್ಯಮಯ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ನಟಿ ಧರಿಸಿರುವ ಡ್ರೆಸ್ ಮದುವೆ ಶಾಮಿಯಾನಕ್ಕೆ ಹಾಕುವ ಬಟ್ಟೆಯಂತೆಯೇ ಬಣ್ಣ ಹೊಂದಿದ್ದು, ಶಾಮಿಯಾನದಲ್ಲಿ ಬಟ್ಟೆ ಹೊಲಿಸಿರಬೇಕು ಎಂದು ಅನೇಕರು ವ್ಯಂಗ್ಯ ಮಾಡಿದ್ದಾರೆ. ಪಾಪ ನಟಿ ಡ್ರೆಸ್ ಮರೆತು ಹೋಗಿ ಟೆಂಟ್ ಕ್ಲಾತ್ ಸುತ್ತಿಕೊಂಡು ಬಂದಿದ್ದಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಇದು ಶಾಮಿಯಾನಾ ಲೆಹಂಗಾ” ಎಂದರೆ ಇನ್ನೊಬ್ಬರು, “ಶಾಮಿಯಾನ ಬಟ್ಟೆ ಬಳಸಿ ಡ್ರೆಸ್ ಹೊಲಿಸಿಕೊಂಡರೆ ಅದು ಹೀಗೆ ಇರುತ್ತೆ” ಎಂದು ವ್ಯಂಗ್ಯ ಮಾಡಿದ್ದಾರೆ. ಮೊದಲ ಬಾರಿಗೆ ನಿಮ್ಮ ಡ್ರೆಸ್ ಚೆನ್ನಾಗಿಲ್ಲ ಎಂದಿದ್ದಾರೆ.

LEAVE A REPLY

Please enter your comment!
Please enter your name here