HomeEntertainmentಕಾಂತಾರ ನಟನ ಟ್ವಿಟರ್ ಖಾತೆ ಸಸ್ಪೆಂಡ್: ಟ್ವಿಟರ್ ಕೊಟ್ಟ ಕಾರಣಕ್ಕೆ ಆಕ್ರೋಶಗೊಂಡ ಫ್ಯಾನ್ಸ್

ಕಾಂತಾರ ನಟನ ಟ್ವಿಟರ್ ಖಾತೆ ಸಸ್ಪೆಂಡ್: ಟ್ವಿಟರ್ ಕೊಟ್ಟ ಕಾರಣಕ್ಕೆ ಆಕ್ರೋಶಗೊಂಡ ಫ್ಯಾನ್ಸ್

ಕನ್ನಡದ ಕಾಂತಾರ(Kantara) ಸಿನಿಮಾ ಮಾಡಿದ ಸದ್ದು, ಗಳಿಸಿದ ಯಶಸ್ಸಿನ ಕುರಿತು ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ. ಈ ಸಿನಿಮಾ ಸಾಕಷ್ಟು ವಿಚಾರಗಳಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇನ್ನು ಈ ಸಿನಿಮಾದಲ್ಲಿ ನಟಿಸಿದ ಕಲಾವಿದರಿಗೂ ಸಹಾ ಸಿನಿಮಾದ ಅವರ ಪಾತ್ರ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಕಾಂತಾರ ಸಿನಿಮಾದಲ್ಲಿ ಅರಣ್ಯ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ ಬಹುಭಾಷಾ ನಟ ಕಿಶೋರ್(Kishore) ಅವರು ಕೂಡಾ ಜನರ ಗಮನ ಸೆಳೆದು, ವಿಶೇಷ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇದೀಗ ಕಿಶೋರ್ ಅವರು ಹೊಸದೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ.

ನಟ ಕಿಶೋರ್(Kishore) ಅವರು ಕನ್ನಡದ ನಟ, ದಕ್ಷಿಣದ ಬೇರೆ ಬೇರೆ ಭಾಷೆಗಳಲ್ಲಿ ಸಹಾ ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಇವರು. ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಸಕ್ರಿಯವಾಗಿರುವ ನಟ ಇವರು. ಸೋಶಿಯಲ್ ಮೀಡಿಯಾಗಳ ಮೂಲಕ ತನ್ನ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ನಟ ಕಿಶೋರ್ ಅವರಿಗೆ ಟ್ವಿಟರ್ ದೊಡ್ಡ ಶಾ ಕ್ ನೀಡಿದೆ. ಹೌದು, ನಟ ಕಿಶೋರ್ ಅವರ ಟ್ವಿಟರ್ ಖಾತೆ ಸಸ್ಪೆಂಡ್ ಆಗಿದೆ. ಈ ವಿಚಾರವಾಗಿ ಶ್ಯಾಮ್ ಪ್ರಸಾದ್(Shyam Prasad) ಹೆಸರಿನ ವ್ಯಕ್ತಿಯು ಟ್ವೀಟ್ ಮಾಡಿದ್ದಾರೆ.

ನಟ ಕಿಶೋರ್(Kishore) ಅವರ ಟ್ವಿಟರ್ ಖಾತೆಗೆ ಹೋದರೆ ಅಲ್ಲಿ ಟ್ವಿಟರ್ ನಿಯಮಗಳನ್ನು ಉಲ್ಲಂಘನೆ ಖಾತೆಯನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ತೋರಿಸುತ್ತಿದೆ. ಇನ್ನು ಶ್ಯಾಮ್ ಪ್ರಸಾದ್ ಅವರು ಮಾಡಿರುವ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಕಿಶೋರ್ ಅವರಿಗೆ ಟ್ವಿಟರ್ ನ ಅಗತ್ಯ ಇಲ್ಲ ಎಂದು ಕೆಲವರು ಹೇಳಿದರೆ, ಧ್ವನಿ ಎತ್ತುವವರ ಧ್ವನಿ ಮುಚ್ಚಿಸುವ ಪ್ರಯತ್ನವೇ? ಎಂದು ಪ್ರಶ್ನೆ ಮಾಡಿದ್ದಾರೆ. ಹೀಗೆ ನೆಟ್ಟಿಗರು ಅನೇಕರು ಟ್ವಿಟರ್ ಬಗ್ಗೆ ತಮ್ಮ ಅಸಮಾಧಾನವನ್ನು ಮತ್ತು ಸಿಟ್ಟನ್ನು ಕಾಮೆಂಟ್ ಗಳ ಮೂಲಕ ಹೊರ ಹಾಕಿದ್ದಾರೆ.

- Advertisment -