ಕಿರುತೆರೆ ಇತಿಹಾಸದಲ್ಲೇ ಇಷ್ಟು ಸಂಭಾವನೆ ಯಾರೂ ಪಡೆದಿಲ್ಲ: ಸಲ್ಲು ಭಾಯ್ ಸಂಭಾವನೆಗೆ ನಡುಗಿದ ಕಿರುತೆರೆ!
ಕಿರುತೆರೆಯಲ್ಲಿ ಬಾರೀ ಸದ್ದನ್ನು ಮಾಡುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಅದರಲ್ಲೂ ಹಿಂದಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಪ್ರತಿ ಬಾರಿಯು ಸಹಾ ಸಾಕಷ್ಟು ಚರ್ಚೆಗಳಿಗೆ ಕಾರಣವಾಗುತ್ತದೆ. ಟಿ ಆರ್ ಪಿ ವಿಚಾರದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತದೆ ಹಾಗೂ ಮನೆಯ ಸದಸ್ಯರ ಮಾತು, ಚಟುವಟಿಕೆಗಳು ಕೆಲವೊಮ್ಮೆ ವಿ ವಾ ದಗಳನ್ನು ಸಹಾ ಹುಟ್ಟು ಹಾಕುವುದು ವಾಸ್ತವ. ಹಿಂದಿಯಲ್ಲಿ ಈಗಾಗಲೇ ಬಿಗ್ ಬಾಸ್ ಯಶಸ್ವಿ ಹದಿನೈದು ಸೀಸನ್ ಗಳನ್ನು ಮುಗಿಸಿದ್ದು, ಈಗ ಹದಿನಾರನೇ ಸೀಸನ್ ನ ನಿರೀಕ್ಷೆಯಲ್ಲಿ ಇದ್ದಾರೆ ಪ್ರೇಕ್ಷಕರು. ಹಿಂದಿ ಬಿಗ್ ಬಾಸ್ ಭಾರತದ ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಒಂದಾಗಿದೆ.
ಬಿಗ್ ಬಾಸ್ ನ ನಾಲ್ಕನೇ ಸೀಸನ್ ನಿಂದಲೂ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಬಿಗ್ ಬಾಸ್ ಅನ್ನು ನಿರೂಪಣೆ ಮಾಡುತ್ತಾ ಬಂದಿದ್ದು, ನಟ ಸಲ್ಮಾನ್ ಖಾನ್ ನಿರೂಪಣೆಗೆ ಬಂದ ಮೇಲೆ ಬಿಗ್ ಬಾಸ್ ಮೊದಲಿಗಿಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತು. ಇದೇ ಜನಪ್ರಿಯತೆಯ ಕಾರಣದಿಂದಲೇ ವಾಹಿನಿ ಪ್ರತಿ ಸೀಸನ್ ಗೂ ನಟ ಸಲ್ಮಾನ್ ಅವರನ್ನೇ ನಿರೂಪಣೆಗೆ ಕರೆ ತರಲು ಕೋಟಿ ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ನೀಡುತ್ತಾ ಬರುತ್ತಿದ್ದು, ಪ್ರತಿ ಸೀಸನ್ ಗೂ ಈ ಸಂಭಾವನೆ ಮೊತ್ತವು ಏರಿಕೆಯಾಗಿ ದಾಖಲೆ ಬರೆಯುತ್ತಿದೆ.
ಬಿಗ್ ಬಾಸ್ ವಾರದ ಎಪಿಸೋಡ್ ಗಳು ಒಂದಾದರೆ, ವಾರಾಂತ್ಯದಲ್ಲಿ ಸಲ್ಮಾನ್ ಖಾನ್ ನಿರೂಪಣೆ ಮಾಡುವ ಎರಡು ದಿನಗಳು ಮತ್ತೊಂದು ಹಂತ ತಲುಪುತ್ತದೆ. ಇಡೀ ವಾರದ ಟಿ ಆರ್ ಪಿ ಗಿಂತ ಹೆಚ್ಚು ಈ ಎರಡು ದಿನಗಳಲ್ಲಿ ಬರುತ್ತದೆ. ಇನ್ನು ನಟ ಸಲ್ಮಾನ್ ಖಾನ್ ಈಗಾಗಲೇ ಬಿಗ್ ಬಾಸ್ ನಿಂದ ಹೊರ ಬರುವ ಮಾತುಗಳನ್ನು ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ. ಆದರೆ ವಾಹಿನಿ ಮಾತ್ರ ಅದಕ್ಕೆ ಅವಕಾಶ ನೀಡದೇ, ಪ್ರತಿ ಸೀಸನ್ ಗೂ ಬಹು ಕೋಟಿ ಮೊತ್ತದಲ್ಲಿ ಸಂಭಾವನೆಯನ್ನು ನೀಡುತ್ತಾ ಸಲ್ಮಾನ್ ಖಾನ್ ಅವರನ್ನೇ ನಿರೂಪಕನಾಗಿ ಕರೆ ತರುತ್ತಿದೆ.
ಈಗ ಹೊಸ ಸುದ್ದಿಯೊಂದು ಹರಿದಾಡಿದ್ದು, ಈ ಬಾರಿ ಹದಿನಾರನೇ ಸೀಸನ್ ಗೆ ನಟ ಸಲ್ಮಾನ್ ಖಾನ್ ಮೂಲ ಸಂಭಾವನೆಗಿಂತ ಮೂರು ಪಟ್ಟು ಹೆಚ್ಚಿನ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ. ಅಂದರೆ ಈ ಬಾರಿ ಸಲ್ಮಾನ್ ಖಾನ್ ಅವರು 1050 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಹಿಂದಿನ ಸೀಸನ್ ನಲ್ಲಿ ಅವರು 350 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಂಡಿದ್ದರು. ಈಗ ಅವರು ಪಡೆಯುತ್ತಿರುವ ಸಂಭಾವನೆ ಹೊರ ದಾಖಲೆಯನ್ನೇ ಬರೆಯುವ ಸಾಧ್ಯತೆಗಳು ಇವೆ.