ಕಿರುತೆರೆಯ ಜನಪ್ರಿಯ ನಟ ಮಂಡ್ಯ ರವಿ ಇನ್ನಿಲ್ಲ: ನಿಜಕ್ಕೂ ನಡೆದಿದ್ದೇನು?

0 2

ಕಿರುತೆರೆಯ ಜನಪ್ರಿಯ ನಟ ಮಂಡ್ಯ ರವಿ ಇನ್ನಿಲ್ಲ ಎನ್ನುವ ಸುದ್ದಿ ಖಂಡಿತ ಕಿರುತೆರೆಯ ಕಲಾವಿದರು ಮತ್ತು ಕಿರುತೆರೆಯ ಪ್ರೇಕ್ಷಕರಿಗೆ ದೊಡ್ಡ ಆ ಘಾ ತವನ್ನು ನೀಡಿದೆ. ಈ ವಿಷಯ ಅನೇಕರಿಗೆ ತೀವ್ರ ಬೇಸರವನ್ನು ಮತ್ತು ವೇದನೆಯನ್ನು ಉಂಟು ಮಾಡಿದೆ. ಕೇವಲ 42 ವಯಸ್ಸಿಗೆ ಇಹಲೋಕವನ್ನು ತ್ಯಜಿಸಿದ ನಟನ ಬಗ್ಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಮಂಡ್ಯ ರವಿ ಅವರು ಇಂದು ಸಂಜೆ ಆರು ಮೂವತ್ತರ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನುವ ಸುದ್ದಿ ಹೊರ ಬಂದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಜನರು ಅಗಲಿದ ನಟನಿಗೆ ಶ್ರದ್ಧಾಂಜಲಿಯನ್ನು ಕೋರುತ್ತಿದ್ದಾರೆ. ಅವರ ಆತ್ಮ ಶಾಂತಿಗಾಗಿ ಪ್ರಾರ್ಥನೆ ಮಾಡಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಟಿ.ಎನ್ .ಸೀತಾರಾಂ ಅವರ ಬಹುತೇಕ ಎಲ್ಲಾ ಸೀರಿಯಲ್ ಗಳಲ್ಲೂ ಸಹಾ ಕಾಣಿಸಿಕೊಳ್ಳುತ್ತಿದ್ದ ಮಂಡ್ಯ ರವಿ ಅವರು ತಮ್ಮ ಅಭಿನಯದ ಮೂಲಕವೇ ಜನರ ಮನಸ್ಸನ್ನು ಗೆದ್ದು, ಜನರ ಮನಸ್ಸಿಗೆ ಹತ್ತಿರವಾಗಿರುವ ನಟನಾಗಿದ್ದಾರೆ. ಸೀತಾರಾಂ ಅವರ ಮಗಳು ಜಾನಕಿ ಸೀರಿಯಲ್ ನಲ್ಲಿ ಅವರು ಮಾಡಿದ ಪಾತ್ರ, ಅದರಲ್ಲಿ ಅವರ ಮನೋಜ್ಞ ಅಭಿನಯವನ್ನು ನೋಡಿ ಮೆಚ್ಚುಗೆ ನೀಡದವರಿಲ್ಲ. ಅವರ ಪಾತ್ರ ಪ್ರೇಕ್ಷಕರಿಂದ ಅಪಾರವಾದ ಗೌರವ ಮನ್ನಣೆಗೆ ಪಾತ್ರವಾಗಿತ್ತು. ವೈವಿದ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ನಟ ಇನ್ನಿಲ್ಲ ಎನ್ನುವುದು ಅನೇಕರಿಗೆ ನಂಬಲಾಗದ ಕಹಿ ಸತ್ಯವಾಗಿದೆ.

ಮಂಡ್ಯ ರವಿ ಅವರಿಗೆ ಆರೋಗ್ಯದಲ್ಲಿ ಉಂಟಾಗಿದ್ದ ಸಮಸ್ಯೆ ಕಾರಣದಿಂದಾಗಿ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದ ಕಾರಣ, ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಡುತ್ತಾ ಸಾಗಿತ್ತು ಎನ್ನಲಾಗಿದೆ. ಕೊನೆಗೆ ಅವರನ್ನು ಉಳಿಸುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾದ ಮೇಲೆ ವೈದ್ಯರು ಅವರನ್ನು ಮಂಡ್ಯ ಕ್ಕೆ ಕರೆದುಕೊಂಡು ಹೋಗುವಂತೆ ಸಲಹೆಯನ್ನು ನೀಡಿದ್ದರು ಎನ್ನಲಾಗಿದೆ. ನಿರ್ದೇಶಕ ಟಿ ಎನ್ ಸೀತಾರಾಂ ಅವರು ಆಸ್ಪತ್ರೆಗೆ ಭೇಟಿ ನೀಡಿ ನಟನ ಆರೋಗ್ಯ ವಿಚಾರಿಸಿದ್ದರು ಎನ್ನಲಾಗಿದೆ.

ಜಾಂಡೀಸ್ ನಿಂದ ಬಳಲುತ್ತಿದ್ದ ನಟ, ಆಸ್ಪತ್ರೆಯಲ್ಲಿ ಸಾ ವು ಬದುಕಿನ ನಡುವೆ ಹೋರಾಡುತ್ತಿದ್ದ ನಟ ನಿಧನರಾಗಿರುವುದು ದೃಢ ಪಟ್ಟ ನಂತರ ಅದು ಮಾದ್ಯಮಗಳಲ್ಲಿ ವರದಿಯಾಗಿದೆ. ಅವರು ಕಳೆದ ಹತ್ತು ದಿನಗಳಿಂದಲೂ ಸಹಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಎನ್ನಲಾಗಿದೆ. ರವಿ ಅವರ ಪೂರ್ಣ ಹೆಸರು ಎಂ ರವಿ ಪ್ರಸಾದ್ ಎಂದಾಗಿದ್ದು, ಅವರು ಹಲವು ಕಿರುತೆರೆಯ ಸೀರಿಯಲ್ ಗಳು ಮತ್ತು ಸಿನಿಮಾಗಳಲ್ಲಿ ನಟಿಸಿ ಗುರ್ತಿಸಿಕೊಂಡಿದ್ದ ನಟ. ಅವರು ಮಹಾಮಾಯಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದರು.

Leave A Reply

Your email address will not be published.