ಕಿರುತೆರೆಯ ಈ ಕಾರ್ಯಕ್ರಮಕ್ಕೆ ಬರ್ತಿದ್ದಾರಾ ಚಂದನ ವನದ ಮೋಹಕತಾರೆ ರಮ್ಯಾ??

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯ ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ಆದರೆ ರಾಜಕೀಯದ ಕಡೆಗೆ ಒಲವು ತೋರಿದ ಮೇಲೆ ನಟಿ ರಮ್ಯಾ ಚಿತ್ರರಂಗದಿಂದ, ನಟನೆಯಿಂದ ದೂರವೇ ಉಳಿದಿದ್ದಾರೆ. ನಟಿ ರಮ್ಯಾ ಅವರ ಅಭಿಮಾನಿಗಳಾದರೆ ತಮ್ಮ ಅಭಿಮಾನ ನಟಿಯು ಮತ್ತೆ ಯಾವಾಗ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಯಲ್ಲಿ ಇರುವುದು ಸುಳ್ಳಲ್ಲ. ರಮ್ಯಾ ಅವರು ಸಿನಿಮಾಗಳಿಂದ ದೂರ ಉಳಿದಿದ್ದರೂ ಸಹಾ ಅವರ ಅಭಿಮಾನಿಗಳ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.

ನಟಿ ರಮ್ಯಾ ಕನ್ನಡದಲ್ಲಿ ಕೊನೆಯದಾಗಿ ನಟಿಸಿದ ಸಿನಿಮಾ ನಾಗರಹಾವು, ಅದಾದ ನಂತರ ಅವರು ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅಲ್ಲದೇ ಒಂದು ಸಿನಿಮಾ ಕೆಲವು ಕಾರಣಗಳಿಂದ ನಿಂತು ಹೋಗಿದೆ. ಇನ್ನು ಅತ್ತ ಕಡೆ ರಾಜಕೀಯದಿಂದಲೂ ಸಹಾ ನಟಿ ದೂರವಾಗಿ ಈಗ ರಾಜಕೀಯ ಮತ್ತು ಸಿನಿಮಾ ರಂಗ ಎರಡರಿಂದಲೂ ಅಂತರವನ್ನು ಕಾಯ್ದುಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರವೇ ಹೆಚ್ಚು ಸಕ್ರಿಯವಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಫೋಟೋಗಳು, ಪ್ರಮುಖವಾದ ರಾಜಕೀಯ ವಿಚಾರಗಳು, ಹೊಸ ಕನ್ನಡ ಸಿನಿಮಾಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡು, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದಲೂ ಅವರು ಯಾವುದೇ ಸಿನಿಮಾ ಕಾರ್ಯಕ್ರಮಗಳು ಅಥವಾ ಕಿರುತೆರೆಯ ಸೆಲೆಬ್ರಿಟಿ ಶೋ ಗಳಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಗಮನಾರ್ಹವಾದ ವಿಷಯವಾಗಿದೆ.

ಈಗ ಇವೆಲ್ಲವುಗಳ ನಡುವೆ ಕನ್ನಡ ಕಿರುತೆರೆಯ ಜನಪ್ರಿಯ ಖಾಸಗಿ ವಾಹಿನಿ ಝೀ ಕನ್ನಡ ನಟಿ ರಮ್ಯಾ ಅವರನ್ನು ತಮ್ಮ ಹೊಸ ಟಾಕ್ ಶೋ ಒಂದಕ್ಕೆ ಕರೆ ತರುವ ಪ್ರಯತ್ನಕ್ಕೆ ಮುಂದಾಗಿದೆ ಎನ್ನುವ ಸುದ್ದಿಗಳು ಹರಿದಾಡಿವೆ. ಹೌದು ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ ಗಣೇಶ್ ಅವರ ನಿರೂಪಣೆಯಲ್ಲಿ ಪ್ರಾರಂಭವಾಗಿರುವ ವಿಶೇಷ ಟಾಕ್ ಶೋ ಗೋಲ್ಡನ್ ಗ್ಯಾಂಗ್ ಗೆ ರಮ್ಯ ಅವರನ್ನು ಕರೆತರಲು ವಾಹಿನಿಯು ತನ್ನ ಪ್ರಯತ್ನಗಳನ್ನು ನಡೆಸುತ್ತಿದೆ ಎನ್ನಲಾಗಿದೆ.

ಗೋಲ್ಡನ್ ಗ್ಯಾಂಗ್ ಎನ್ನುವುದು ಕಲಾವಿದರ ಸ್ನೇಹಿತರು ಅವರ ಗ್ಯಾಂಗ್ ಬಗ್ಗೆ ವಿಶೇಷ ವಿಚಾರಗಳನ್ನು ಹಂಚಿಕೊಳ್ಳುವ ಶೋ ಆಗಿದೆ. ಆದ್ದರಿಂದಲೇ ನಟಿ ರಮ್ಯ ಅವರು ಬಂದರೆ ಅವರ ಯಾರೆಲ್ಲಾ ಸಿನಿಮಾ ಹಾಗೂ ರಾಜಕೀಯದ ಗೆಳೆಯರ ಬಳಗ ಬರಬಹುದು, ಯಾರನ್ನೆಲ್ಲಾ ಪರಿಚಯ ಮಾಡಬಹುದು ಎಂದು ತಿಳಿಯುವ ಕುತೂಹಲ ಅವರ ಅಭಿಮಾನಿಗಳು ಹಾಗೂ ಕಿರುತೆರೆಯ ಪ್ರೇಕ್ಷಕರಿಗೂ ಇದೆ ಎನ್ನುವುದು ಸಹಾ ವಾಸ್ತವವಾಗಿದೆ.

ನಟ ಗಣೇಶ್ ಹಾಗೂ ರಮ್ಯ ಅವರು ಬೊಂಬಾಟ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಅದಾದ ನಂತರ ಅಂದರೆ ಬರೋಬ್ಬರಿ ಹದಿನಾಲ್ಕು ವರ್ಷಗಳ ನಂತರ ಈ ಜೋಡಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಬಹುದಾ?? ಎನ್ನುವ ನಿರೀಕ್ಷೆಗಳು ಸಹಾ ಇದೆ. ಒಟ್ಟಾರೆ ವಾಹಿನಿಯು ರಮ್ಯ ಅವರಿಗೆ ಆಹ್ವಾನ ನೀಡಿರುವುದು ಬಿಟ್ಟಿರುವುದು ಅಧಿಕೃತ ಘೋಷಣೆ ಆಗದಿದ್ದರೂ, ಸದ್ಯಕ್ಕಂತೂ ಇಂತಹುದೊಂದು ಸುದ್ದಿ ಖಂಡಿತ ಹರಿದಾಡಿದೆ.

Leave a Comment