HomeEntertainmentಕಿರುತೆರೆಯಲ್ಲಿ ಮತ್ತೆ ನೋಡಿ ಮಾಡಲಿದ್ಯಾ ಅಗ್ನಿಸಾಕ್ಷಿ ಜೋಡಿ?? ವಿಜಯ್ ಸೂರ್ಯ, ವೈಷ್ಣವಿ ಗೌಡ ಹೊಸ ಸೀರಿಯಲ್??

ಕಿರುತೆರೆಯಲ್ಲಿ ಮತ್ತೆ ನೋಡಿ ಮಾಡಲಿದ್ಯಾ ಅಗ್ನಿಸಾಕ್ಷಿ ಜೋಡಿ?? ವಿಜಯ್ ಸೂರ್ಯ, ವೈಷ್ಣವಿ ಗೌಡ ಹೊಸ ಸೀರಿಯಲ್??

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು ಅಗ್ನಿ ಸಾಕ್ಷಿ. ಈ ಸೀರಿಯಲ್ ಮುಗಿದು ಎರಡು ವರ್ಷಗಳಾಗಿದೆಯಾದರೂ ಕಿರುತೆರೆಯ ಪ್ರೇಕ್ಷಕರು ಮಾತ್ರ ಈ ಸೀರಿಯಲ್ ನಲ್ಲಿನ ತಮ್ಮ ಅಭಿಮಾನ ಪಾತ್ರಗಳನ್ನು ಮಾತ್ರ ಇನ್ನೂ ಮರೆತಿಲ್ಲ. ಇಂದಿಗೂ ಕೂಡಾ ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ನಟಿಸಿದ್ದ ಕಲಾವಿದರನ್ನು ಅವರ ಪಾತ್ರಗಳ ಹೆಸರಿನಲ್ಲಿಯೇ ಜನರು ಗುರ್ತಿಸುತ್ತಾರೆ ಎಂದರೆ ಆ ಪಾತ್ರಗಳು ಪ್ರೇಕ್ಷಕರ ಮೇಲೆ ಎಷ್ಟು ಪರಿಣಾಮ ಉಂಟು ಮಾಡಿದೆ ಎನ್ನುವುದು ಅರ್ಥವಾಗುತ್ತದೆ. ಇನ್ನು ಸೀರಿಯಲ್ ನ ಸಿದ್ಧಾರ್ಥ್, ಸನ್ನಿಧಿ ಪಾತ್ರವಂತೂ ಪ್ರೇಕ್ಷಕರ ಫೇವರಿಟ್ ಆಗಿತ್ತು.

ಅಗ್ನಿ ಸಾಕ್ಷಿ ಸೀರಿಯಲ್ ನ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡವರು ನಟ ವಿಜಯ್ ಸೂರ್ಯ. ಅಗ್ನಿ ಸಾಕ್ಷಿ ನಂತರ ಅವರು ಪ್ರೇಮಲೋಕ ಸೀರಿಯಲ್ ನಲ್ಲಿ ನಟಿಸಿದರು. ಲಾಕ್ ಡೌನ್ ವೇಳೆಯಲ್ಲಿ ಈ ಸೀರಿಯಲ್ ಅನ್ನು ಮುಗಿಸಲಾಗಿತ್ತು. ಇನ್ನು ವಿಜಯ್ ಸೂರ್ಯ ಅವರು ಕಿರುತೆರೆಯ ಜನಪ್ರಿಯ ಸೀರಿಯಲ್ ಆದ ಜೊತೆ ಜೊತೆಯಲಿ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ದೊಡ್ಡ ಸುದ್ದಿ ಮಾಡಿದ್ದರಲ್ಲದೇ ಅವರ ಪಾತ್ರ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಈಗ ವಿಜಯ್ ಸೂರ್ಯ ಅವರು ಡಾಕ್ಟರ್ ಕರ್ಣ ಎನ್ನುವ ಹೊಸ ಸೀರಿಯಲ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ ಎನ್ನುವ ಸುದ್ದಿಯೊಂದು ಮಾದ್ಯಮಗಳಲ್ಲಿ ಹರಿದಾಡಿದೆ. ಕನ್ನಡದ ಜನಪ್ರಿಯ ಕಿರುತೆರೆ ವಾಹಿನಿಯಲ್ಲಿ ಈ ಹೊಸ ಸೀರಿಯಲ್ ಪ್ರಸಾರ ಕಾಣಲಿದೆ ಎನ್ನಲಾಗಿದೆ. ಇದು ವಿಜಯ್ ಸೂರ್ಯ ಅವರ ನಟನೆಯ ಐದನೇ ಸೀರಿಯಲ್ ಆಗಿದೆ. ಬಹಳ ದಿನಗಳ ನಂತರ ತಮ್ಮ ಅಭಿಮಾನ ನಟನನ್ನು ನೋಡಲು ಅಭಿಮಾನಿಗಳು ಕೂಡಾ ಬಹಳ ಕಾತರರಾಗಿದ್ದಾರೆ.

ಈ ಕುರಿತಾಗಿ ಇನ್ನೂ ವಾಹಿನಿಯಾಗಲೀ ಅಥವಾ ನಟ ವಿಜಯ್ ಸೂರ್ಯ ಆಗಲೀ ಯಾವುದೇ ರೀತಿಯ ಅಧಿಕೃತವಾದ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇನ್ನು ಅಗ್ನಿ ಸಾಕ್ಷಿಯಲ್ಲಿ ಸನ್ನಿಧಿ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದಿದ್ದ ವೈಷ್ಣವಿ ಗೌಡ ಅವರು ಸಹಾ ಈ ಹೊಸ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಅಗ್ನಿ ಸಾಕ್ಷಿ ನಂತರ ಮತ್ತೊಮ್ಮೆ ವಿಜಯ್ ಸೂರ್ಯ ಮತ್ತು ವೈಷ್ಣವಿ ಅವರ ಜೋಡಿಯ ಹಿಟ್ ಸೀರಿಯಲ್ ಇದಾಗಬಹುದು ಎನ್ನುವುದು ಅಭಿಮಾನಿಗಳ ನಿರೀಕ್ಷೆ.

- Advertisment -