ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವಿನ್ನರ್ ಆಗಿ ಹೊರ ಹೊಮ್ಮಿದ ಮಂಜು ಪಾವಗಡ ಅವರಿಗೆ ಸಹಜವಾಗಿಯೇ ಬಿಗ್ ಬಾಸ್ ನ ನಂತರ ಜನಪ್ರಿಯತೆ ಮೊದಲಿಗಿಂತಲೂ ಹೆಚ್ಚಿದೆ. ಮಂಜು ಪಾವಗಡ ಈಗ ನಾಡಿನ ಮೂಲೆ ಮೂಲೆಯಲ್ಲೂ ಗುರುತಿಸಲ್ಪಡುವ ಸೆಲೆಬ್ರಿಟಿ ಆಗಿದ್ದಾರೆ ಎನ್ನುವುದರಲ್ಲಿ ಖಂಡಿತ ಅನುಮಾನವೇ ಇಲ್ಲ. ಬಿಗ್ ಬಾಸ್ ನಂತರ ಮಂಜು ಪಾವಗಡ ಅವರ ಸಂದರ್ಶನಗಳು ಮಾದ್ಯಮಗಳಲ್ಲಿ ಸದ್ದು ಮಾಡಿತ್ತು. ಇದಲ್ಲದೇ ಕೆಲವು ಶೋ ಗಳಲ್ಲಿ ಅವರು ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು..
ಮಂಜು ಪಾವಗಡ ಅವರು ಇದೀಗ ಮತ್ತೊಮ್ಮೆ ಕಿರುತೆರೆಯಲ್ಲಿ ಭರ್ಜರಿ ಎಂಟರ್ಟೈನ್ಮೆಂಟ್ ನೀಡಲು ಸಜ್ಜಾಗಿದ್ದಾರೆ. ಕಿರುತೆರೆಯಲ್ಲಿ ಅವರು ಭರ್ಜರಿ ಡಾನ್ಸ್ ಗಳ ಮೂಲಕ ತಮ್ಮ ಅಭಿಮಾನಿಗಳು ಹಾಗೂ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸಲು ಮಂಜು ಸಜ್ಜಾಗಿದ್ದಾರೆ. ಹೌದು ಮಂಜು ಪಾವಗಡ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಅನುಬಂಧ ಪ್ರಶಸ್ತಿಗಳ ಸಮಾರಂಭದಲ್ಲಿ ಅದ್ಭುತ ಪರ್ಫಾಮೆನ್ಸ್ ನೀಡಲಿದ್ದಾರೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ.
ಅನುಬಂಧ ಅವಾರ್ಡ್ಸ್ ನ ಅದ್ದೂರಿ ಕಾರ್ಯಕ್ರಮದಲ್ಲಿ ಮಂಜು ಪಾವಗಡ ಅವರು ಮೆಡ್ಲಿ ಸಾಂಗ್ ಗಳಿಗೆ ಜಬರ್ದಸ್ತ್ ಡಾನ್ಸ್ ಗಳನ್ನು ಮಾಡಲಿದ್ದಾರೆ. ಪ್ರಶಸ್ತಿ ಕಾರ್ಯಕ್ರಮದ ಸಮಾರಂಭದ ಚಿತ್ರೀಕರಣ ಈಗಾಗಲೇ ಮುಗಿದಿದೆ ಎನ್ನಲಾಗಿದ್ದು ಶೀಘ್ರದಲ್ಲೇ ವಾಹಿನಿಯಲ್ಲಿ ಪ್ರಸಾರವಾಗುವುದು ಎನ್ನಲಾಗಿದೆ. ಮಂಜು ಪಾವಗಡ ಅಭಿಮಾನಿಗಳಿಗೆ ಅವರ ಡಾನ್ಸ್ ಪರ್ಫಾಮೆನ್ಸ್ ಭರ್ಜರಿ ಮನರಂಜನೆ ನೀಡಲಿದೆ ಹಾಗೂ ಪ್ರೇಕ್ಷಕರನ್ನು ರಂಜಿಸಲಿದೆ.
ಬಿಗ್ ಬಾಸ್ ನಂತರ ಮಂಜು ಪಾವಗಡ ಸಿನಿಮಾಗಳಲ್ಲಿ ಸಹಾ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿದ್ದ ರಾಜೀವ್ ಹನು ಅವರ ಹೊಸ ಸಿನಿಮಾ ಉಸಿರೇ ಉಸಿರೇ ನಲ್ಲಿ ಮಂಜು ಅವರು ಒಂದು ಪ್ರಮುಖ ಪಾತ್ರವನ್ನು ಪೋಷಿಸಲಿದ್ದಾರೆ. ಬಿಗ್ ಬಾಸ್ ನಂತರ ಮಂಜು ಅವರಿಗೆ ಹೊಸ ಹೊಸ ಸಿನಿಮಾಗಳ ಅವಕಾಶಗಳು ಬರುತ್ತಿದೆ ಎನ್ನಲಾಗಿದೆ. ಇದಲ್ಲದೇ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ವೀಡಿಯೋ ಸಾಂಗ್ ನಲ್ಲಿನ ಕಾಣಿಸಿಕೊಳ್ಳಲಿದ್ದಾರೆ ಮಂಜು ಪಾವಗಡ.
ಮಂಜು ಪಾವಗಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಭಜರಂಗಿ 2 ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಅಕ್ಟೋಬರ್ 29 ಕ್ಕೆ ತೆರೆಗೆ ಬರಲಿದ್ದು, ಮಂಜು ಪಾವಗಡ ಅವರಿಗೆ ಬಿಗ್ ಬಾಸ್ ನಂತರ ಹೊಸ ಹೊಸ ಅವಕಾಶಗಳು ಅರಸಿ ಬರುತ್ತಿದ್ದು, ಅವರು ಉತ್ತಮ ಪಾತ್ರಗಳ ಕಡೆಗೆ ಗಮನ ಹರಿಸಿದ್ದಾರೆ ಎನ್ನಲಾಗಿದೆ.