ಕಿರುತೆರೆಯಲ್ಲಿ ಅಸಲಿ ಆಟಕ್ಕೆ ಮುಹೂರ್ತ ಫಿಕ್ಸ್: ಬಿಗ್ ಬಾಸ್ ಹೊಸ ಸೀಸನ್ ಗೆ ವೇದಿಕೆ ಸಜ್ಜು

Entertainment Featured-Articles Movies News

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅನುಮಾನವೇ ಇಲ್ಲದೇ ಪ್ರೇಕ್ಷಕರು ಸಹಾ ತಟ್ಟನೆ ಹೇಳುವ ಹೆಸರು ಬಿಗ್ ಬಾಸ್. ಕಿರುತೆರೆಯಲ್ಲಿ ಬಿಗ್ ಬಾಸ್ ಗೆ ವಿಶೇಷವಾದ ಸ್ಥಾನವಿದೆ, ಅದನ್ನು ನೋಡುವ ದೊಡ್ಡ ಮಟ್ಟದ ಪ್ರೇಕ್ಷಕರ ಬಳಗವೂ ಇದೆ. ಆದ್ದರಿಂದಲೇ ಬಿಗ್ ಬಾಸ್ ನ ಪ್ರತಿ ಸೀಸನ್ ಕೂಡಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತವೆ. ‌ದೊಡ್ಡ ಸದ್ದು, ಸುದ್ದಿ ಮಾಡುತ್ತದೆ. ಆದರೆ ಕಳೆದ ಎರಡು ವರ್ಷಗಳು ಮಾತ್ರ ಬಿಗ್ ಬಾಸ್ ನಲ್ಲಿ ಕೆಲವೊಂದು ಬದಲಾವಣೆಗಳು ಆದವು. ಕೋವಿಡ್ ಕಾರಣದಿಂದಾಗಿ ಬಿಗ್ ಬಾಸ್ ಪ್ರಸಾರಕ್ಕೆ ಅಡಚಣೆ ಎದುರಾಗಿತ್ತು.

ಆದರೆ ಈ ಅಡಚಣೆಯ ಹೊರತಾಗಿಯೂ ಸಹಾ ಬಿಗ್ ಬಾಸ್ ಶೋ ವನ್ನು ನಡೆಸಿ ಮತ್ತೊಮ್ಮೆ ಅದು ಯಶಸ್ಸನ್ನು ಪಡೆದುಕೊಂಡಿತ್ತು. ಹಿಂದಿ ಮಾತ್ರವೇ ಅಲ್ಲದೇ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಮೂಲಕ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಹಾ ಬಿಗ್ ಬಾಸ್ ದೊಡ್ಡ ಸಕ್ಸಸ್ ಮಾತ್ರವೇ ಅಲ್ಲದೇ ದೊಡ್ಡ ಅಭಿಮಾನ ಬಳಗವನ್ನು ಪಡೆದುಕೊಂಡಿದ್ದು, ಪ್ರತಿ ಸೀಸನ್ ಮುಗಿದ ಮೇಲೆ ಹೊಸ ಸೀಸನ್ ಯಾವಾಗ ? ಎನ್ನುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರ ಬಗ್ಗೆ ಚರ್ಚೆಗಳು ಸಹಾ ನಡೆಯುತ್ತವೆ.

ಪ್ರಸ್ತುತ ಬಿಗ್ ಬಾಸ್ ನ ಕುರಿತಾಗಿ ಒಂದು ಹೊಸ ಸುದ್ದಿ ಹರಿದಾಡಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ಬಿಗ್ ಬಾಸ್ ನ ಹೊಸ ಸೀಸನ್ ನ ಆರಂಭಕ್ಕೆ ಮುಹೂರ್ತ ನಿಗಧಿಯಾಗಿದೆ. ಹೌದು, ಆದರೆ ನಾವು ಹೇಳಲು ಹೊರಟಿರುವುದು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುವ ಕನ್ನಡದ ಬಿಗ್ ಬಾಸ್ ಕುರಿತಾಗಿ ಅಲ್ಲ. ಬದಲಾಗಿ ಇದು ಅಕ್ಕಿನೇನಿ ನಾಗಾರ್ಜುನ ಅವರು ಅವರು ನಿರೂಪಣೆ ಮಾಡುವ ತೆಲುಗಿನ ಬಿಗ್ ಬಾಸ್ ಕುರಿತಾಗಿಯಾಗಿದೆ.

ಇನ್ನು ಈ ಬಾರಿ ತೆಲುಗಿನ ಬಿಗ್ ಬಾಸ್ ಗೆ ಯಾರೆಲ್ಲಾ ಹೋಗಲಿದ್ದಾರೆ ಎನ್ನುವ ಚರ್ಚೆಗಳು ಆರಂಭವಾಗಿದೆ. ತೆಲುಗಿನ ಬಿಗ್ ಬಾಸ್ ಸೀಸನ್ 6 ಸೆಪ್ಟೆಂಬರ್ 4 ರಿಂದ ಆರಂಭವಾಗಲಿದೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳ ಹಿಂದೆಯಷ್ಟೇ ಈ ಬಾರಿ ವಾಹಿನಿಯು ನಿರೂಪಣೆಗೆ ಸಮಂತಾರನ್ನು ಕರೆತರಲಿದೆ ಎನ್ನಲಾಗಿದೆ. ಆದರೆ ಈಗ ಈ ಬಾರಿಯೂ ಸಹಾ ನಿರೂಪಣೆ ನಟ ನಾಗಾರ್ಜುನ ಅವರೇ ಮಾಡಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ನಾಗಾರ್ಜುನ ಅವರು ಕೆಲವೊಂದು ಎಪಿಸೋಡ್ ಗಳಿಗೆ ಗೈರಾದಾಗ ನಟಿ ರಮ್ಯಕೃಷ್ಣ ನಿರೂಪಣೆ ಮಾಡಿ ಗಮನ ಸೆಳೆದಿದ್ದರು.

Leave a Reply

Your email address will not be published.