ಕಿರುಚುವ ಮೂಲಕ ಲಕ್ಷ ಲಕ್ಷ ಗಳಿಸುತ್ತಾರೆ ಈ ಮಹಿಳೆ: ಏನೀ ವಿಶೇಷ ಟ್ಯಾಲೆಂಟ್? ಸಿಕ್ಕಾಪಟ್ಟೆ ಆಸಕ್ತಿಕರ ಸುದ್ದಿ ಇದು

Written by Soma Shekar

Published on:

---Join Our Channel---

ಪ್ರಸ್ತುತ ಕಾಲದಲ್ಲಿ ಜನರು ಪ್ರತಿಭೆಯನ್ನು ಗುರುತಿಸಲು ಮತ್ತು ಮೆಚ್ಚುವುದಕ್ಕೆ ಮಾತ್ರವೇ ಅಲ್ಲದೇ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ಸಹಾ ನೀಡಲು ಪ್ರಾರಂಭಿಸಿದ್ದಾರೆ. ಈ ಕಾರಣದಿಂದಲೇ ಪ್ರತಿಭಾವಂತರು ತಮ್ಮ ಕೌಶಲ್ಯದಿಂದ ಹಣವನ್ನು ಗಳಿಸಿ ಜೀವನ ನಡೆಸುತ್ತಿದ್ದಾರೆ. ಜಗತ್ತಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಿತ್ರ ವಿಚಿತ್ರ ಎನಿಸುವಂತಹ ಪ್ರತಿಭೆಗಳ ಅನಾವರಣ ಸಹಾ ಆಗುತ್ತಿದೆ. ಅಂದರೆ ತಿನ್ನುವುದು, ಕುಡಿಯುವುದು, ಎದ್ದೇಳುವುದು ಕೂಡಾ ಒಂದು ರೀತಿಯಲ್ಲಿ ಪ್ರತಿಭೆ ಎನಿಸಿದೆ. ಏಕೆಂದರೆ ಕೆಲವರು ಇದನ್ನೇ ಎಲ್ಲರಿಗಿಂತ ಭಿನ್ನವಾಗಿ ಮಾಡಿದರೆ ಅದೇ ಒಂದು ಕೌಶಲ್ಯವಾಗುತ್ತದೆ.

ಈಗ ಅದೇ ರೀತಿಯಲ್ಲಿ ಇಲ್ಲೊಬ್ಬ ಹುಡುಗಿಗೆ ಕಿರುಚಾಡುವ ಕೌಶಲವಿದ್ದು, ತನ್ನ ಈ ಕೌಶಲ್ಯದಿಂದಲೇ ಈಕೆ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾಳೆ ಎಂದರೆ ನಿಮಗೆ ಅಚ್ಚರಿಯಾಗಬಹುದು.‌ ಈ ಹುಡುಗಿಯ ಹೆಸರು ಆಶ್ಲೇ ಪೆಲ್ಡನ್. ಈಕೆ ಕಿರುಚುತ್ತಾ ಹಣವನ್ನು ಸಂಪಾದಿಸುತ್ತಾಳೆ. ಆಕೆ ಒಬ್ಬ ವೃತ್ತಿಪರ ಸ್ಕ್ರೀಮ್ ಆರ್ಟಿಸ್ಟ್ ಮತ್ತು ಚಲನಚಿತ್ರಗಳಿಗೆ ಧ್ವನಿಯನ್ನು ರೆಕಾರ್ಡ್ ಮಾಡುತ್ತಾರೆ. ಇಂತಹ ಕಲಾವಿದರು ಮೈಕ್ ಮುಂದೆ ವಿವಿಧ ರೀತಿಯ ಶಬ್ದಗಳನ್ನು ಮಾಡುವುದರಲ್ಲಿ ನಿಪುಣರಾಗಿರುತ್ತಾರೆ.

ಅವರು ಮಾಡುವ ಈ ಧ್ವನಿಗಳನ್ನು ಚಲನಚಿತ್ರಗಳಲ್ಲಿ ವಿವಿಧ ದೃಶ್ಯಗಳಲ್ಲಿ ಬಳಸಲಾಗುತ್ತದೆ. ಆಶ್ಲೆ ತಮ್ಮ ಪ್ರತಿಭೆಯ ಬಗ್ಗೆ ಮಾತನಾಡುತ್ತಾ, ಆಕೆ ತನಗೆ ಏಳು ವರ್ಷ ವಯಸ್ಸಾಗಿದ್ದಾಗ ತನಗೆ ತನ್ನ ಈ ಪ್ರತಿಭೆಯ ಬಗ್ಗೆ ತಿಳಿದುಕೊಂಡಿದ್ದಾರೆ ಹೇಳುತ್ತಾರೆ. ಆ ಸಮಯದಲ್ಲಿ ಅವರು ಚೈಲ್ಡ್ ಆಫ್ ಆಂಗರ್ ಎಂಬ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಕಿರುಚಾಡುವ ಹಲವು ದೃಶ್ಯಗಳಿದ್ದವು. ಯಾವಾಗ ತನಗೆ ಈ ರೀತಿ ಕಿರುಚುವ ಕೌಶಲ್ಯ ವಿದೆ ಎಂದು ತಿಳಿಯಿತು.

ಆಗ ಆಕೆ ಅದರ ಬಗ್ಗೆ ಹೆಚ್ಚು ಗಮನ ನೀಡಿ, ಅದನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಯೋಚಿಸಿದರು. ಮಾಧ್ಯಮ ವರದಿಗಳ ಅನ್ವಯ, ಆಶ್ಲೇ ಪೆಲ್ಡನ್ ಕಳೆದ 20 ರಿಂದ 25 ವರ್ಷಗಳಿಂದ ಈ ವೃತ್ತಿಯನ್ನು ಮಾಡುತ್ತಿದ್ದಾರೆ. ಆಶ್ಲೇ 40 ಕ್ಕೂ ಹೆಚ್ಚು ಚಲನ ಚಿತ್ರಗಳು ಮತ್ತು ಟಿವಿ ಸರಣಿಗಳಲ್ಲಿ ತಮ್ಮ ಧ್ವನಿ ನೀಡಿದ್ದಾರೆ. ಆಶ್ಲೇ ಮಾತನಾಡುತ್ತಾ, ಹೀಗೆ ಧ್ವನಿಯನ್ನು ನೀಡುವುದಕ್ಕೆ ತಮಗೆ ಯಾವುದೇ ಅಭ್ಯಾಸದ ಅಗತ್ಯವಿಲ್ಲ ಏಕೆಂದರೆ ತನಗೆ ಅದು ಸ್ವಾಭಾವಿಕವಾಗಿ ಬರುತ್ತದೆ ಎಂದು ಹೇಳುತ್ತಾರೆ.

ಕೆಲವೊಂದು ಬಾರಿ ಎಂಟು ಗಂಟೆಗಳ ಕಾಲ ಕಿರುಚಬೇಕಾಗುತ್ತದೆಣ ಆಗ ದಣಿವಾಗುತ್ತದೆ, ಆದರೆ ನನ್ನ ಕೆಲಸವನ್ನು ನಾನು ಎಂಜಾಯ್ ಮಾಡುತ್ತೇನೆ ಎನ್ನುತ್ತಾರೆ ಆಶ್ಲೆ. ಹೀಗೆ ಅವರು ತಮ್ಮ ಈ ಕೆಲಸದಿಂದಲೇ ಲಕ್ಷಗಳ ಮೊತ್ತದಲ್ಲಿ ಗಳಿಕೆಯನ್ನು ಸಹಾ ಮಾಡುತ್ತಾರೆ. ಆಶ್ಲೆ ತಮ್ಮ ಕೌಶಲ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಜೀವನದ ದಿಕ್ಕನ್ನು ಬದಲಿಸಿಕೊಂಡಿದ್ದು, ಆಕೆಯ ಪ್ರತಿಭೆಯೇ ಆಕೆಯ ಗಳಿಕೆಯ ಮೂಲವಾಗಿದೆ.

Leave a Comment