ಕಾಶಿ ವಿಶ್ವನಾಥ ದೇಗುಲದ ಸಿಬ್ಬಂದಿಯ ಸಮಸ್ಯೆ ಅರಿತು, ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ

0
196

ಕಾಶಿ ವಿಶ್ವನಾಥ ದೇಗುಲ ಎಂದರೆ ಭಾರತದಲ್ಲಿ ಸಮಸ್ತ ಹಿಂದೂಗಳ ಮನಸ್ಸಿನಲ್ಲಿ ಒಂದು ಭಕ್ತಿಯ ಭಾವ ಮೂಡುತ್ತದೆ. ಆ ಮಹಾಶಿವನನ್ನು ವಿಶ್ವನಾಥನ ರೂಪದಲ್ಲಿ ದರ್ಶನ ಮಾಡಲು ಕಾಶಿಗೆ ಹೋಗುವುದು ಒಂದು ಅದೃಷ್ಟವೆಂದು, ಪೂರ್ವ ಜನ್ಮ ಸುಕೃತವೆಂದು ನಂಬುವ ಅನೇಕ ಜನರು ನಮ್ಮ ಸುತ್ತ ಮುತ್ತಲೂ ಇದ್ದಾರೆ. ಕಾಶಿ ಎಂದರೆ ಅದೊಂದು ದಿವ್ಯ ಧಾಮ ಎನ್ನುವ ನಂಬಿಕೆ ಸಹಸ್ರಾರು ವರ್ಷಗಳಿಂದಲೂ ಸಹಾ ಜನರ ಮನದಲ್ಲಿ ಗಟ್ಟಿಯಾಗಿದೆ. ಇಲ್ಲಿನ ವಿಶ್ವನಾಥ ದೇಗುಲವು ಜಗತ್ಪ್ರಸಿದ್ಧವಾಗಿದೆ ಹಾಗೂ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.

ಈ ಪವಿತ್ರ ದೇಗುಲ ಪ್ರಾಂಗಣದಲ್ಲಿ ಪ್ಲಾಸ್ಟಿಕ್ ಅಥವಾ ರಬ್ಬರ್ ನಿಂದ ಮಾಡಲಾದ ಪಾದರಕ್ಷೆಗಳನ್ನು ಧರಿಸುವುದನ್ನು ಈಗಾಗಲೇ ನಿಷೇಧ ಮಾಡಲಾಗಿದೆ. ಈ ಕಾರಣದಿಂದಾಗಿಯೇ ಈ ದೇಗುಲದಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ದೇಗುಲದ ಆವರಣದಲ್ಲಿ ಚಪ್ಪಲಿಗಳನ್ನು ಧರಿಸದೇ ಬರಿಗಾಲಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ದೇಗುಲದ ಸಿಬ್ಬಂದಿಯು ಹೀಗೆ ಬರಿಗಾಲಲ್ಲಿ ಕೆಲಸ ಮಾಡುವುದು ಪ್ರಧಾನಿ ಮೋದಿಯವರ ಗಮನಕ್ಕೂ ಸಹಾ ಬಂದಿದ್ದು, ಮೋದಿಯವರು ಈ ನಿಮಿತ್ತ ಒಂದು ಮಹತ್ವದ ಕಾರ್ಯ ಮಾಡಿದ್ದಾರೆ.

ಹೌದು ಪ್ರಧಾನಿ ನರೇಂದ್ರ ಮೋದಿಯವರು ಕಾಶಿ ವಿಶ್ವನಾಥ ದೇಗುಲದ ಆವರಣದಲ್ಲಿ ಕೆಲಸ ಮಾಡುವ ಸಿಬ್ಬಂದಿಗಾಗಿ ನೂರು ಜೊತೆ ಸೆಣಬಿನ ಪಾದರಕ್ಷೆಗಳನ್ನು ಕಳುಹಿಸಿದ್ದಾರೆ. ದೇಗುಲದ ಅರ್ಚಕರು, ಸೇವೆ ಮಾಡುವ ಜನರು, ಭದ್ರತಾ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಮತ್ತು ಇತರೆ‌ ಕೆಲಸಗಾರರು ಚಳಿಯಲ್ಲಿ ಬರಿಗಾಲಲ್ಲಿ ಕೆಲಸ ಮಾಡುವುದು ಬೇಡವೆಂದು ಮೋದಿಯವರು ಸೆಣಬಿನ ಪಾದರಕ್ಷೆಗಳನ್ನು ಖರೀದಿ ಮಾಡಿ ದಿವ್ಯ ಧಾಮಕ್ಕೆ ಕಳುಹಿಸಿದ್ದಾರೆ.

LEAVE A REPLY

Please enter your comment!
Please enter your name here