ಬಿಗ್ ಬಾಸ್ ಕನ್ನಡ ಸೀಸನ್ 9 ಭರ್ಜರಿಯಾಗಿ ಪ್ರಾರಂಭವಾಗಿ ಅದಾಗಲೇ ಹನ್ನೆರಡು ದಿನಗಳು ಕಳೆದು ಹದಿಮೂರನೇ ದಿನಕ್ಕೆ ಕಾಲನ್ನು ಇಟ್ಟಾಗಿದೆ. ಬಿಗ್ ಬಾಸ್ ಮನೆಯಲ್ಲಿ ಆರಂಭದ ದಿನಗಳಲ್ಲಿ ಇದ್ದ ಮನೆಯ ವಾತಾವರಣಕ್ಕೂ ಇಂದು ಇರುವ ವಾತಾವರಣಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಹತ್ತು, ಹಲವು ವಿಚಾರಗಳಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಮಾತಿಗೆ ಮಾತು ಬೆಳೆದು ಮನೆಯಲ್ಲಿ ರಣರಂಗದ ವಾತಾವರಣ ನಿರ್ಮಾಣವಾಗಿದೆ. ಮನೆಯಲ್ಲಿ ಶಾಂತಿ, ಶಿಸ್ತು ಎನ್ನುವುದು ದೂರಾದಂತೆ ಕಾಣುತ್ತಿದೆ. ಇವೆಲ್ಲವುಗಳ ನಡುವೆ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಅವರ ಮೇಲೆ ಆಗಾಗ ಪ್ರ್ಯಾಂಕ್ ಗಳು ನಡೆಯುತ್ತಲೇ ಇರುತ್ತದೆ.
ತಮ್ಮ ಮೇಲೆ ಆಗುವ ಇಂತಹ ಪ್ರ್ಯಾಂಕ್ ಗಳಿಂದ ಗುರೂಜಿ ಅವರಿಗೆ ಕೋಪ ಬಂದರೂ ಸಹಾ ಅವರು ಅದೆಲ್ಲವನ್ನೂ ನಿಯಂತ್ರಿಸಿಕೊಂಡು ಬರುತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಅವರನ್ನು ಮಾತನಾಡಿಸಿದ ಕಾವ್ಯಶ್ರೀ ಗೌಡ ಅವರಿಗೆ ಚಾಕುವನ್ನು ತೋರಿಸಿದ ಗುರೂಜಿ ಅವರು ತಮ್ಮ ಕೈಯನ್ನು ಕೊಯ್ದುಕೊಳ್ತೀನಿ ಎಂದು ಹೆ ದ ರಿ ಸಿ ದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ ಹಾಗೂ ಅವರು ಟಾಸ್ಕ್ ಗಳಲ್ಲಿ, ಮನೆಯ ಅಡುಗೆ ಕೆಲಸದಲ್ಲಿ ಸಕ್ರಿಯವಾಗಿದ್ದು ಅವರು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ ಮತ್ತು ಮನರಂಜನೆ ವಿಚಾರದಲ್ಲಿ ಅವರು ಬಹಳ ಮುಂದೆ ಇದ್ದಾರೆ.
ಮನೆಯಲ್ಲಿ ಕ್ಯಾಪ್ಟನ್ಸಿ ವಿಚಾರದಲ್ಲಿ ಗುರೂಜಿ ಮೇಲೆ ನಡೆದ ಪ್ರಾಂಕ್ ನಿಂದಾಗಿ ಅವರು ಸ್ವಲ್ಪ ಹತಾಶರಾಗಿದ್ದರು. ಆ ಹತಾಶೆಯಿಂದಲೇ ಅವರು ನಾಟಕೀಯವಾಗಿ ಮಾತನಾಡುತ್ತಾರೆ, ಚುಚ್ಚಿ ಮಾತನಾಡಿದ್ದು ಬೇಸರವಾಯಿತೆಂದು ಪದೇ ಪದೇ ಕಾವ್ಯಶ್ರೀ ವಿ ರು ದ್ಧ ಗುರೂಜಿ ಅವರು ಮಾತನಾಡಿದ್ದಾರೆ. ಆಗ ಕಾವ್ಯ ಶ್ರೀ ತಾನು ನಾಟಕೀಯವಾಗಿ ಎಲ್ಲಿ ಮಾತನಾಡಿದೆ ಎಂದು ಗುರೂಜಿಯನ್ನು ಪ್ರಶ್ನೆ ಮಾಡಿದ್ದಾರೆ. ಕಾವ್ಯಶ್ರೀ ಮಾತಿನಿಂದ ಗುರೂಜಿ ಅವರ ಕೋ ಪ ಹೆಚ್ಚಾಗಿದೆ. ರೊ ಚ್ಚಿ ಗೆದ್ದ ಗುರೂಜಿ ಅವರು ಈ ವಿಷ್ಯ ಬಿಡು, ಇಲ್ಲಾ ಅಂದ್ರೆ ನಾನು ಕೈ ಕೊಯ್ದುಕೊಳ್ಳುತ್ತೇನೆ ಎಂದು ಗರಂ ಆಗಿ ಕಾವ್ಯಶ್ರೀಗೆ ಪ್ರತಿಕ್ರಿಯೆ ನೀಡಿದ್ದಾರೆ.