ಕಾಳಿ ಕೈಲಿ ಸಿಗ್ರೇಟ್ ಇದ್ರೆ ತಪ್ಪೇನು ಎಂದು ನಿರ್ದೇಶಕಿಗೆ ಟ್ವಿಟರ್ ಕೊಟ್ಟಿದೆ ಬಿಗ್ ಶಾಕ್: ಕಾಳಿ ಪೋಸ್ಟರ್ ವಿವಾದ

Entertainment Featured-Articles Movies News

ನಿರ್ದೇಶಕಿ ಲೀನಾ ಮಣಿಮೇಖಲೆ ನಿರ್ದೇಶನ ಮಾಡುತ್ತಿರುವ ಕಾಳಿ ಸಾಕ್ಷಚಿತ್ರ ಕುರಿತಾದ ವಿ ವಾ ದವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಸುದ್ದಿಯನ್ನು ಮಾಡುತ್ತಿದೆ. ಲೀನಾ ಅವರ ಈ ಸಾಕ್ಷ್ಯಚಿತ್ರದ ಪೋಸ್ಟರ್ ಕೆಲವೇ ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಬಿಡುಗಡೆಯಾದ ಪೋಸ್ಟರ್ ನಲ್ಲಿ ಕಾಳಿಮಾತೆಯ ಕೈಯಲ್ಲಿ ಸಿಗರೇಟ್ ಹಿಡಿದಿರುವಂತೆ ಚಿತ್ರಿಸಲಾಗಿತ್ತು. ಈ ಪೋಸ್ಟರ್ ಅನ್ನು ಕಂಡು ಜನರು ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಹೊರಹಾಕಿದ್ದರು.

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಮತ್ತೆ ಮತ್ತೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಜನರು ಆ ಕ್ರೋ ಶ ವನ್ನು ವ್ಯಕ್ತಪಡಿಸಿದ್ದರು. ನೆಟ್ಟಿಗರು ಈ ಪೋಸ್ಟರ್ ಅನ್ನು ಹಂಚಿಕೊಂಡು ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಹೀಗೆ ಧಾರ್ಮಿಕ ಭಾವನೆಗಳೊಂದಿಗೆ ಆಟ ಆಡುವವರಿಗೆ ಸರಿಯಾದ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದರು. ಪೋಸ್ಟರ್ ಬಿಡುಗಡೆಯ ಬೆನ್ನೆಲ್ಲೆ ದೇಶದ ಹಲವು ಭಾಗಗಳಲ್ಲಿ ನಿರ್ದೇಶಕಿ ಲೀನಾ ಅವರ ಮೇಲೆ ದೂರುಗಳು ದಾಖಲಾಗಿವೆ.

ನಿರ್ದೇಶಕಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಅಲ್ಲದೇ ನಿರ್ದೇಶಕಿ ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯ ಮಾಡಿದೆ. ಆದರೆ ಈ ಬೆಳವಣಿಗೆಗಳ ಬೆನ್ನಲ್ಲೇ ನಿರ್ದೇಶಕಿ ಲೀನಾ ಸಹಾ ಪ್ರತಿಕ್ರಿಯೆ ನೀಡಿದ್ದು, ಕಾಳಿಮಾತೆಯ ಕೈಯಲ್ಲಿ ಸಿಗರೇಟ್ ಇದ್ದರೆ ತಪ್ಪೇನು?? ಎಂದು ಉದ್ದಟತನವನ್ನು ಮೆರೆದಿದ್ದಾರೆ. ಅಲ್ಲದೇ ತಾನು ಕಾಳಿ ಪೋಸ್ಟರ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಕ್ಷಮಾಪಣೆ ಕೇಳುವುದಿಲ್ಲ ಎಂದು ಸಹಾ ಹೇಳಿದ್ದಾರೆ ಎನ್ನಲಾಗಿದೆ.‌ ಹೀಗೆ ನಿರ್ದೇಶಕಿಯು ತಮ್ಮ ಉದ್ಧಟತನವನ್ನು ಮೆರೆಯುವಾಗಲೇ ಸಾಮಾಜಿಕ ಜಾಲತಾಣ ವಾದ ಟ್ವಿಟರ್ ನಿರ್ದೇಶಕಿ‌‌ ಲೀನಾ ಅವರಿಗೆ ದೊಡ್ಡ ಶಾಕ್ ನೀಡಿದೆ.

ಕಾಳಿಮಾತೆಯ ಪೋಸ್ಟರ್ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಟ್ವಿಟರ್ ನಿರ್ದೇಶಕಿ ಲೀನಾ ಪೋಸ್ಟ್ ಮಾಡಿದ್ದ ಪೋಸ್ಟರನ್ನು ತೆಗೆದುಹಾಕಿದೆ. ಇನ್ಫಾರ್ಮೇಶನ್ ಟೆಕ್ನಾಲಜಿ ಹಾಟ್ 2000 ಆ್ಯಕ್ಟ್ ನ ಅನ್ವಯ ಆಕೆ ಮಾಡಿರುವ ಪೋಸ್ಟ್ ಅನ್ನು ಬ್ಲಾಕ್ ಮಾಡಬೇಕೆಂದು ಟ್ವಿಟರ್ ಗೆ ಮನವಿ ಮಾಡಿತ್ತು ಎನ್ನಲಾಗಿದೆ. ಸರ್ಕಾರದ ಮನವಿಯ ಬೆನ್ನಲ್ಲೇ ಟ್ವಿಟರ್ ನಿರ್ದೇಶಕಿ ಲೀನಾ ಅವರ ಪೋಸ್ಟನ್ನು ಡಿಲೀಟ್ ಮಾಡಿದೆ.

ಟ್ವಿಟರ್ ನಲ್ಲಿ ತನ್ನ ಪೋಸ್ಟ್ ಡಿಲೀಟ್ ಆಗಿರುವುದಕ್ಕೆ ನಿರ್ದೇಶಕಿ ಲೀನಾ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆಕೆ ಪ್ರಸ್ತುತ ಕೆನಡಾದಲ್ಲಿ ನೆಲೆಸಿದ್ದಾರೆ. ಅವರು ಸ್ವಂತ ಪ್ರೊಡಕ್ಷನ್ ಹೌಸ್ ಹೊಂದಿದ್ದು, ಈಗಾಗಲೇ ಸಾಕಷ್ಟು ಕಿರುಚಿತ್ರಗಳು ಮತ್ತು ಸಾಕ್ಷಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಆದರೆ ಅವರ ಹೊಸ ಸಾಕ್ಷ್ಯ ಚಿತ್ರ ಕಾಳಿ ಪೋಸ್ಟರ್ ಮೂಲಕ ವಿ ವಾ ದ ವನ್ನು ಸೃಷ್ಟಿಸಿದ್ದಾರೆ.

Leave a Reply

Your email address will not be published.