ರಷ್ಯಾದ ದಾ ಳಿ ಗೆ ಒಳಗಾಗಿರುವ ಉಕ್ರೇನ್ ನ ಪರಿಸ್ಥಿತಿ ನಿಜಕ್ಕೂ ಹದಗೆಡುತ್ತಾ ಸಾಗಿದೆ. ಉಕ್ರೇನ್ ನಲ್ಲಿ ಇರುವ ನಾಗರಿಕರು ಭ ಯ ದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್ ನಾಗರಿಕರು ಮಾತ್ರವೇ ಅಲ್ಲದೇ ವಿದೇಶಿಯರಿಗೂ ಕೂಡಾ ಇದೊಂದು ಭೀ ಕ ರ ವಾದ ದು ಸ್ಥಿ ತಿಯನ್ನು ತಂದೊಡ್ಡಿದೆ. ವಿದೇಶಗಳಿಂದ ಉಕ್ರೇನ್ ನ್ ಗೆ ಉದ್ಯೋಗ, ಕೆಲಸ, ಇನ್ನಿತರೆ ಉದ್ದೇಶಗಳಿಗೆಂದು ಉಕ್ರೇನ್ ನಲ್ಲಿ ಉಳಿದಿದ್ದ ವಿದೇಶಿ ಪ್ರಜೆಗಳಿಗೆ ಜೀವ ಭ ಯ ಕಾಡಿದೆ. ಅಲ್ಲಿಂದ ತಮ್ಮ ತಾಯ್ನಾಡಿಗೆ ಬರುವ ದಾರಿಗಳನ್ನು ಹುಡುಕುವಂತಾಗಿದೆ.
ಹೀಗೆ ಉಕ್ರೇನ್ ತೊರೆಯುವವರಲ್ಲಿ ಗಣ್ಯರು, ಸಾಮಾನ್ಯರು ಎನ್ನುವ ವ್ಯತ್ಯಾಸವಿಲ್ಲ. ಸಂಕಷ್ಟಕ್ಕೆ ಸಿಲುಕಿದವರೆಲ್ಲಾ ಉದ್ದೇಶ ಈಗ ಒಂದೇ ಆಗಿದೆ, ಅದೇನೆಂದರೆ ಸುರಕ್ಷಿತವಾಗಿ ಉಕ್ರೇನ್ ಗಡಿಯನ್ನು ದಾಟಿ, ತಮ್ಮ ದೇಶಗಳನ್ನು ತಲುಪುವುದು. ಇಂತಹ ಒಂದು ಸಂದಿಗ್ಧಕ್ಕೆ ಸಿಲುಕಿದವರಲ್ಲಿ ಹಾಲಿವುಡ್ ನ ಜನಪ್ರಿಯ ನಟನೊಬ್ಬನೂ ಸೇರಿದ್ದು, ತಮ್ಮ ಅಸಹಾಯಕತೆಯನ್ನು ಅವರು ಟ್ವಿಟರ್ ಮೂಲಕ ಹಂಚಿಕೊಳ್ಳುವ ಮೂಲಕ, ಅದರ ಮಾಹಿತಿಯನ್ನು ನೀಡಿದ್ದಾರೆ.
ಅಮೆರಿಕನ್ ನಟ, ಅಕಾಡೆಮಿ ಪ್ರಶಸ್ತಿ ವಿಜೇತ ನಟ ಸೀನ್ ಜಸ್ಟಿನ್ ಇಂತಹುದೊಂದು ಸಮಸ್ಯೆಗೆ ಸಿಲುಕಿದ ನಟನಾಗಿದ್ದಾರೆ. ಮೈಲ್ಸ್ ಟು ಪೊಲಿಶ್ ಬಾರ್ಡರ್ ಎಂದು ಬರೆದುಕೊಂಡು ಅವರು ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಸೀನ್ ಜಸ್ಟಿನ್ ಅವರು ಕಾಲ್ನಡಿಗೆಯಲ್ಲಿ ಹೋಗುತ್ತಿರುವುದನ್ನು ನೋಡಬಹುದಾಗಿದೆ. ಇದರ ಜೊತೆಗೆ ಅವರು ಸ್ವಲ್ಪ ವಿವರಣೆಯನ್ನು ನೀಡಿದ್ದಾರೆ.
ಸೀನ್ ಜಸ್ಟಿನ್ ಅವರು ತಮ್ಮ ಟ್ವೀಟ್ ನಲ್ಲಿ, “ನಮ್ಮ ಕಾರನ್ನು ರಸ್ತೆ ಬದಿಯಲ್ಲಿ ಬಿಟ್ಟ ನಂತರ, ನಾನು ಮತ್ತು ನನ್ನ ಇಬ್ಬರು ಸಹೋದ್ಯೋಗಿಗಳು ಪೋಲಿಶ್ ಗಡಿಗೆ ಮೈಲುಗಳ ದೂರ ನಡೆದು ಬಂದೆವು. ರಸ್ತೆ ಬದಿಯಲ್ಲಿ ನಿಂತಿರುವ ಎಲ್ಲಾ ಕಾರುಗಳಲ್ಲಿ ಸಹಾ ಮಹಿಳೆಯರು ಮತ್ತು ಮಕ್ಕಳು ಇದ್ದರು. ಅದರಲ್ಲಿ ಬಹುತೇಕ ಯಾರ ಬಳಿಯೂ ಲಗ್ಗೇಜು ಇರಲಿಲ್ಲ. ಎಲ್ಲರ ಬಳಿ ಅವರ ಆಸ್ತಿ ಎಂದರೆ ಕೇವಲ ಕಾರು ಮಾತ್ರ” ಎಂದು ಬರೆದುಕೊಂಡು ಪರಿಸ್ಥಿತಿ ವಿವರಿಸಿದ್ದಾರೆ.