ಕಾಲಡಿಯಲ್ಲಿ ಭೀಕರ ಶಾರ್ಕ್, ಅಪಾಯಕಾರಿ ಸ್ಥಳದಲ್ಲಿ ಸನ್ನಿ ಲಿಯೋನಿ ಬಿಂದಾಸ್: ವೀಡಿಯೋ ವೈರಲ್

Entertainment Featured-Articles News Viral Video
79 Views

ಬಾಲಿವುಡ್ ಬ್ಯೂಟಿ, ಹಾಟ್ ಬೆಡಗಿ ಸನ್ನಿ ಲಿಯೋನಿ ತಮ್ಮ ಸಿನಿಮಾ, ಆಲ್ಬಂ ಕೆಲಸಗಳಿಂದ ಸಣ್ಣದೊಂದು ಬ್ರೇಕ್ ಪಡೆದು ಮಾಲ್ಡೀವ್ಸ್ ಗೆ ಹಾರಿದ್ದಾರೆ. ಸದ್ಯ ಮಾಲ್ಡೀವ್ಸ್ ನಲ್ಲಿ ಸನ್ನಿ ಅಲ್ಲಿನ ರಮ್ಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ. ರಜಾದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವ ಸನ್ನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮಾಲ್ಡೀವ್ಸ್ ನ ಸುಂದರ ತಾಣಗಳಲ್ಲಿ ತೆಗೆದುಕೊಂಡ ತನ್ನ ಅಂದವಾದ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದ್ದಾರೆ.

ಇನ್ನು ಮಾಲ್ಡೀವ್ಸ್ ನಲ್ಲಿ ಸನ್ನಿ ಶಾರ್ಕ್ ಗಳೊಂದಿಗೆ ಕಾಣಿಸಿಕೊಂಡ ಒಂದು ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗುತ್ತಾ ಸಾಗಿದೆ. ಸನ್ನಿ ಮಾಲ್ಡೀವ್ಸ್ ನ ಅದ್ಭುತ ಜಾಗವೊಂದರಲ್ಲಿ ಶಾರ್ಕ್ ಗಳು ಇರುವ ಕಡೆ ಕುಳಿತು ಮಾಡಿರುವ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸನ್ನಿ ಶೇರ್ ಮಾಡಿದ ಈ ವೀಡಿಯೋ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಮೆಚ್ಚುಗೆಗಳು ಹರಿದು ಬಂದಿವೆ.

ಸನ್ನಿ ಶೇರ್ ಮಾಡಿದ ಈ ವೀಡಿಯೋವನ್ನು ಸುಮಾರು 15 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬಂದಿದೆ. ಸನ್ನಿ ವಿಡಿಯೋ ಶೇರ್ ಮಾಡಿಕೊಂಡು, “ಈ ಜಾಗವನ್ನು ಪ್ರೀತಿಸುತ್ತೇನೆ!! ಸ್ವಚ್ಛಂದವಾಗಿರುವ ವನ್ಯ ಜೀವಿಗಳು” ಎಂದು ಬರೆದುಕೊಂಡಿದ್ದಾರೆ. ಸನ್ನಿಯ ವೀಡಿಯೋ ನೋಡಿ ಕೆಲವರು ವಾವ್ ಎಂದರೆ ಇನ್ನೂ ಕೆಲವರು ನೋಡಲು ಬಹಳ ಭ ಯ ವಾಗುತ್ತಿದೆ ಎಂದು ಪ್ರತಿಕ್ರಿಯೆ ಗಳನ್ನು ನೀಡಿದ್ದಾರೆ.

ಇನ್ನು ಮಾಲ್ಡೀವ್ಸ್ ನ ಬೀಚ್ ಗಳಲ್ಲಿ ಬಿಕಿನಿ ತೊಟ್ಟು, ಹಾಟ್ ಪೋಸ್ ಗಳನ್ನು ನೀಡಿರುವ ಸನ್ನಿ ಫೋಟೋಗಳು ಸಹಾ ಅಭಿಮಾನಿಗಳ ಮನಸ್ಸಿನಲ್ಲಿ ಕಿಚ್ಚು ಹೊತ್ತಿಸಿದೆ. ಸನ್ನಿ ಲಿಯೋನ್ ಕೆಲವು ದಿನಗಳ ಹಿಂದೆ ಮಧುಬನ್ ಮ್ಯೂಸಿಕ್ ಆಲ್ಬಂ ನಲ್ಲಿ ಕಾಣಿಸಿಕೊಂಡಿದ್ದರು. ಇದರ ಹಾಡಿನಲ್ಲಿ ಸನ್ನಿ ಅ ಶ್ಲೀ ಲ ನೃತ್ಯ ಮಾಡಿ ಧಾರ್ಮಿಕ ಭಾವನೆಗಳಿಗೆ ಧ ಕ್ಕೆ ಉಂಟು ಮಾಡಿದ್ದಾರೆ ಎನ್ನುವ ವಿ ವಾ ದಗಳು ಸಹ ಹುಟ್ಟಿಕೊಂಡು ದೊಡ್ಡ ಸುದ್ದಿಯಾಗಿತ್ತು.

Leave a Reply

Your email address will not be published. Required fields are marked *