ಕಾರ್ಣಿಕ ದೈವ ಕೊರಗಜ್ಜನ ಸನ್ನಿಧಾನಕ್ಕೆ ಹೋಗಿ, ಹರಕೆ ತೀರಿಸಿದ ಪ್ರೇಮ್-ರಕ್ಷಿತಾ ದಂಪತಿ
ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಣಿಕ ದೈವಗಳಿಗೆ ಅವುಗಳದ್ದೇ ಆದ ವಿಶೇಷತೆ ಹಾಗೂ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ. ಇಂತಹ ಕಾರ್ಣಿಕ ದೈವಗಳಲ್ಲಿ ಕೊರಗಜ್ಜ ಒಂದು ಪ್ರಮುಖವಾದ ದೈವವಾಗಿದೆ. ಈ ದೈವದ ಮೇಲೆ ಜನರಿಗೆ ಮಾತ್ರವೇ ಅಲ್ಲ, ಸೆಲೆಬ್ರಿಟಿಗಳು, ರಾಜಕಾರಣಿಗಳು ಹಾಗೂ ವಿಐಪಿ ಗಳು ಸಹಾ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ. ಬಹಳಷ್ಟು ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೊರಗಜ್ಜನಿಗೆ ಹರಕೆಯನ್ನು ಮಾಡಿಕೊಳ್ಳುವರು. ಇಷ್ಟಾರ್ಥ ತೀರಿದ ಮೇಲೆ ಹರಕೆಯನ್ನು ತೀರಿಸುವುದು ಸಹಾ ಸಂಪ್ರದಾಯವಾಗಿದೆ.
ಈಗ ಇಂತಹುದೇ ಒಂದು ಕಾರಣಕ್ಕೆ ಸ್ಯಾಂಡಲ್ವುಡ್ ನ ನಿರ್ದೇಶಕ ಪ್ರೇಮ್ ಹಾಗೂ ಅವರ ಪತ್ನಿ ನಟಿ ರಕ್ಷಿತಾ ಇಬ್ಬರೂ ಕೊರಗಜ್ಜನ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ, ಕೊರಗಜ್ಜನ ದರ್ಶನವನ್ನು ಮಾಡಿ, ಹರಕೆಯನ್ನು ತೀರಿಸಿ ಬಂದಿದ್ದಾರೆ ಎನ್ನಲಾಗಿದೆ. ಇಷ್ಟಾರ್ಥ ನೆರವೇರಿದ ಹಿನ್ನೆಲೆಯಲ್ಲಿ ರಕ್ಷಿತಾ ಹಾಗೂ ಪ್ರೇಮ್
ಮಂಗಳೂರಿನ ಬಳಿಯ ಕುತ್ತಾರು ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.
ಪ್ರೇಮ್ ಹಾಗೂ ರಕ್ಷಿತಾ ದಂಪತಿ ಬುಧವಾರದಂದು ಕೊರಗಜ್ಜನ ಸನ್ನಿಧಾನಕ್ಕೆ ಬೆಳ್ಳಿ ದೀಪ ಹಾಗೂ ಘಂಟೆಯನ್ನು ಕಾಣಿಕೆಯಾಗಿ ನೀಡಿ ತಮ್ಮ ಹರಕೆಯನ್ನು ತೀರಿಸಿದ್ದಾರೆ ಹಾಗೂ ಕೊರಗಜ್ಜನ ಕೃಪೆಯನ್ನು ಪಡೆದಿದ್ದಾರೆ. ಈ ಸನ್ನಿಧಾನಕ್ಕೆ ಬರುವ ಮೊದಲು ಅವರು ಪೊಳಲಿ ರಾಜರಾಜೇಶ್ವರಿ ದೇವಿ ಹಾಗೂ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಾನಕ್ಕೆ ಸಹಾ ಭೇಟಿ ನೀಡಿ ದೇವಿ ದರ್ಶನ ಮಾಡಿದ್ದಾರೆ.
ಪ್ರೇಮ್ ಹಾಗೂ ರಕ್ಷಿತಾ ದಂಪತಿಯ ಜೊತೆಗೆ ಸ್ಯಾಂಡಲ್ವುಡ್ ನ ನಟ ಕಿಶೋರ್ ಡಿ.ಕೆ ಹಾಗೂ ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿರುವಂತಹ ಧೀರಜ್ ನೀರುಮಾರ್ಗ, ಸೂರಜ್ ಪಾಂಡೇಶ್ವರ, ಬೆಂಗಳೂರಿನ ಖ್ಯಾತ ಕೊರಿಯೋಗ್ರಾಫರ್ ರಾಹುಲ್ ಅವರು ಕೂಡಾ ಇದ್ದರು ಎನ್ನಲಾಗಿದೆ.