ಕಾರು,ಕುದುರೆ ಅಲ್ಲ ಬದಲಿಗೆ JCB ಹತ್ತಿ ಮದುವೆ ಮನೆಗೆ ಬಂದ ವರ: ಮುಂದೇನಾಯ್ತು? ವೈರಲ್ ವೀಡಿಯೋ!!

Entertainment Featured-Articles News Viral Video
71 Views

ಇತ್ತೀಚಿಗೆ ಮದುವೆ ಸೀಸನ್ ಆರಂಭವಾಗಿದೆ. ಮದುವೆಗಳ ಸೀಸನ್ ನ ಸಂಭ್ರಮ ಕೂಡಾ ಜನರಲ್ಲಿ ತುಂಬಿದೆ. ಇನ್ನು ಮದುವೆ ಸೀಸನ್ ಬಂದಿದ್ದೇ ತಡ ಅದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಮದುವೆ ಮಂಟಪಗಳು, ಮದುವೆ ಕಾರ್ಯಕ್ರಮಗಳಲ್ಲಿ ನಡೆಯುವ ಕೆಲವು ಘಟನೆಗಳ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತವೆ. ಮದುವೆ ಮನೆಗಳಲ್ಲಿ ನಡೆಯುವ ಹಾಸ್ಯ ಸನ್ನಿವೇಶಗಳು, ವಧು ವರರ ನಡುವೆ ನಡಯುವ ಮಾತು ಕಥೆಗಳು ಹೀಗೆ ವೈವಿದ್ಯಮಯ ವೀಡಿಯೋಗಳು ವೈರಲ್ ಆಗುವ ಮೂಲಕ ಜನರ ಗಮನವನ್ನು ಸೆಳೆಯುತ್ತದೆ.

ಪ್ರಸ್ತುತ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ವೈರಲ್ ಆಗುತ್ತಾ ಸಾಗಿದ್ದು, ಇದರಲ್ಲಿ ಮದುವೆ ಗಂಡು ಮದುವೆಗಾಗಿ ಬಂದ ರೀತಿಯನ್ನು ನೋಡಿ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ವೀಡಿಯೋ ಬಹಳಷ್ಟು ಜನರ ಮೆಚ್ಚುಗೆಯನ್ನು ಸಹಾ ಪಡೆದುಕೊಂಡಿದೆ. ವೀಡಿಯೋದಲ್ಲಿರುವ ವ್ಯಕ್ತಿಯು ಖಂಡಿತ ಮದುವೆಗಾಗಿ ಒಂದು ಸಾಹಸವನ್ನೇ ಮಾಡಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಹಾಗಾದರೆ ಈ ಘಟನೆಯಾದರೂ ಏನು ಎಂದು ತಿಳಿಯೋಣ ಬನ್ನಿ.

ಮೀಡಿಯಾ ವರದಿಗಳ ಪ್ರಕಾರ, ಈ ಘಟನೆಯು ಭಾನುವಾರ ಗಿರಿಪಾರ್ ಕ್ಷೇತ್ರದಲ್ಲಿ ಸಂಗರಾಹ ಎನ್ನುವ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಮದುವೆ ದಿಬ್ಬಣವು ಸಂಗರಾಹದಿಂದ ರತ್ವಾ ಹಳ್ಳಿಯ ಕಡೆಗೆ ಹೊರಟಿತ್ತು. ಆದರೆ ಈ ನಡುವೆ ಭಾರೀ ಹಿಮಪಾತವಾದ ಕಾರಣದಿಂದ ಮದುವೆ ದಿಬ್ಬಣವು ದಲ್ಯಾನಿ ಎನ್ನುವ ಸ್ಥಳದವರೆಗೂ ಮಾತ್ರವೇ ಹೋಗಲು ಸಾಧ್ಯವಾಗಿದೆ. ಅಲ್ಲಿಂದ ಮುಂದೆ ಹೋಗುವುದು ಆ ಸಮಯದಲ್ಲಿ ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೆಲ್ಲಾ ನೋಡಿದ ಮೇಲೆ ವರನ ತಂದೆ ಮುಂದೆ ಹೋಗುವುದಕ್ಕಾಗಿ ಜೆಸಿಬಿ ಯನ್ನು ವ್ಯವಸ್ಥೆ ಮಾಡಿದ್ದಾರೆ. ಆಗ ವರ ಜೆಸಿಬಿ ಯಲ್ಲಿ ಕುಳಿತು ಸುಮಾರು 30 ಕಿಮೀ ವರೆಗೂ ಪಯಣವನ್ನು ಮಾಡಿದ್ದಾರೆ. ಮದುವೆ ಗಂಡು ವಿಜಯ್ ಪ್ರಕಾಶ್, ಅವರ ಸಹೋದರ ಸುರೇಂದ್ರ ಮತ್ತು ವರನ ತಂದೆ ಜಗತ್ ಸಿಂಗ್ ಹಾಗೂ ಫೋಟೋಗ್ರಾಫರ್ ನಾಲ್ವರು ಜೊತೆಯಾಗಿ ಕುಳಿತು ರತ್ವಾ ಹಳ್ಳಿಯ ವರೆಗೆ ತಲುಪಿದ್ದಾರೆ. ಅನಂತರ ಮದುವೆಯ ಎಲ್ಲಾ ಶಾಸ್ತ್ರ, ಸಂಪ್ರದಾಯಗಳನ್ನು ನೆರವೇರಿಸಲಾಗಿದೆ.

ಮದುವೆಯ ಮುಹೂರ್ತ ಬೆಳಿಗ್ಗೆ ಎಂಟು ಗಂಟೆಗೆ ನಿರ್ಧರಿತವಾಗಿತ್ತು. ಆದರೆ ರಸ್ತೆಯಲ್ಲಿ ಉಂಟಾದ ಭಾರೀ ಹಿಮಪಾತದಿಂದಾಗಿ ಮದುವೆಗೆ ಮುಹೂರ್ತದ ಸಮಯಕ್ಕೆ ತಲುಪುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಕೆಲವು ಕಡೆಗಳಲ್ಲಿ ಅವರು ಕಾಲ್ನಡಿಗೆಯಲ್ಲಿ ಹೋಗಬೇಕಾಯಿತು. ಒಟ್ಟಾರೆ ಎರಡು ಗಂಟೆಗಳ ಸಮಯದಲ್ಲಿ ಕ್ರಮಿಸಬೇಕಾದ ದೂರಕ್ಕೆ ಬರೋಬ್ಬರಿ 12 ಗಂಟೆಗಳ ಅವಧಿಯಲ್ಲಿ ಕ್ರಮಿಸಿ, ಮದುವೆಯ ಮನೆಗೆ ತಲುಪಿದ್ದಾರೆ ವಿಜಯ್ ಪ್ರಕಾಶ್.

Leave a Reply

Your email address will not be published. Required fields are marked *