ಕಾಮಿಡಿ ಕಿಲಾಡಿ ಶೋ ಸ್ಕ್ರಿಪ್ಟ್ ರೈಟರ್ ನಿಧನ: ಕಂಬನಿ ಮಿಡಿದು ಪೋಸ್ಟ್ ಹಾಕಿದ ನವರಸನಾಯಕ ಜಗ್ಗೇಶ್

Written by Soma Shekar

Published on:

---Join Our Channel---

ಝೀ ಕನ್ನಡ ವಾಹಿನಿಯು ಕನ್ನಡ ಕಿರುತೆರೆಯ ಲೋಕದಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡು, ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡುತ್ತಿರುವ ಖಾಸಗಿ ವಾಹಿನಿಯಾಗಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುವ ಹಲವು ರಿಯಾಲಿಟಿ ಶೋ ಗಳಲ್ಲಿ ಹಾಸ್ಯಕ್ಕೆ ಪ್ರಾಧಾನ್ಯತೆಯನ್ನು ನೀಡುವ ಕಾಮಿಡಿ ಕಿಲಾಡಿಗಳು ಸಹಾ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈಗಾಗಲೇ ನಾಡಿನ ಮೂಲೆ ಮೂಲೆಯಲ್ಲಿ ಸಹಾ ಜನ ಮನ್ನಣೆಯನ್ನು ಪಡೆದುಕೊಂಡಿರುವಂತಹ ಶೋ ಆಗಿ ಮನೆ ಮನೆ ಮಾತಾಗಿದೆ.

ಈ ಜನಪ್ರಿಯ ರಿಯಾಲಿಟಿ ಶೋ ನಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸವನ್ನು ಮಾಡುತ್ತಿದ್ದಂತಹ ಮಿಳ್ಳೆ ಮೋಹನ್ ಅವರು ನಿಧನರಾಗಿದ್ದಾರೆ. ಇವರಿಗೆ ಇನ್ನೂ ಕೇವಲ 27 ವರ್ಷ ವಯಸ್ಸು ಎನ್ನಲಾಗಿದೆ. ಕಾಮಿಡಿ ಕಿಲಾಡಿಗಳು ಶೋ ನ ಜಡ್ಜ್ ಗಳಲ್ಲಿ ಒಬ್ಬರಾಗಿರುವ ಹಿರಿಯ ನಟ, ನವರಸನಾಯಕ ಖ್ಯಾತಿಯ ಜಗ್ಗೇಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಿಳ್ಳೆ ಮೋಹನ್ ಅವರ ನಿಧನಕ್ಕೆ ಮರುಗಿದ್ದು, ಟ್ವಿಟರ್ ನಲ್ಲಿ ಅವರು ಪೋಸ್ಟ್ ಒಂದನ್ನು ಹಾಕುವ ಮೂಲಕ ಕಂಬನಿ ಮಿಡಿದಿದ್ದಾರೆ.

ಜಗ್ಗೇಶ್ ಅವರು ತಮ್ಮ ಪೋಸ್ಟ್ ನಲ್ಲಿ, ನಗುವಿಗೆ ಇವನ ಕೆಲ ಬರಹದ ನಾಟಕದ ಕೊಡಿಗೆಯು ಕಾರಣ.. ಬಂಗಾರದದಂತ ಯುವಕ ಕೇವಲ 27ವರ್ಷಕ್ಕೆ ಯಮ ಇವನಿಗೆ ಪಾಶ ಹಾಕಿ ಕರೆದೋಯ್ದ!ಬಾಳಿ ಬದುಕಬೇಕಿದ್ದ ಈ ಕಂದನಿಗೆ ಈ ಸಾವು ನ್ಯಾಯವೆ.. ಇವನ ಅಗಲಿಕೆ ದುಃಖ ಬರಿಣಸುವ ಶಕ್ತಿ ರಾಯರು ಇವನ ತಂದೆತಾಯಿಗೆ ನೀಡಲಿ.. ಓಂ ಶಾಂತಿ ಸಧ್ಘತಿ ಎಂದು ಬರೆದುಕೊಂಡಿದ್ದಾರೆ. ಅಗಲಿದ ಸಾಹಿತಿಗೆ ಅವರು ನುಡಿ ನಮನವನ್ನು ಅರ್ಪಿಸಿದ್ದಾರೆ.

Leave a Comment