ಕಾಫಿ ವಿತ್ ಕರಣ್ ನಲ್ಲಿ ಸಮಂತಾ: KGF ಹೆಸರು ಹೇಳಿ ಕರಣ್ ಗೆ ಟಾಂಗ್ ಕೊಟ್ಟ ಸೌತ್ ಬ್ಯೂಟಿ ಸಮಂತಾ!!

0 1

ಹಿಂದಿಯ ಜನಪ್ರಿಯ ಸೆಲೆಬ್ರಿಟಿ ಚಾಟ್ ಶೋ ಕಾಫಿ ವಿತ್ ಕರಣ್ ಗೆ ದಿನಗಣನೆ‌ ಆರಂಭವಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಈ ಶೋ ನ ಹೊಸ ಆವೃತ್ತಿಯ ಪ್ರೊಮೋ ಬಿಡುಗಡೆ ಆಗಿ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಇನ್ನು ಈ ಬಾರಿ ಕರಣ್ ಜೋಹರ್ ನಿರೂಪಣೆಯ ಈ ಬಹು ನಿರೀಕ್ಷಿತ ಶೋ ಟಿವಿ ಬದಲಾಗಿ ಓಟಿಟಿ ದೈ ತ್ಯ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗಲಿರುವುದು ಮತ್ತೊಂದು ವಿಶೇಷವಾಗಿದೆ. ಶೋ ನ ಅಭಿಮಾನಿಗಳು ಮತ್ತು ಪ್ರೇಕ್ಷಕರು ಈ ಬಾರಿ ಶೋ ಗೆ ಯಾವೆಲ್ಲಾ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸಲಿದ್ದಾರೆಂದು ತಿಳಿಯುವುದಕ್ಕೆ ಕಾತರರಾಗಿ ಕಾಯುತ್ತಿದ್ದರು.

ಪ್ರೇಕ್ಷಕರು ಹಾಗೂ ಅಭಿಮಾನಿಗಳ ಈ ಕಾತರತೆ ಹಾಗೂ ನಿರೀಕ್ಷೆಗಳಿಗೆ ಶನಿವಾರ ತೆರೆ ಬಿದ್ದಿದೆ. ಕರಣ್ ಜೋಹರ್ ನಿರೂಪಣೆಯಲ್ಲಿ ಮೂಡಿ ಬರಲಿರುವ ಕಾಫಿ ವಿತ್ ಕರಣ್ ನ ಸೀಸನ್ ಏಳರ ಟ್ರೈಲರ್ ಬಿಡುಗಡೆ ಆಗಿದೆ. ಈಗ ಬಿಡುಗಡೆಯಾದ ಟ್ರೈಲರ್ ನಲ್ಲಿ ಪ್ರಮುಖ ಆಕರ್ಷಣೆಯಾಗಿ ಕಂಡಿರುವುದು ದಕ್ಷಿಣದ ಸ್ಟಾರ್ ನಟಿ, ಅಂದಗಾತಿ ಸಮಂತಾ ಆಗಿದ್ದಾರೆ. ನಟಿ ಸಮಂತಾ ಕರಣ್ ಶೋ ಗೆ ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಜೊತೆಯಲ್ಲಿ ಎಂಟ್ರಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣದ ತಾರೆಯರಿಗೆ ಕಾಫಿ ವಿತ್ ಕರಣ್ ಶೋ ಗೆ ಆಹ್ವಾನ ನೀಡಲಾಗಿದೆ.

ಈ ಶೋ ನಲ್ಲಿ ಸಮಂತಾ ಹೇಳಿದ ಡೈಲಾಗ್ ಒಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗಿದೆ. ಸಮಂತಾ ಮಾತನಾಡುತ್ತಾ, ಅಸಂತೋಷದ ಮದುವೆಗೆ ನೀವೇ ಕಾರಣ, ನೀವು ಕೆ3ಜಿ ಅಂದ್ರೆ ಕಭೀ ಖುಷಿ ಕಭೀ ಗಮ್ ಎಂದು ಹೇಳಿದ್ದೀರಿ, ಆದರೆ ರಿಯಾಲಿಟಿ ಏನೆಂದರೆ ಅದು ಅದು ಕೆಜಿಎಫ್ ಎಂದು ಸಮಂತಾ ಕರಣ್ ಜೋಹರ್ ಗೆ ಟಾಂಗ್ ನೀಡಿದ್ದಾರೆ‌. ಸಮಂತಾ ಹೇಳಿದ ಈ ಡೈಲಾಗ್ ಈಗ ವೈರಲ್ ಆಗಿದ್ದು, ಸಮಂತಾ ಅಭಿಮಾನಿಗಳ ಮೆಚ್ಚುಗೆ ಹರಿದು ಬಂದಿದೆ.

ಇದೇ ವೇಳೆ ಸಮಂತಾ ನಟ ಅಕ್ಷಯ್ ಕುಮಾರ್ ಅವರ ಜೊತೆ ಕಾಣಿಸಿಕೊಂಡಿರುವುದು ಸಹಾ ಅಚ್ಚರಿ ಯನ್ನು ಮೂಡಿಸಿದೆ. ಟ್ರೈಲರ್ ನಲ್ಲಿ ತೋರಿಸಿರುವ ಹಾಗೆ ಈ ಬಾರಿ ಶೋ ಗೆ ಆಲಿಯಾ ಭಟ್, ರಣವೀರ್ ಸಿಂಗ್, ಅನನ್ಯಾ ಪಾಂಡೆ, ಶಾಹೀದ್ ಕಪೂರ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್, ವರುಣ್ ಧವನ್, ವಿಜಯ ದೇವರಕೊಂಡ, ಟೈಗರ್ ಶ್ರಾಫ್, ಜಾನ್ವಿ ಕಪೂರ್, ಕೃತಿ ಸೆನೋನ್ ಅತಿಥಿಗಳಾಗಿ ಬರುವುದು ಪಕ್ಕಾ ಆಗಿದೆ. ಈ ಬಾರಿ ಕಾಫಿ ವಿತ್ ಕರಣ್ ಶೋ ಯಾವ ಮಟ್ಟಕ್ಕೆ ಜನಪ್ರಿಯತೆ ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.