ಕಾನೂನಿನ ಮಾತಾಡಿದ ಸ್ನೇಹಾಳನ್ನು ಕಾನೂನಿನ ಮೂಲಕವೇ ಕಟ್ಟಿ ಹಾಕ್ತಾಳಾ ರಾಜೇಶ್ವರಿ? ಪುಟ್ಟಕ್ಕನ ಮಕ್ಕಳಲ್ಲಿ ರೋಚಕ ತಿರುವು

0 6

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳು ಅಥವಾ ಟಾಪ್ ಸೀರಿಯಲ್ ಗಳಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಸೀರಿಯಲ್ ಗಳಲ್ಲಿ ಬಹುತೇಕ ರೋಚಕ ತಿರುವುಗಳು ಕಾಣಿಸಿಕೊಂಡಿದೆ. ಪ್ರೇಕ್ಷಕರಿಗೆ ಈ ಹೊಸ ಹೊಸ ತಿರುವುಗಳು ಸಾಕಷ್ಟು ಕುತೂಹಲ ಮೂಡಿಸಿರುವ ಜೊತೆಗೆ ಭರ್ಜರಿ ಮನರಂಜನೆಯನ್ನು ಸಹಾ ನೀಡುತ್ತಿದೆ. ಆರಂಭದಿಂದಲೇ ಜನಪ್ರಿಯತೆಯ ವಿಚಾರದಲ್ಲಿ ಸಾಕಷ್ಟು ಸದ್ದು ಸುದ್ದಿಯನ್ನು ಮಾಡಿರುವ ಸೀರಿಯಲ್ ಹಿರಿಯ ನಟಿ ಉಮಾಶ್ರೀ ಅವರ ಅಭಿನಯದ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಈ ಧಾರಾವಾಹಿಯು ಈಗಾಗಲೇ ಕಿರುತೆರೆಯ ಪ್ರೇಕ್ಷಕರ ಅಪಾರವಾದ ಅಭಿಮಾನವನ್ನು ಗಳಿಸಿದೆ.

ದಿನದಿಂದ ದಿನಕ್ಕೆ ರೋಚಕತೆಯ ಘಟ್ಟವನ್ನು ತಲುಪುತ್ತಿರುವ ಸೀರಿಯಲ್ ನ ವಿವಿಧ ಆಯಾಮಗಳು ಗಮನ ಸೆಳೆದಿವೆ. ಸವತಿಯ ದ್ವೇ ಷ ದಿಂದ ನಲುಗುತ್ತಾ ಮೂರು ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತ ಪುಟ್ಟಕ್ಕ, ಬಂಗಾರಮ್ಮನ ಗತ್ತು, ಗಮ್ಮತ್ತು, ಹೇಗಾದರೂ ಪುಟ್ಟಕ್ಕನ ಬಾಳನ್ನು ನ ರಕ ಮಾಡಲು ಕುತಂತ್ರಗಳನ್ನು ಮಾಡುವ ರಾಜೇಶ್ವರಿ, ಸ್ನೇಹಳ ಪ್ರೀತಿಗಾಗಿ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿ, ಅವರ ಕುಟುಂಬಕ್ಕೆ ಕಣ್ಣಿಗೆ ಕಾಣದ ಹಾಗೆ ನೆರವು ನೀಡುವ ಕಂಠಿ ಹೀಗೆ ಒಂದೊಂದು ಪಾತ್ರವೂ ವಿಶೇಷವಾಗಿ ಗಮನವನ್ನು ಸೆಳೆದಿದೆ.

ಪುಟ್ಟಕ್ಕನ ಮನೆ ಹಾಗೂ ಮೆಸ್ ಅನ್ನು ಅವರಿಂದ ಕಸಿದುಕೊಳ್ಳಲು ರಾಜೇಶ್ವರಿ ಮಾಡಿದ ಕುತಂತ್ರವು ಆಕೆಗೆ ತಿರುಗು ಬಾಣವಾಗಿ, ಪಂಚಾಯತಿಯಲ್ಲಿ ಪುಟ್ಟಕ್ಕನ ಕಾಲು ಹಿಡಿದ ರಾಜೇಶ್ವರಿಗೆ ಪುಟ್ಟಕ್ಕನ ಮೇಲೆ ಸಿಟ್ಟು ದುಪ್ಪಟ್ಟಾಗಿದೆ. ಅದರ ಫಲ ಎನ್ನುವಂತೆ ತಮ್ಮ ಕಾಳಿಯ ಜೊತೆ ಸೇರಿ ಪುಟ್ಟಕ್ಕನ ಮೆಸ್ ನ ಹತ್ತಿರವೇ ವೈನ್ ಶಾಪ್ ಒಂದನ್ನು ತೆರೆಸಿದ್ದಾಳೆ ರಾಜೇಶ್ವರಿ. ಈ ವೈನ್ ಶಾಪ್ ನಿಂದ ಕುಡಿದು ಬಂದ ಒಬ್ಬನು ಮೆಸ್ ನಲ್ಲಿ ಮಾಡಿದ ತರಲೆ ಕೆಲಸದಿಂದ ಪುಟ್ಟಕ್ಕನ ಮಗಳು ಸ್ನೇಹ ಕೆಂಡಾಮಂಡಲವಾಗಿದ್ದಾಳೆ.

ಸ್ನೇಹ ಕಾಳಿಯನ್ನು ಹೊರಗೆ ಎಳೆದು, ಕಾನೂನಿನ ಸೆಕ್ಷನ್ ಗಳ ಬಗ್ಗೆ ಹೇಳುತ್ತಾ, ವೈನ್ ಶಾಪ್ ಗೆ ಬೀಗ ಹಾಕಿಸಿದ್ದಾಳೆ. ಆಗ ಅಲ್ಲಿಂದ ಮನೆಗೆ ಹೋದ ಕಾಳಿ ತನ್ನ ಅಕ್ಕನನ್ನು ಕರೆದುಕೊಂಡು ಪುಟ್ಟಕ್ಕನ ಮನೆಯ ಹತ್ತಿರಕ್ಕೆ ಕರೆ ತಂದಿದ್ದಾನೆ. ಈ ವೇಳೆ ರಾಜೇಶ್ವರಿ ಸ್ನೇಹಾ ಕೋಪಕ್ಕೆ, ಅವಳ ಆವೇಶಕ್ಕೆ ಬ್ರೇಕ್ ಹಾಕಲು, ತನ್ನ ವೈನ್ ಶಾಪ್ ಮುಚ್ಚಿಸಲು ಸಾಧ್ಯವೇ ಇಲ್ಲ ಎನ್ನುವಂತೆ ವಾದಕ್ಕೆ ಇಳಿದಿದ್ದಾಳೆ. ಅಲ್ಲದೇ ಸ್ನೇಹಾಳಿಂದ ಏನು ಮಾಡೋಕಾಗಲ್ಲ ಎನ್ನುವ ಸವಾಲನ್ನು ಹಾಕುವಂತಹ ದಾಖಲೆಯೊಂದಿಗೆ ಬಂದಿದ್ದಾಳೆ.

ಹೌದು, ರಾಜೇಶ್ವರಿ ವೈನ್ ಶಾಪ್ ತೆರೆಯಲು ಸರ್ಕಾರದ ಕಡೆಯಿಂದ ತಾನು ಪಡೆದಿರುವ ಅಧಿಕೃತ ಪರವಾನಗಿ ಪತ್ರವನ್ನು ಸ್ನೇಹ ಕೈಗೆ ನೀಡಿದ್ದು, ಅದನ್ನು ಸರಿಯಾಗಿ ನೋಡು, ಕಾನೂನಿನ ಬಗ್ಗೆ ಮಾತಾಡಿದ್ದ ಸ್ನೇಹಾಳಿಗೆ ಕಾನೂನಿನ ಮೂಲಕವೇ ರಾಜೇಶ್ವರಿ ಏಟಿಗೆ ತಿರುಗೇಟು ನೀಡಲು ಮುಂದಾಗಿದ್ದು, ಸರ್ಕಾರದ ಪರವಾನಗಿ ಇರುವಾಗ, ವೈನ್ ಶಾಪ್ ಮುಚ್ಚಿಸೋಕೆ ನೀನು ಯಾರು ಎನ್ನುವ ಸವಾಲು ಹಾಕಿದ್ದಾಳೆ. ಇನ್ನು ಸ್ನೇಹ ಮುಂದಿನ ನಡೆ ಏನಾಗಲಿದೆ? ಎನ್ನುವುದು ಈಗ ಕುತೂಹಲ ಕೆರಳಿಸಿದೆ.

ವಾಹಿನಿ ಈಗಾಗಲೇ ಪ್ರೊಮೋ ಹಂಚಿಕೊಂಡಿದ್ದು, ಸ್ನೇಹಾಳನ್ನು ಕಾನೂನಿನ ಮೂಲಕ ಕಟ್ಟಿ ಹಾಕಲು ಬಂದಿರುವ ರಾಜೇಶ್ವರಿ ದರ್ಪದಿಂದ ಆಡುವ ಮಾತುಗಳು ನೋಡಬಹುದಾಗಿದೆ. ದೂರದಿಂದ ಕಂಠಿ ಎಲ್ಲವನ್ನೂ ನಿಂತು ನೋಡಿದ್ದಾನೆ. ಒಟ್ಟಾರೆ ರಾಜೇಶ್ವರಿ ಹಾಗೂ ಆಕೆಯ ತಮ್ಮನ ವೈನ್ ಶಾಪ್ ಏನಾಗಲಿದೆ? ಸ್ನೇಹ ಅದನ್ನು ಮುಚ್ಚಿಸಲು ಏನು ಮಾಡ್ತಾಳೆ? ಈ ವಿಚಾರದಲ್ಲಿ ಸಹಾ ಕಂಠಿ ಪ್ರವೇಶ ಆಗುತ್ತಾ? ಎಲ್ಲದಕ್ಕೂ ಉತ್ತರವನ್ನು ಸೀರಿಯಲ್ ನೀಡಬೇಕಾಗಿದೆ.

Leave A Reply

Your email address will not be published.