ಬಾಲಕೃಷ್ಣ ಜೊತೆ ನಟಿಸಲು ಭಾರೀ ಸಂಭಾವನೆ ಕೇಳಿದ ನಟಿ: ಕಾಜಲ್ ಅಗರ್ವಾಲ್ ಬೇಡಿಕೆಗೆ ಬೆಚ್ಚಿದ ಟಾಲಿವುಡ್

Entertainment Featured-Articles Movies News
35 Views

ನಂದಮೂರಿ ಬಾಲಕೃಷ್ಣ(Nandamuri Balakrishna) ಇತ್ತೀಚಿಗಷ್ಟೇ ತಮ್ಮ ವೀರ ಸಿಂಹಾ ರೆಡ್ಡಿ(Veera Simha Reddy) ಸಿನಿಮಾದ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್  ಪಡೆದುಕೊಂಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಿದ್ದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿತ್ತು. ಈ ಸಿನಿಮಾದಲ್ಲಿ ಕನ್ನಡ ನಟ ದುನಿಯಾ ವಿಜಯ್ (Duniya Vijay) ಅವರು ಸಹಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಸಿನಿಮಾಗಳ ಯಶಸ್ಸು ಮತ್ತೊಂದು ಕಡೆ ಓ ಟಿ ಟಿ ಯಲ್ಲಿ ಆಗುತ್ತಿರುವ ಸೆಲೆಬ್ರಿಟಿ ಟಾಕ್ ಶೋ ಮೂಲಕ ಮತ್ತೊಂದು ಗೆಲುವನ್ನು ಪಡೆದಿರುವ ನಟ ಬಾಲಕೃಷ್ಣ ಈಗ ತಮ್ಮ ಮುಂದಿನ ಸಿನಿಮಾದ ಕಡೆಗೆ ಗಮನಹರಿಸಿದ್ದಾರೆ.

ತೆಲುಗಿನ ಜನಪ್ರಿಯ ನಿರ್ದೇಶಕ ಅನಿಲ್ ರಾವಿಪೂಡಿ (Anil Ravipudi) ನಿರ್ದೇಶನ ಮಾಡುತ್ತಿರುವ ಎನ್‌ಬಿಕೆ 108(NBK 108) ವರ್ಕಿಂಗ್ ಟೈಟಲ್ ನಲ್ಲಿ ಸಿನಿಮಾ ಪ್ರಾರಂಭವಾಗಿದೆ. ಈ ಸಿನಿಮಾದಲ್ಲಿ ಬಾಲಕೃಷ್ಣ ಅವರ ಮಗಳ ಪಾತ್ರದಲ್ಲಿ ಕನ್ನಡ ನಟಿ, ಈಗಾಗಲೇ ತೆಲುಗಿನಲ್ಲಿ ಸದ್ದು ಮಾಡುತ್ತಿರುವ ನಟಿ ಶ್ರೀ ಲೀಲಾ(Sri Leela) ನಟಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದು, ಈ ಸಿನಿಮಾ ಪ್ರಕಟಣೆ ಆದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಬಾಲಕೃಷ್ಣ ಅವರಿಗೆ ತೆಲುಗಿನ ಸ್ಟಾರ್ ನಟಿ ಕಾಜಲ್ ಅಗರ್ವಾಲ್(Kajal Agarwal) ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ನಟಿ ಕೂಡಾ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಈಗ ನಟಿ ಈ ಸಿನಿಮಾಕ್ಕಾಗಿ ಪಡೆಯುತ್ತಿರುವ ದೊಡ್ಡ ಮೊತ್ತದ ಸಂಭಾವನೆಯ(Kajal Agrawal Remuneration) ವಿಷಯ ಸಖತ್ ಸುದ್ದಿಯಾಗಿದೆ. ಹೌದು, ಮದುವೆಯ ನಂತರ ಸಿನಿಮಾ ಗಳಿಂದ ಬ್ರೇಕ್ ಪಡೆದಿದ್ದ ನಟಿ ಕಾಜಲ್ ಅಗರ್ವಾಲ್, ಮಗುವಿನ ಜನನದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಇದೀಗ ಮತ್ತೊಮ್ಮೆ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಚಿತ್ರರಂಗಕ್ಕೆ ರೀ ಎಂಟ್ರಿ ನೀಡಿರುವ ನಟಿ ತಾನು ಮೊದಲು ಯಾವ ರೇಂಜ್ ನಲ್ಲಿ ಸಂಭಾವನೆ ಪಡೆಯುತ್ತಿದ್ದರೋ ಈಗಲೂ ಅದೇ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಹೊರ ಬಂದಿರುವ ಸುದ್ದಿಗಳ ಪ್ರಕಾರ ಕಾಜಲ್ ಅಗರ್ವಾಲ್(Kajal Agrawal) ಈ ಸಿನಿಮಾದಲ್ಲಿ ನಟಿಸಲು ಸುಮಾರು ಎರಡು ಕೋಟಿಗಿಂತಲೂ ಅಧಿಕ ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಬಹು ದಿನಗಳ ನಂತರ ಕಮ್ ಬ್ಯಾಕ್ ಮಾಡಿದರೂ ನಟಿಯ ಬೇಡಿಕೆ ಮಾತ್ರ ಸಿನಿಮಾ ರಂಗದಲ್ಲಿ ಇನ್ನು ಕಡಿಮೆಯಾಗಿಲ್ಲ ಎನ್ನುವುದಕ್ಕೆ ನಟಿಯ ಸಂಭಾವನೆಯ ಬೇಡಿಕೆಯು ಸಾಕ್ಷಿಯಾಗಿದೆ. ಕಾಜಲ್ ಅಗರವಾಲ್ ಅವರು ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್ ನಿರ್ದೇಶನದ ಕಮಲಹಾಸನ್(Kamal Hasan)  ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಇಂಡಿಯನ್ 2(Indian 2) ಸಿನಿಮಾದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

Leave a Reply

Your email address will not be published. Required fields are marked *