ಕಾಕತಾಳೀಯವೋ, ದುರಾದೃಷ್ಟವೋ ಆದ್ರೆ ಈ ಮೂವರ ವಿಷಯದಲ್ಲಿ ದಿಗ್ಭ್ರಮೆಗೆ ಕಾರಣ ಈ ಒಂದು ವಿಷಯ

Written by Soma Shekar

Published on:

---Join Our Channel---

ಕನ್ನಡ ಚಿತ್ರರಂಗಕ್ಕೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಎನ್ನುವ ಹಾಗೆ ಕಳೆದ ಎರಡು ವರ್ಷಗಳಲ್ಲಿ ಕನ್ನಡ ಸಿನಿ ರಂಗ ಮೂರು ಜನ ಕಲಾವಿದರನ್ನು ಕಳೆದುಕೊಂಡಿದೆ. ಈ ಮೂವರು ನಟರ ಸಾವು ಕೂಡಾ ಅನಿರೀಕ್ಷಿತ ಹಾಗೂ ಆಘಾತಕಾರಿ. ಅದರಲ್ಲೂ ನಾಡು ಮೆಚ್ಚಿದ, ನಾಡು ಕಂಡ ಸಹೃದಯವಂತ ನಟ ಪುನೀತ್ ರಾಜ್‍ಕುಮಾರ್ ಅವರ ಸಾವು ಮಾತ್ರ ತೀವ್ರ ವಾದ ನೋವನ್ನು ಉಳಿಸಿ ಹೋಗಿದೆ. ಮಾಸದ ವೇದನೆಯನ್ನು ಮೂಡಿಸಿದೆ. ಮನಸ್ಸು ಪುನೀತ್ ರಾಜ್‍ಕುಮಾರ್ ಅವರ ಹೆಸರು ಕೇಳಿದರೆ ಭಾರವಾಗುವಂತೆ ಮಾಡಿದೆ. ನಾಡು ಯುವರತ್ನನ ಕಳೆದುಕೊಂಡು ಮೌನಕ್ಕೆ ಜಾರಿದೆ.

ಪುನೀತ್ ಅವರ ನಿಧನಕ್ಕೂ ಮುನ್ನ ಕೆಲವೇ ತಿಂಗಳುಗಳ ಹಿಂದೆ ರಾಷ್ಟ್ರ ಪ್ರಶಸ್ತಿ ವಿಜೇತ, ಅಪ್ಪಟ ಕಲಾವಿದ ಸಂಚಾರಿ ವಿಜಯ್ ಅವರು ಇಹಲೋಕ ತ್ಯಜಿಸಿದಾಗಲೂ ಕನ್ನಡ ಸಿನಿ ಪ್ರೇಮಿಗಳು ಭಾರವಾದ ಮನಸ್ಸಿನಿಂದ ಅವರನ್ನು ಬೀಳ್ಕೊಟ್ಟರು. ಇನ್ನು ಅದಕ್ಕಿಂತ ಮೊದಲು ಯುವ ನಟ ಚಿರಂಜೀವಿ ಸರ್ಜಾ ಅವರ ಅನಿರೀಕ್ಷಿತ ಸಾವು ಕೂಡಾ ಲಾಕ್ ಡೌನ್ ಅವಧಿಯಲ್ಲಿ ಅಭಿಮಾನಿಗಳ ಮೇಲೆ ಬರಸಿಡಿಲಿನ ಹಾಗೆ ಬಡಿದಿತ್ತು‌. ಹೀಗೆ ಒಂದು ನೋವನ್ನು ಮರೆಯುವ ವೇಳೆಗೆ ಇನ್ನೊಂದು ಎನ್ನುವಂತೆ ಅನಿರೀಕ್ಷಿತ ಅ ವ ಘಡ ಗಳು ನಡೆದಿವೆ.

ಇನ್ನು ಇವೆಲ್ಲವುಗಳ ಮಧ್ಯೆ ಇದು ಕಾಕತಾಳೀಯವೋ, ದುರಾದೃಷ್ಟವೋ ಎನ್ನುವಂತಹ ಹೊಸ ವಿಷಯ ವೈರಲ್ ಆಗಿದೆ. ಹೌದು ಪುನೀತ್ ರಾಜ್‍ಕುಮಾರ್, ಚಿರಂಜೀವಿ ಸರ್ಜಾ ಮತ್ತು ಸಂಚಾರಿ ವಿಜಯ್ ಅವರ ಜನ್ಮ ದಿನಾಂಕ ಒಂದೇ ಆಗಿದೆ. ವರ್ಷ ಹಾಗೂ ತಿಂಗಳು ಬೇರೆಯಾಗಿದೆ ಆದರೆ ದಿನಾಂಕ ಮಾತ್ರ ಅದೇ ಆಗಿದೆ. ಹೌದು ಪುನೀತ್ ಅವರು ಮಾರ್ಚ್ 17, 1975 ರಂದು, ಚಿರಂಜೀವಿ ಸರ್ಜಾ ಅವರು ಅಕ್ಟೋಬರ್ 17, 1984 ಮತ್ತು ಸಂಚಾರಿ ವಿಜಯ್ ಅವರು ಜುಲೈ 17, 1983 ರಲ್ಲಿ ಜನಿಸಿದ್ದಾರೆ. ಮೂವರ ಜನ್ಮದಿನಾಂಕವೂ ಒಂದೇ ಎಂದು ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ.

Leave a Comment