HomeEntertainmentಕಾಂತಾರ 2 ಗೆ ಶುರುವಾಯ್ತು ಸಿದ್ಧತೆ: ದೈವದ ಒಪ್ಪಿಗೆ ಸಿಕ್ಕಿತು, ಸಿನಿಮಾ ತೆರೆಗೆ ಯಾವಾಗ? ಉತ್ತರ...

ಕಾಂತಾರ 2 ಗೆ ಶುರುವಾಯ್ತು ಸಿದ್ಧತೆ: ದೈವದ ಒಪ್ಪಿಗೆ ಸಿಕ್ಕಿತು, ಸಿನಿಮಾ ತೆರೆಗೆ ಯಾವಾಗ? ಉತ್ತರ ಕೊಟ್ಟ ನಿರ್ಮಾಪಕ

ರಿಷಬ್ ಶೆಟ್ಟಿ(Rishab Shetty) ನಟನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ಕಾಂತಾರ(Kanthara) ಸಿನಿಮಾ ಬಹಳ ದೊಡ್ಡ ಯಶಸ್ಸನ್ನು ಪಡೆದ ನಂತರ ಸಹಜವಾಗಿಯೇ ಕಾಂತಾರ 2 (Kanthara 2) ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿತ್ತು. ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಕೂಡಾ ಅಂತಹುದೊಂದು ಸುಳಿವನ್ನು ಕೊಟ್ಟಿತ್ತು. ಮಾದ್ಯಮಗಳಲ್ಲಿ ಕಾಂತಾರ 2 ಕುರಿತಂತೆ ಒಂದಷ್ಟು ಚರ್ಚೆಗಳು ನಡೆದವು. ಆದರೆ ರಿಷಬ್ ಶೆಟ್ಟಿ ಅವರು ಮಾತ್ರ ಇನ್ನೂ ಆ ಕುರಿತಾಗಿ ಯೋಚಿಸಿಲ್ಲ ಎನ್ನುವ ಮಾತೊಂದನ್ನು ಸಹಾ ಹೇಳಿದ್ದರು. ಆದರೆ ಅವರು ಕಾಂತಾರ 2(Kanthara 2) ಬಗ್ಗೆ ಸ್ಪಷ್ಟವಾಗಿ ಯಾವುದೇ ಅಧಿಕೃತ ಮಾತನ್ನು ಅವರು ಹೇಳಿರಲಿಲ್ಲ.

ಈಗ ಇವೆಲ್ಲವುಗಳ ನಂತರ ನಿರ್ಮಾಪಕ ವಿಜಯ ಕಿರಂಗದೂರು(Vijay Kirangadur) ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಕಾಂತಾರ 2 ಸಿನಿಮಾ ಬಗ್ಗೆ ಮಾಹಿತಿಯನ್ನು ನೀಡಿರುವ ಅವರು ಸಿನಿಮಾ ಶೂಟಿಂಗ್ ಪ್ರಾರಂಭದ ದಿನಾಂಕವನ್ನು ಸಹಾ ಘೋಷಣೆ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇದೇ ವೇಳೆ ಅವರು ರಿಷಬ್ ಶೆಟ್ಟಿ(Rishab Shetty) ಮತ್ತು ಅವರ ತಂಡ ಕಥೆಯನ್ನು ಸಿದ್ಧಪಡಿಸಲು ತೊಡಗಿರುವುದಾಗಿ ಸಹಾ ಹೇಳಿದ್ದು, ಚಿತ್ರೀಕರಣದ ಸ್ಥಳ ಕ್ಕಾಗಿ ಕಾಡು ಮೇಡು ಅಲೆದಾಡುತ್ತಿರುವ ಬಗ್ಗೆಯೂ ಹೇಳುವ ಮೂಲಕ ಕಾಂತಾರ 2 ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವಿಜಯ್ ಕಿರಂಗದೂರು ಅವರು ನೀಡಿರುವ ಮಾಹಿತಿಯ ಪ್ರಕಾರ ಕಾಂತಾರ 2(Kantahara 2) ಸಿನಿಮಾದ ಚಿತ್ರೀಕರಣ ಈ ವರ್ಚ ಜೂನ್ ನಿಂದ ಆರಂಭವಾಗಲಿದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ಗೆ ತೆರೆಗೆ ಬರಲಿದೆ ಎಂದು ಹೇಳಿದ್ದಾರೆ. ಈ ಬಾರಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಚಿತ್ರೀಕರಣ ಪ್ರಾರಂಭಿಸಲಾಗುವುದು. ಕಾಂತಾರ ಸಿನಿಮಾ ಮಾಡುವಾಗ ಹಲವು ತೊಂದರೆಗಳನ್ನು ಎದುರಿಸಬೇಕಾಯಿತು. ಅದರಿಂದ ಬಜೆಟ್ ಸಹಾ ಹೆಚ್ಚಾಯಿತು. ಆದರೆ ಈ ಬಾರಿ ಎಲ್ಲಾ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ.

- Advertisment -