ಕಾಂಡೋಮ್ ಜಾಹೀರಾತಲ್ಲಿ ಜನಪ್ರಿಯ ನಟಿ: ಆದ್ರೆ ನೆಟ್ಟಿಗರು ಕೇಳಿದ ಪ್ರಶ್ನೆಗೆ ಎಲ್ಲರೂ ಶಾಕ್ !!

Entertainment Featured-Articles News Viral Video

ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ, ಜನಪ್ರಿಯ ನಟಿ ನಿಧಿ ಅಗರ್ವಾಲ್ ತಮ್ಮ ಹಾಟ್ ಹಾಟ್ ಫೋಟೋ ಗಳ ಕಾರಣದಿಂದಾಗಿಯೇ ಸದ್ದು ಮಾಡುತ್ತಾ ಇರುತ್ತಾರೆ. ಕೆಲ ಸಮಯದ ಹಿಂದೆ ಕ್ರಿಕೆಟ್ ಆಟಗಾರ ರಾಹುಲ್ ಜೊತೆ ನಟಿ ಸುತ್ತುತ್ತಿದ್ದಾರೆ ಎನ್ನುವ ವಿಷಯವಾಗಿ ನಟಿ ಸಾಕಷ್ಟು ಸುದ್ದಿಯಾಗಿದ್ದರು. ಈಗ ನಟಿ ಮತ್ತೊಮ್ಮೆ ಸುದ್ದಿಯಾಗಿರುವುದು ಮಾತ್ರವೇ ಅಲ್ಲದೇ ಟ್ರೋಲಿಗರ ಪಾಲಿಗೆ ಭರ್ಜರಿ ಕಂಟೆಂಟ್ ಅನ್ನು ಒದಗಿಸಿದ್ದಾರೆ. ಇಷ್ಟಕ್ಕೂ ನಟಿ ಈಗ ಸುದ್ದಿಯಾಗಿರುವುದು ಯಾವ ವಿಷಯಕ್ಕೆ ಅಂತೀರಾ? ಅದು ಕಾಂ ಡೋ ಮ್ ವಿಷಯಕ್ಕೆ.

ಹೌದು, ನೀವು ಓದಿದ್ದು ನಿಜ. ನಟಿ ನಿಧಿ ಅಗರ್ವಾಲ್ ಈಗ ಕಾಂ ಡೋ ಮ್ ವಿಷಯದಿಂದ ಭರ್ಜರಿ ಸುದ್ದಿಯಾಗಿದ್ದಾರೆ. ನಟಿ ನಿಧಿ ಅಗರ್ವಾಲ್ ಒಂದು ಹೊಸ ಕಾಂ ಡೋ ಮ್ ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ವೀಡಿಯೋವನ್ನು ನಟಿ ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ನಟಿ ಕಾಂ ಡೋ ಮ್ ಬಗ್ಗೆ ಮತ್ತು ಸೆ ಕ್ಸ್ ನ ವಿಚಾರವಾಗಿ ಒಂದಷ್ಟು ಮಾತುಗಳನ್ನು ಆಡಿದ್ದಾರೆ. ನಟಿ ಆಡಿದ ಮಾತುಗಳೇ ಈಗ ಅವರ ಟ್ರೋಲ್ ಗೆ ಕಾರಣವಾಗಿದೆ.

ಕಾಂ ಡೋ ಮ್ ಬಳಕೆ ಮಾಡಿದರೆ ಲೈಂ ಗಿ ಕತೆಯ ಪರಾಕಾಷ್ಠೆಯ ಉತ್ತುಂಗಕ್ಕೆ ಏರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದು ಈ ಜಾಹೀರಾತಿನ ಸಾರಾಂಶವಾಗಿದೆ. ಇದನ್ನೇ ನಟಿಯು ವೀಡಿಯೋದಲ್ಲಿ ಹೇಳಿದ್ದಾರೆ. ನಟಿ ಜಾಹೀರಾತಿನಲ್ಲಿ ಹೀಗೆ ಹೇಳಿದ್ದೇ ಈಗ ಚಿತ್ರ ವಿಚಿತ್ರವಾದ ಪ್ರತಿಕ್ರಿಯೆಗಳು ಹರಿದು ಬರಲು ಆರಂಭಿಸಿದೆ. ವೀಡಿಯೋ ನೋಡಿದ ಮೇಲೆ ಅನೇಕರು, ಇದೇನು ನಿಮ್ಮ ಸ್ವಂತ ಅನುಭವಾನಾ? ಎಂದು ಕೇಳಿ ನಟಿಯ ಕಾಲೆಳೆಯುವ ಕೆಲಸವನ್ನು ಮಾಡಿದ್ದಾರೆ.‌

ಇನ್ನೂ ಮುಂದೆ ಹೋದ ನೆಟ್ಟಿಗರು, ನಿಮಗಿನ್ನೂ ಮದುವೆ ಕೂಡಾ ಆಗಿಲ್ಲವಲ್ಲ, ನಿಮಗೆ ಅದು ಹೇಗೆ ಈ ವಿಷಯ ತಿಳಿಯೋದಿಕ್ಕೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವು ಅಭಿಮಾನಿಗಳು ದಯವಿಟ್ಟು ಇಂತಹ ಜಾಹೀರಾತುಗಳಲ್ಲಿ ಮಾಡಬೇಡಿ ಎಂದು ಅಭಿಮಾನ ನಟಿಗೆ ಸಲಹೆಗಳನ್ನು ನೀಡಿದ್ದರೆ, ಮತ್ತೆ ಕೆಲವರು ಇದರಲ್ಲಿ ಮುಜುಗರ ಪಡುವಂತದ್ದು ಏನೆಲ್ಲ ವೆಂದು ನಟಿಗೆ ಬೆಂಬಲವನ್ನು ನೀಡುವ ಕೆಲಸವನ್ನು ಮಾಡಿದ್ದಾರೆ. ಒಟ್ಟಾರೆ ಖುದ್ದು ನಟಿಯೂ ಸಹಾ ಇಂತಹುದೊಂದು ಪ್ರತಿಕ್ರಿಯೆಗಳನ್ನು ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ.

Leave a Reply

Your email address will not be published.